ಉಚಿತ ಆರೋಗ್ಯ ತಪಾಸಣಾ ಶಿಬಿರ

ಕೋಲಾರ, ಮಾ.೨೬: ಧಾನ್‌ಫೌಂಡೇಷನ್, ತಾಲ್ಲೂಕು ವಯಲಗಂ ರೈತರ ಒಕ್ಕೂಟ, ಹೊಸಕೋಟೆಯ ಎಂ.ವಿ.ಜೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮದ ಸೋಮನಾಥೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಮಾ.೨೭ರ ಶನಿವಾರ ಬೆಳಗ್ಗೆ ೯-೩೦ ರಿಂದ ಮಧ್ಯಾಹ್ನ ೩ ಗಂಟೆವರೆಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ವೈದ್ಯಕೀಯ ತಜ್ಞರು, ನೇತ್ರ, ಮೂಳೆ, ಸ್ತ್ರೀರೋಗ ತಜ್ಞರು, ಚರ್ಮರೋಗ ತಜ್ಞರು,ಮಕ್ಕಳ ತಜ್ಞರು, ಕಿವಿ,ಮೂಗು,ಗಂಟಲು ತಜ್ಞರು, ಶಸ್ತ್ರಚಿಕಿತ್ಸಾ ತಜ್ಞರು ಹಾಜರಿರಲಿದ್ದು, ಉಚಿತ ಆರೋಗ್ಯ ತಪಾಸಣೆ ನಡೆಸುವರು.
ಈ ಶಿಬಿರದಲ್ಲಿ ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ಗುರುತಿನ ಕಾರ್ಡನ್ನು ವಿತರಿಸಲಿದ್ದು, ಎಂವಿಜೆ ಆಸ್ಪತ್ರೆಯಲ್ಲಿನ ಆರೋಗ್ಯ ಕರ್ನಾಟಕ ಹೆಲ್ತ್ ಸ್ಕೀಂ ಯೋಜನೆಯನ್ನೂ ರೋಗಿಗಳು ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಧಾನ್‌ಫೌಂಡೇಷನ್ ಸಂಯೋಜಕರು ತಿಳಿಸಿದ್ದಾರೆ.
ಉಚಿತ ಆರೋಗ್ಯ ಶಿಬಿರಕ್ಕೆ ಅರಾಭಿಕೊತ್ತನೂರು ಗ್ರಾ.ಪಂ ಅಧ್ಯಕ್ಷರು,ಉಪಾಧ್ಯಕ್ಷರು, ಗ್ರಾ.ಪಂ ಪಿಡಿಒ, ಗ್ರಾ.ಪಂ ಸದಸ್ಯರು, ಸಿಬ್ಬಂದಿ ವರ್ಗ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸುತ್ತಮುತ್ತಲ ಗ್ರಾಮಸ್ಥರು ಪಡೆದುಕೊಳ್ಳುವಂತೆ ಕೋರಿದ್ದಾರೆ.