ಉಚಿತ ಆಹಾರ ಕಿಟ್ ವಿತರಣೆ

ಧಾರವಾಡ ಮೇ.29-: ಲಾಯನ್ಸ ಕ್ಲಬ್ ಧಾರವಾಡ ಗ್ಯಾಲಕ್ಸಿ ವತಿಯಿಂದ ಮಲಬಾರ ಗೋಲ್ಡ್ ಹಾಗೂ ಇನ್ನರ್ ವ್ಹಿಲ್ ಕ್ಲಬ್ ಧಾರವಾಡ ವತಿಯಿಂದ ಅರ್ಚಕರು, ಪೂಜಾರಿಗಳು ಹಾಗೂ ಪುರೋಹಿತರಿಗೆ ಉಚಿತ ಆಹಾರ ಕಿಟ್, ಸ್ಯಾನಿಟೈಸರ ಹಾಗೂ ಮಾಸ್ಕ, ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಲಾಯನ್ಸ ಕ್ಲಬ್ ಧಾರವಾಡ ಗ್ಯಾಲಕ್ಸಿ ಅಧ್ಯಕ್ಷರಾದ ಡಾ. ಎಮ್. ಎ. ಮುಮ್ಮಿಗಟ್ಟಿ ಕಾರ್ಯದರ್ಶಿ ಲಾಯನ್ ರತಿ ಶ್ರಿನಿವಾಸನ, ಲಾಯನ್ ನಾಗರಾಜ ಜಿ. ಹಾಗೂ ಲಾಯನ ಜ್ಯೋತಿ ಹಿರೇಮಠ ಹಾಗೂ ಮಲಬಾರ ಗೊಲ್ಡ್‍ದ ಇರಫಾನ ಹಾಗೂ ನಿಯಾಜ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಮಲಬಾರ ಗೋಲ್ಡ್ ವತಿಯಿಂದ 200 ಉಚಿತ ಆಹಾರ ಕಿಟ್ ದೇಣಿಗೆ ನೀಡಿದ್ದು , ನಮ್ಮ ಲಾಯನ್ಸ ಕ್ಲಬ್ ಸಹಯೋಗದೊಂದಿಗೆ 50 ಜನ ವಿಕಲಚೇತನರಿಗೆ, 70 ಜನ ಅಟೋ ಡ್ರಾಯವರ್ಸಗಳಿಗೆ, 60 ಜನ ಬಡ ಜನರಿಗೆ ಹಾಗೂ 20 ಜನ ಅರ್ಚಕರು, ಪೂಜಾರಿಗಳು ಹಾಗೂ ಪುರೋಹಿತರಿಗೆ ನೀಡಲಾಯಿತು.
ಲಾಯನ್ಸ ಕ್ಲಬ್ ಧಾರವಾಡ ಗ್ಯಾಲಕ್ಸಿ ಅಧ್ಯಕ್ಷರಾದ ಡಾ|| ಎಮ್. ಎ. ಮುಮ್ಮಿಗಟ್ಟಿ ಮಾತನಾಡುತ್ತಾ ಅರ್ಚಕರು, ಪೂಜಾರಿಗಳು ಹಾಗೂ ಪುರೋಹಿತರಿಗೆ ಉಚಿತ ಆಹಾರ ಕಿಟ್, ಮಾಸ್ಕ, ಹ್ಯಾಂಡ್ ಗ್ಲಾಸ್, ವಿತರಣೆ ಬಹಳ ಸಂತಸ ವ್ಯಕ್ತವಾಗುತ್ತಿದೆ. ಏಕೆಂದರೆ ಅರ್ಚಕರು, ಪೂಜಾರಿಗಳು ಹಾಗೂ ಪುರೋಹಿತರಿಗೆ ಇವರಿಗೆ ನಾವು ಎಷ್ಟು ಸಾಮಗ್ರಿಗಳು ಕೊಟ್ಟರು ಸಾಲದು. ಇವರಿಂದ ಸಹಾಯ ಮಾಡಿ ಎಂದು ಕೇಳಿಕೊಂಡಾಗ ನಾವೆಲ್ಲ ಲಾಯನ್ಸ ಸದಸ್ಯರು ಕೂಡಿಕೊಂಡು ಇವರಿಗೆ ಸಹಾಯ ಮಾಡಬೇಕೆಂದು ತಿರ್ಮಾನಿಸಿ ಇವರೆಲ್ಲರಿಗೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನು ಮಾಡಲು ಪ್ರಯತ್ನ ಮಾಡಿದ್ದೇವೆ. ಅವರ ಜೊತೆ ಲಾಯನ್ಸ ಕ್ಲಬ್ ಇವರ ಜೊತೆ ಇದ್ದೇವೆ ಎಂದು ಅವರಿಗೆ ಭರವಸೆ ನೀಡಿದರು. ಆದಷ್ಟು ಬೇಗ ಸರಕಾರ ಇವರಿಗೆ ಈ ಕಷ್ಟ ಕಾಲದಲ್ಲಿ ಸಹಾಯ ನೀಡಿ ಅವರಿಗೆ ಪ್ರೋತ್ಸಾಹವನ್ನು ನೀಡಿಬೇಕೆಂದು ವಿನಂತಿಸಿಕೊಂಡರು.
ಲಾಯನ್ಸ ಕ್ಲಬ್ ಧಾರವಾಡ ಗ್ಯಾಲಕ್ಸಿ ಕಾರ್ಯದರ್ಶಿ ಲಾಯನ್ ರತಿ ಶ್ರಿನಿವಾಸನ ಮಾತನಾಡುತ್ತಾ ಅರ್ಚಕರು, ಪೂಜಾರಿಗಳು ಹಾಗೂ ಪುರೋಹಿತರಿಗೆ ಉಚಿತ ಆಹಾರ ಕಿಟ್, ಮಾಸ್ಕ, ಹ್ಯಾಂಡ್ ಗ್ಲಾಸ್, ವಿತರಣೆ ಮಾಡಿ ಅಲ್ಪ ಸೇವೆಯನ್ನು ಮಾಡಿದ್ದೇವೆ. ಇವರು ಮಾಡುವ ಕಾರ್ಯ ಶ್ಲಾಂಘನೀಯ ನಾವು ಯಾವತ್ತು ಇವರ ಜೊತೆ ಇರುತ್ತೇವೆ ಎಂದು ಧೈರ್ಯ ತುಂಬಿದರು.