ಉಚಿತ ಆರೋಗ್ಯ ತಪಾಸಣೆ,ರಕ್ತದಾನ ಶಿಬಿರ ಯಶಸ್ವಿ

ಆನೇಕಲ್.ಡಿ,೧೧:ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚುಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆಗ್ಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರು ನೀಡುವ ಸಲಹೆ ಪಾಲಿಸಬೇಕು ಎಂದು ಶ್ರೀ ಶಿರಡಿ ಸಾಯಿ ಬಾಬಾ ದೇವಾಲಯದ ದರ್ಮಾದಿಕಾರಿ ಶ್ರೀನಿವಾಸ್ ರಾಹುಲ್ ರವರು ತಿಳಿಸಿದರು.
ಅವರು ಸೇವಗಾನಪಲ್ಲಿ ಗ್ರಾಮದಲ್ಲಿರುವ ಶ್ರೀ ಶಿರಡಿ ಸಾಯಿ ಬಾಬಾ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಭಿರ ಮತ್ತು ರಕ್ತದಾನ ಶಿಭಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಶ್ರೀ ಶಿರಡಿ ಸಾಯಿಧಾಮ್ ಸೇವಾ ಟ್ರಸ್ಟ್ ಈಗಾಗಲೇ ಬಿಲ್ಲಾಪುರ. ಸರ್ಜಾಪುರದಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು ಇನ್ನಷ್ಠು ಜನರಿಗೆ ಸೇವೆಯನ್ನು ನೀಡಬೇಕು ಎಂಬುವ ಉದ್ದೇಶದಿಂದ ಅತ್ತಿಬೆಲೆ ನಿಸರ್ಗ ದೃಷ್ಠಿದಾಮ ಹಾಗೂ ಕಾವೇರಿ ಆಸ್ಪತ್ರೆ ಮತ್ತು ಶೈನ್ ಅಂಡ್ ಸ್ಟೈಲ್ ಡೆಂಟಲ್ ಕೇರ್ ಮತ್ತು ಹಿಮೋಕೇರ್ ರಕ್ತನಿಧಿ ಸಹಯೋಗದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಭಿರ ಮತ್ತು ರಕ್ತದಾನ ಶಿಭಿರ ಹಾಗೆಯೇ ಉಚಿತವಾಗಿ ಕನ್ನಡಕ ವಿತರಣೆ, ಉಚಿತ ಔಷದಿ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿಸರ್ಗ ಸೇವಾ ಟ್ರಸ್ಟ್ ನ ದೇವರಾಜ್ ನಾಯ್ಕ್, ಅತ್ತಿಬೆಲೆ ನಿಸರ್ಗ ದೃಷ್ಠಿದಾಮದ ಡಾ. ವೆಂಕಟೇಶ್, ಹಿಮೋಕೇರ್ ರಕ್ತನಿಧಿಯ ಡಾ.ಮದನ್, ಕಾವೇರಿ ಆಸ್ಪತ್ತೆಯ ಡಾ.ನಾಗೇಶ್, ಶೈನ್ ಅಂಡ್ ಸ್ಟೈಲ್ ಡೆಂಟಲ್ ಕೇರ್ ನ ಡಾ. ನಿತಿನ್, ಡಾ. ಗೌರಿ. ಶ್ರೀ ಶಿರಡಿ ಸಾಯಿ ಧಾಮ್ ಸೇವಾ ಟ್ರಸ್ಟ್ ನ ಆಡಳಿತ ಮಂಡಳಿಯವರು. ಪದಾದಿಕಾರಿಗಳು ಮತ್ತು ಭಕ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.