ಉಚಿತ ಆರೋಗ್ಯ ತಪಾಸಣಾ, ರಕ್ತದಾನ ಶಿಬಿರ

ಕೊಳ್ಳೇಗಾಲ: ಜು.31:- ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್.ಧೃವನಾರಾಯಣ್ ರವರ 61 ರವರ ಹುಟ್ಟುಹಬ್ಬದ ಅಂಗವಾಗಿ ಇಲ್ಲಿನ ಅಭಿಮಾನಿಗಳು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ನಡೆಸಿದರು.
ಪಟ್ಟಣದ ಕೆ.ಯು.ಸಿ ಕ್ಲಬ್ ನಲ್ಲಿ ಭಾನುವಾರ ಸಮೃದ್ಧಿ ಫೌಂಡೇಷನ್, ಕೊಳ್ಳೇಗಾಲ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆ (ಸಿಮ್ಸ್), ಮೈಸೂರು ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಹಾಗೂ ಧೃವನಾರಾಯಣ್ ಅಭಿಮಾನಿಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಶಿಬಿರವನ್ನು ಹನೂರು ಶಾಸಕ ಆರ್.ನರೇಂದ್ರ ಅವರು ಉದ್ಘಾಟಿಸಿ ಮಾತನಾಡಿ, ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಧೃವನಾರಾಯಣ್ ರವರ ಹುಟ್ಟುಹಬ್ಬದ ಅಂಗವಾಗಿ
ಶಿಬಿರದಲ್ಲಿ ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು.
ಶಿಬಿರದಲ್ಲಿ ಸುಯೋಗ ಹಾಗೂ ಅನ್ನಪೂರ್ಣ ಆಸ್ಪತ್ರೆ ಡಾ.ಭವಿಷ್ ಡಾ.ನಮೃತಾ ಡಾ. ಸಿಂಧು ಸೇರಿದಂತೆ ಇನ್ನೀತರೆ ವೈದ್ಯರು ರಕ್ತ ಒತ್ತಡ, ಸಕ್ಕರೆ ಕಾಯಿಲೆ, ಇಸಿಜಿ, ಕಣ್ಣು, ಹೃದಯಾ, ಗರ್ಭಕೋಶ, ಪ್ರಸುತಿ ಮತ್ತು ಸ್ತ್ರೀರೋಗ ತಪಾಸಣೆ, ಸಾಮಾನ್ಯ ತಪಾಸಣೆಯನ್ನು ನಡೆಸಿದರು.
ಉಪ್ಪಾರ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಮಧುವನಹಳ್ಳಿ ಶಿವಕುಮಾರ್, ಕೆ.ಎಂ.ಎಫ್ ನಿರ್ದೇಶಕ ನಂಜುಂಡಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ನಗರಸಭೆ ಅಧ್ಯಕ್ಷೆ ಸುಶೀಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರನಾರಾಯಣ ಗುಪ್ತ, ಸದಸ್ಯರು ಮಂಜುನಾಥ್, ರಾಘವೇಂದ್ರ, ಪ್ರಶಾಂತ್, ನಗರಸಭೆ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ಚಿನ್ನಸ್ವಾಮಿ ಮಾಳಿಗೆ, ಪುಟ್ಟರಾಜು, ಕೊಪ್ಪಾಳಿ ಮಹದೇವನಾಯಕ, ಜವಾದ್ ಅಹಮದ್ ಹಾಜರಿದ್ದರು.