ಉಚಿತ ಆರೋಗ್ಯ ತಪಾಸಣೆ ಶಿಬಿರ

ಹುಬ್ಬಳ್ಳಿ, ನ16: ವಿಶ್ವ ಮಧುಮೇಹ ದಿನದ ಅಂಗವಾಗಿ ರೋಟರಿ ಕ್ಲಬ್ ನವನಗರ, ವೀರಸಂಗೋಳ್ಳಿ ರಾಯಣ್ಣ ಹಿತಅಭಿವೃದ್ಧಿ ಸಂಘ, ಹುಬ್ಬಳ್ಳಿ ಇವರ ಸಹಯೋಗದಲ್ಲಿ ಕಣ್ಣು, ಏಲುಬು ಮತ್ತು ಕೀಲು, ಸಾಂದ್ರತೆ, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹಲ್ಲು ತಪಾಸಣೆ ಶಿಬಿರವನ್ನು ವೀರಸಂಗೋಳ್ಳಿ ರಾಯಣ್ಣ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಬದಲಾದ ಜೀವನ ಶೈಲಿ, ದೈಹಿಕ ಶ್ರಮ ಇಲ್ಲದಿರುವುದು, ಸರಿಯಾದ ಆಹಾರ ಕ್ರಮ, ಇದಲ್ಲದೆ ವಂಶವಾಹಿನಿಯಿಂದಲೂ ಮಧುಮೇಹ ಬರುವುದು ಸ್ವಾಭಾವಿಕ. ಮಧುಮೇಹ ನಿಯಂತ್ರಣಕ್ಕೆ ಆರೋಗ್ಯಕರ ಜೀವನಶೈಲಿ ಬಹಳ ಮುಖ್ಯವಾಗಿರುತ್ತದೆ. ಯೋಗ , ನಿಯಮಿತ ವ್ಯಾಯಾಮ, ವೈದ್ಯರ ಸಲಹೆಯಂತೆ ಔಷಧ ಸೇವನೆ ಹಾಗೂ ನಿಯಮಿತ ಆರೋಗ್ಯ ತಪಾಸಣೆಯಿಂದ ಮಧುಮೇಹ ನಿಯಂತ್ರಣ ತರಬಹುದು ಎಂದು ಖ್ಯಾತ ವೈದ್ಯ ರೋಟೇರಿಯನ್ ಡಾ. ವಿಶ್ವನಾಥ ಹುಲಸೋಗಿ ಹೇಳಿದರು.
ನವನಗರ ರೋಟರಿ ಕ್ಲಬ್ ಕಳೆದ 40 ವರ್ಷಗಳಿಂದ ಶೈಕ್ಷಣಿಕವಾಗಿ ಹಾಗೂ ಆರೋಗ್ಯಕ್ಕೆ ಸಂಬಂದಪಟ್ಟಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ನವನಗರ ಕ್ಯಾನ್ಸರ ಆಸ್ಪತ್ರೆಯಲ್ಲಿ ರಕ್ತಭಂಡಾರ ಕೇಂದ್ರವನ್ನು ಹೊಂದಿದೆ. ಸ್ವಚ್ಛತೆ, ಸಸಿನೆಡುವ ಕಾರ್ಯಕ್ರಮ, ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಿ ಈಗ 2ನೇ ಬಾರಿಗೆ ವೀರಸಂಗೋಳ್ಳಿ ರಾಯಣ್ಣ ನಗರದಲ್ಲಿ ರೋಟರಿ ಕ್ಲಬ್‍ನ ನುರಿತ ವೈದ್ಯರಾದ ಡಾ. ವಿಶ್ವನಾಥ ಹು¯ಸೋಗಿ, ಡಾ. ಸಂತೋಷ ಹನುಮರಟ್ಟಿ, ಡಾ. ರವಿ ಮಾಳವದಕರ, ಡಾ. ಶ್ವೇತಾಶ್ರೀ ಇವರಿಂದ ವಿವಿಧ ಕಾಯಿಲೆಗಳ ತಪಾಸಣೆ ಮತ್ತು ಡಾ. ಎಮ್.ಎಮ್. ಜೋಶಿ ಕಣ್ಣಿನ ಆಸ್ಪತ್ರೆ ಇವರ ಸಹಯೋಗದಿಂದ ಉಚಿತ ಕಣ್ಣು ತಪಾಸಣೆ ಕಾರ್ಯಕ್ರಮದ ಸದುಪಯೋಗವನ್ನು ಬಡಾವಣೆಯ ನಿವಾಸಿಗಳು ಪಡೆದುಕೊಳ್ಳಬೇಕೆಂದು ನವನಗರ ರೋಟರಿ ಕ್ಲಬ ಅಧ್ಯಕ್ಷರಾದ ನರೇಂದ್ರ ಕುಲಕರ್ಣಿ ವಿನಂತಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಸಂಗೋಳ್ಳಿ ರಾಯಣ್ಣ ಹಿತಾಭಿವೃದ್ಧಿ ಅಧ್ಯಕ್ಷರಾದ ಯು.ಆರ್.ಪೀರಣ್ಣವರ ವಹಿಸಿದ್ದರು. ಭಾರತ ಸರಕಾರದ ನಿವೃತ್ತ ಏರ್ ಕಮಾಂಡರ ರೋಟೇರಿಯನ್ ಸಿ.ಎಸ್. ಹವಾಲ್ದಾರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ನವನಗರ ರೋಟರಿ ಕ್ಲಬ ಕಾರ್ಯದರ್ಶಿ ಡಾ. ವಿಶ್ವಾಸ ಕುಲಕರ್ಣಿ, ಮಲ್ಲಪ್ಪ ಸೂರಗೊಂಡ, ಬಿಂದು ದೇಸಾಯಿ, ಗಿರಿಶ ಬಮ್ಮನಳ್ಳಿ, ರವೀಂದ್ರ ರಿತ್ತಿ, ಆರ್.ವಿ. ಕುಲಕರ್ಣಿ, ಎಮ್.ಆರ್.ಸೇಠ, ಪಿ.ಎಸ್. ಆಲೂರ, ಕೆ.ಆರ್. ಕೃಷ್ಣ ಶೆಟ್ಟಿ, ಅನಂತ ಉಮರ್ಜಿ, ಸಂತೋಷ ಬೇವೂರ, ಮಹೇಶ ಕಾಳೆ, ನಾಗರಾಜ ಗೌಡರ, ಸಂಜಯ ಮಾಳವದಕರ ಮುಂತಾದವರು ಉಪಸ್ಥಿತರಿದ್ದರು.