ಉಚಿತ ಆರೋಗ್ಯ ತಪಾಸಣೆ ಶಿಬಿರ

ಆನೇಕಲ್. ಡಿ. ೧೦- ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಾಪುರ ಗ್ರಾಮದಲ್ಲಿರುವ ಗುರುಕುಲ ಇಂಟರ್ ನ್ಯಾಷನಲ್ ವಿದ್ಯಾಸಂಸ್ಥೆ ಆವರಣದಲ್ಲಿ ಪಿ.ಇ.ಎಸ್. ವಿಶ್ವ ವಿದ್ಯಾಲಯ ಆಸ್ಪತ್ತೆ ಮತ್ತು ಹೆನ್ನಾಗರ ಗ್ರಾಮ ಪಂಚಾಯಿತಿ ಮತ್ತು ಗುರುಕುಲ ಇಂಟಲ್ ನ್ಯಾಷನಲ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಭಿರಕ್ಕೆ ಶ್ರೀ ಮದ್ ರಾಜಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಡಾ.ರಾಜೇಶ್ವರ ಶಿಚವಾರ್ಯ ಸ್ವಾಮಿಗಳು ಮತ್ತು ಗಣ್ಯರು ತಮ್ಮ ಅಮೃತ ಹಸ್ತದಿಂದ ದೀಪ ಬೆಳಗಿಸಿ ಕಾರ್ಯಕ್ರಮಕಕ್ಕೆ ಚಾಲನೆ ನೀಡಿದರು. ಹಾಗೆಯೇ ನಾರಾಯಣ ಹೃದಯಾಲಯದಿಂದ ರಕ್ತದಾನ ಶಿಭಿರವನ್ನು ಸಹ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನಕುಮಾರ್, ಹೆನ್ನಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್. ಪಂಚಾಯಿತಿ ಸದಸ್ಯರಾದ ಹೆನ್ನಾಗರ ಸತೀಶ್. ಶ್ರೀಮತಿ ಬಾಗ್ಯ ಚಂದ್ರಶೇಖರ್ ಹಾಗೂ ಪಿ.ಇ.ಎಸ್. ವಿಶ್ವ ವಿದ್ಯಾಲಯ ಆಸ್ಪತ್ತೆಯ ಶಿಭಿರದ ಸಂಯೋಜಕರಾದ ಶ್ರೀಧರ್ ರಾವ್ ಮತ್ತು ರಘು ಮತ್ತು ವೈದ್ಯರು, ಶಿಕ್ಷಕರು ಹಾಗೂ ಗ್ರಾಮಸ್ಥರು ಬಾಗವಹಿಸಿದ್ದರು.