ಉಚಿತ ಆರೋಗ್ಯ ತಪಾಸಣಾ ಶಿಬಿರ

ಗೋಕಾಕ,ಮಾ.1: ಶಿಕ್ಷಣ , ಆರೋಗ್ಯ , ಸಂಸ್ಕಾರ , ಪರಿಸರ ಹಾಗೂ ಸಹಕಾರ ಎಂಬ ಐದು ತತ್ವದಡಿ ಸಮಾಜಕ್ಕೆ ಏನಾದರೂ ನೀಡಬೇಕು ಎಂಬ ಉದ್ದೇಶದಿಂದ ಮಹಾಂತೇಶ ಕವಟಗಿಮಠ ಫೌಂಡೇಶನ್ ಹುಟ್ಟಿಕೊಂಡಿದೆ ಎಂದು ವಿಧಾನ ಪರಿ?Àತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.
ಕೆಎಲ್‍ಇ ಶಾಲಾ ಆವರಣದಲ್ಲಿ ಮಹಾಂತೇಶ ಕವಟಗಿಮಠ ಫೌಂಡೇಶನ್ ವತಿಯಿಂದ ಹಾಗೂ ಕೆಎಲ್‍ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಗ್ಯ ಇಲ್ಲ ಎಂದರೆ ಏನು ಇಲ್ಲ ಇಂದಿನ ಆಧುನಿಕ ಯುಗದಲ್ಲಿ ಜನರು ಆರೋಗ್ಯವನ್ನು ಕಾಪಾಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಾಜ ಸೇವಾ ಸಂಘಟನೆಗಳು ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಹೇಳಿದರು
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಮತ್ತು ಬಟಕುರ್ಕಿಯ ಸಂಗನಬಸವ ಮಹಾಸ್ವಾಮಿಗಳು ವಹಿಸಿದ್ದರು.
ಈ ಸಂದರ್ಭದಲ್ಲಿ ಕೆಎಲ್‍ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ್, ಮಡ್ಡೆಪ್ಪ ತೋಳಿನವರ, ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ, ಡಾ.ಧರೆಪ್ಪ ಚೌಗಲಾ ,ಎಂ.ಡಿ.ಚುನಮರಿ, ಮಲ್ಲಿಕಾರ್ಜುನ ಈಟಿ, ರಾಮಣ್ಣ ಹುಕ್ಕೇರಿ, ನಾರಾಯಣ ಮಠಾಧೀಕಾರಿ, ಆನಂದ ಪಾಟೀಲ, ಡಾ.ಕಿರಣಕುಮಾರ ಪೂಜಾರ, ಡಾ.ನವೀನ ಅಂಗಡಿ, ಡಾ.ವಿಶ್ವನಾಥ್ , ಡಾ.ಮಹಾದೇವಿ ಸವಣೂರು, ಡಾ.ಅಮೂಲ ಎಸ್.ಡಾ.ವೀಣಾ, ಡಾ.ಪ್ರೀತಿ ಶೆಟ್ಟಿ, ಡಾ.ಭಾಗ್ಯಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.