
ಮಾನ್ವಿ,ಮಾ.೨೭- ತಾಲೂಕಿನ ಪೋತ್ನಾಳ ಗ್ರಾಮದಲ್ಲಿನ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಇಲಾಖೆ, ಲಯನ್ಸ್ ಕ್ಲಬ್ ಮಾನವಿ ಮತ್ತು ಬೆಟ್ಟದೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ರಾಯಚೂರು ಸಂಯುಕ್ತಾಶ್ರಯದಲ್ಲಿ ನಡೆದ ಉಚಿತ ಹೃದಯ ರೋಗ ತಪಾಸಣಾ ಶಿಬಿರವನ್ನು ಬೆಟ್ಟದೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ರೋಗ ತಜ್ಞಾರಾದ ಡಾ.ಸಕಲೇಶ ಪಾಟೀಲ್ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಅಧಿಕ ರಕ್ತದೊತ್ತಡ ಹೊಂದಿದವರು, ಮಧುಮೇಹಿಗಳು, ಅತಿಯಾದ ಬೊಜ್ಜು , ಅಧಿಕ ಕೊಲೆಸ್ಟ್ರಾಲ್ ಉಳ್ಳವರು, ತಂಬಾಕು ಸೇವನೆ, ಧೂಮಪಾನ ಅಭ್ಯಾಸಿಗಳು, ಪಾದಗಳ ಊತ, ಅತಿಯಾದ ಸುಸ್ತು ,ಆಯಾಸ ಇವು ಹೃದಯದ ಕಾಯಿಲೆಯ ಲಕ್ಷಣಗಳಾಗಿದ್ದು ತಜ್ಞ ವೈದ್ಯರ ಸಲಹೆಯನ್ನು ಪಡೆದು ಚಿಕಿತ್ಸೆಯನ್ನು ಪಡೆದಲ್ಲಿ ಜೀವಹಾನಿಯನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಮಾನವಿ ಅಧ್ಯಕ್ಷರಾದ ಡಾ.ಚಂದ್ರಶೇಖರಯ್ಯಸ್ವಾಮಿ ಸುವರ್ಣಗಿರಿ ಮಠ ಮಾತನಾಡಿ ಸಾರ್ವಜನಿಕರ ಉಉತ್ತಮ ಆರೋಗ್ಯಕ್ಕಾಗಿ ತಜ್ಞ ವೈದ್ಯರಿಂದ ಶಿಬಿರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು ಶಿಬಿರದ ಪ್ರಯೋಜನವನ್ನು ಪಡೆಯುವಂತೆ ತಿಳಿಸಿದರು.
ಶಿಬರದಲ್ಲಿ ೧೦೦ಕ್ಕೂ ಹೆಚ್ಚು ರೋಗಿಗಳಿಗೆ ಆರೋಗ್ಯ ತಪಾಸಣೆ ಹಾಗೂ ಇ.ಸಿ.ಜಿ.ಎಕೋ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಅಮರೇಶ ಪಾಟೀಲ್.ಡಾ. ರಾಜೇಂದ್ರ ಬೆನಕನಾಳ,ಡಾ,ಸಂದೇಶ ಪಾಟೀಲ್,ರಾಮಾಂಜನೇಯ್ಯ ಶೆಟ್ಟಿ,ಬಸವರಾಜ, ದೇವೇಂದ್ರಪ್ಪ, ಶರಣಬಸವ ಸಾಹುಕಾರ್, ಈರಣ್ಣ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪನಾಯಕ, ಗ್ರಾಮದ ಮುಖಂಡರಾದ ವೀರನಗೌಡ ವಕೀಲರು,ಎಂ.ಮಲ್ಲಿಕಾರ್ಜುನಗೌಡ, ಚನ್ನಯ್ಯಸ್ವಾಮಿ,ಆಶೋಕ ತಡಕಲ್, ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.