ಉಚಿತ ಆರೋಗ್ಯ ಶಿಬಿರ: ಲಿಂ.ವೈಜನಾಥ್ ಪಾಟೀಲರ ಕನಸು ಇಂದು ನನಸಾಗಿದೆ

ಚಿಂಚೋಳಿ,ಮಾ.21- ಇಲ್ಲಿನ ಹಾರಕೂಡ ಶ್ರೀ ಚನ್ನಬಸವ ಶಿವಯೋಗಿಗಳ 70ನೇ ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ವೈಜನಾಥ ಪಾಟೀಲ್ ಸ್ಮರಣಾರ್ಥ ಕೇತಕಿ ಸಂಗಮೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಹಾರಕೂಡ ಡಾ. ಚನ್ನವೀರ ಶಿವಾಚಾರ್ಯರು ಅವರು ಚಾಲನೆ ನೀಡಿದರು..
ನಂತರ ಮಾತನಾಡಿದ ಪೂಜ್ಯರು, ದಿವಂಗತ ವೈಜನಾಥ್ ಪಾಟೀಲ ಅವರ ಕನಸು ಇಂದು ನನಸಾಗಿದೆ ತಾಲೂಕಿನ ಜನರಿಗಾಗಿ ಉಚಿತ ಆರೋಗ್ಯ ಶಿಬಿರವನ್ನು ಇಟ್ಟುಕೊಂಡಿದ್ದು ಅವರ ತಂದೆಯವರ ಮಾರ್ಗದಲ್ಲಿ ಡಾ. ವಿಕ್ರಮ ಪಾಟೀಲ ಮತ್ತು ಗೌತಮ ಪಾಟೀಲ ಹಾಗೂ. ಡಾ. ಬಸವೇಶ.ವೈ. ಪಾಟೀಲ. ಇವರು ತಮ್ಮ ತಂದೆಯವರು ಹಾಕಿಕೊಟ್ಟಿರುವ ಸಮಾಜ ಸೇವೆಯನ್ನು ಮುಂದುವರೆಸಿದ್ದಾರೆ ಎಂದರು.
ತಾಲೂಕಿನಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಮಾಡಿ ತಾಲೂಕಿನ ಜನರಿಗೆ ಒಳ್ಳೆಯ ಒಳ್ಳೆ ಕೊಡುಗೆಯನ್ನು ನೀಡಿದೆ ಮುಂಬರುವ ದಿನಗಳಲ್ಲಿ ಚಿಂಚೋಳಿಯ ಕೇತಕಿ ಸಂಗಮೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಮತ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಹಾರಕೂಡ ಶ್ರೀಗಳು ವೈಜನಾಥ್ ಪಾಟೀಲ್ ಅವರು ಪುತ್ರರಿಗೆ ಸನ್ಮಾನಿಸಿದರು ಕಾರ್ಯಕ್ರಮದಲ್ಲಿ. ಜ್ಞಾನೇಶ್ವರಿ ವೈಜನಾಥ ಪಾಟೀಲ. ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ರಾಮಚಂದ್ರ ಜಾಧವ. ಎಂಎಸ್‍ಐಎಲ್ ಮಾಜಿ ಅಧ್ಯಕ್ಷರಾದ ಡಾ. ವಿಕ್ರಮ ಪಾಟೀಲ. ಬಿಜೆಪಿ ಮುಖಂಡರಾದ ಅರುಣ ಪವಾರ. ಕಲಬುರ್ಗಿ ಜಿಲ್ಲಾ ಆರೋಗ್ಯ ಇಲಾಖೆಯ ಜಿಲ್ಲಾಧಿಕಾರಿಗಳಾದ ಡಾ. ರಾಜಶೇಖರ ಮಲಿ. ಚಿಂಚೋಳಿಯ ಪುರಸಭೆ ಅಧ್ಯಕ್ಷರಾದ ಜಗದೇವಿ ಶಂಕರರಾವ ಗಡಂತಿ. ಡಾ. ಶಿವರಾಜ ಸಜ್ಜನಶೆಟ್ಟಿ. ಕಲಬುರ್ಗಿ ಜಿಲ್ಲಾ ಪಂಚಾಯತ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೌತಮ ಪಾಟೀಲ. ಕೇತಕಿ ಸಂಗಮೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಸವೇಶ.ವೈ. ಪಾಟೀಲ. ಉಮೇಶ ಪಾಟೀಲ. ತಾಲೂಕ ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ.ಮಹಮ್ಮದ್ ಗಫಾರ. ಡಾ. ಸಂತೋಷ್ ಪಾಟೀಲ. ಚಿಂಚೋಳಿಯ ಹಿರಿಯ ಮುಖಂಡರಾದ ಅಶೋಕ ಪಾಟೀಲ. ಕಾಂಗ್ರೆಸ್ ಪಕ್ಷದ ಮುಖಂಡರಾದ ಮಧುಸೂದನ್ ರೆಡ್ಡಿ ಕಲ್ಲೂರ್. ಪ್ರಭುಲಿಂಗ ಲೇಡಿ. ಕೆ.ಎಂ. ಬಾರಿ. ಅಬ್ದುಲ್ ಬಾಸಿದ. ಜಗನಾಥ ಗುತ್ತೇದಾರ. ಚಿತ್ರ ಶೇಖರ್ ಪಾಟೀಲ. ಬಿಜೆಪಿ ಪಕ್ಷದ ತಾಲೂಕ ಅಧ್ಯಕ್ಷರಾದ ಸಂತೋಷ ಗಡಂತಿ. ಭೀಮಶೆಟ್ಟಿ ಮುರುಡ. ಶ್ರೀಮಂತ ಕಟ್ಟಿಮನಿ. ಶಾಂತವೀರ ಹಿರಾಪುರ. ಸಂತೋಷ್ ರೆಡ್ಡಿ. ಅಪ್ಪಣ್ಣ ಹಾರಕೂಡ. ಕಾರ್ಯಕ್ರಮ ಶಿಬಿರದಲ್ಲಿ ಹೃದಯ ರೋಗದ ತಜ್ಞರು ಕಲಬುರ್ಗಿ ಜಯದೇವ ಆಸ್ಪತ್ರೆ ಡಾ. ವೀರೇಶ ಪಾಟೀಲ. ಹೃದಯ ರೋಗದ ತಜ್ಞರಾದ ಬೆಂಗಳೂರಿನ ನಾರಾಯಣ ಹೃದಯಾಲಯದ ಡಾ. ಬಸವರಾಜ. ಬೆಂಗಳೂರಿನ ನಾರಾಯಣ ಕ್ಯಾನ್ಸಲ್ ತಜ್ಞರಾದ ಡಾ. ಜಯಂತ ಬಾಗ9ವ. ಕಲಬುರ್ಗಿ ಚಿರಾಯು ಆಸ್ಪತ್ರೆಯ ಮೂತ್ರಪಿಂಡ ತಜ್ಞರಾದ ಡಾ. ಮಂಜುನಾಥ. ಮೂಳೆ ತಜ್ಞರಾದ ಡಾ. ಮಂಜುನಾಥ ಜಾಪಟ್ಟಿ. ಶಸ್ತ್ರಚಿಕಿತ್ಸೆಯ ತಜ್ಞರಾದ ಡಾ. ಅಂಬರೀಶ್ ಬಿರಾದಾರ. ಮಹಿಳೆ ತಜ್ಞರಾದ ಡಾ. ಸಂಜನಾ ತಲ್ಲೂರ್. ಮಕ್ಕಳ ತಜ್ಞರಾದ ಡಾ. ಅರುಣ ತಲ್ಲೂರ್. ಮಕ್ಕಳ ಶಸ್ತ್ರ ಚಿಕಿತ್ಸೆಯ ತಜ್ಞರಾದ ಡಾ. ಶರಣು ಗುಬ್ಬಿ ಹಾಗೂ ಚಂದನಕೇರಾ ಶ್ರೀಗಳು ಸೇರಿದಂತೆ ಗಣ್ಯಮಾನ್ಯರು, ಪೂಜ್ಯರು ಪಾಲ್ಗೊಂಡಿದ್ದರು.