ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ

ಇಂಡಿ:ಎ.14:ತಾಲೂಕಿನ ಅರ್ಜುಣಗಿ ಬಿ ಕೆ ಗ್ರಾಮದ ಹಜರತ್ ಗೈಭೀಪಿರ್ ದೇವರ ಜಾತ್ರಾ ಮಹೋತ್ಸವದ ನಿಮಿತ್ಯ ಉಚಿತ ಆರೋಗ್ಯ ತಪಾಸಣೆ, ಉಚಿತ ಕಣ್ಣು ತಪಾಸಣೆಶಿಬಿರ ಮತ್ತು ರಕ್ತದಾನ ಶಿಬಿರ ನಡೆಯಿತು.

ಬಿ.ಎಲ್.ಡಿ.ಈ ಸಂಸ್ಥೆ ವಿಜಯಪುರ, ಜಿಲ್ಲಾ ಸರಕಾರಿ ಆಸ್ಪತ್ರೆ ರಕ್ತ ನಿಧಿ ಘಟಕ, ಕೆ.ಎಚ್.ಪಿ.ಟಿ ಸಂಸ್ಥೆ ವಿಜಯಪುರ, ಸಮರ್ಥ ಕಣ್ಣಿನ ತಪಾಸಣೆ ನಾದ, ಗ್ರಾ.ಪಂ ಅರ್ಜುಣಗಿ ಬಿಕೆ, ಹಜರತ್ ಗೈಭೀಪಿರ್ ದೇವರ ಜಾತ್ರಾ ಸಮಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಬೇವನೂರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಡಾ|| ಮಂಜುನಾಥ ಕೊಟೆಣ್ಣವರ ಇವರ ಮಾರ್ಗದರ್ಶನದಲ್ಲಿ 125 ಜನರಿಗೆ ತಪಾಸಣೆಮತ್ತು 52 ಜನರು ರಕ್ತದಾನ ಮಾಡಿದರು. 30 ಕ್ಯಾಟ್ರಾಕ್ಟ ಪತ್ತೆ ಹಚ್ಚಲಾಯಿತು.

ವೈದ್ಯಾಧಿಕಾರಿ ಪ್ರಶಾಂತ ಧೂಮಗೊಂಡ, ಬಿಎಚ್‍ಇಒ ವೈ.ಎಂ.ಪುಜಾರ, ಡಾ|| ಇರಫಾನ ಕರಡಿ, ಹುಸೇನ ನಾಗಣಸೂರ, ಮಹಾಂತೇಶ ತಾವರಖೇಡ, ಶರಣಗೌಡ ರಾಂಪೂರ, ಶಾಹಿದ್ ಜಾಫರ, ಟಿ.ಎಸ್.ಪೂಜಾರಿ, ಡಿ.ಎಂ.ಮುಲ್ಲಾ, ರಾಜಕುಮಾರ ಮೋಟಗಿ, ಸೈಬಣ್ಣ ಯರಗಲ್ಲ, ಬಾಷಾ ಮುಲ್ಲಾ, ಪರುಶುರಾಮ ಬಿರಾದಾರ, ಪಿಡಿಒ ಕುಲಕರ್ಣಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಪಾಲ್ಗೊಂಡಿದ್ದರು.