ಉಚಿತ ಆರೊಗ್ಯ ತಪಾಸಣೆ

ಕಲಬುರಗಿ ಫೆ.07: ನಗರದ ಪ್ರತಿಷ್ಠಿತ ಜೆಆರ್ ನಗರದಲ್ಲಿರುವ ಸಿದ್ದೇಶ್ವರ ಆಸ್ಪತ್ರೆಯು ತನ್ನ ಐದನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಇತ್ತಿಚೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆಯೊಂದಿಗೆ ಬೋನ್ ಮಿನರಲ್ ಡೆನಿಷ್ಠಿ (ಬಿಎಂಡಿ) ಇದನ್ನು ಕೂಡ ಉಚಿತವಾಗಿ ತಪಾಸಣೆ ಮಾಡಲಾಯಿತು.

ಈ ಶಿಬಿರದಲ್ಲಿ ಕಲಬುರ್ಗಿಯ ವೈದ್ಯರುಗಳಾದ ಡಾ. ಅಪರ್ಣ ಎ. ಬಿ., ಡಾ. ಆನಂದ್ ಮಂಗಲಗಿ, ಡಾ. ಸಾಗರ್ ಕಠಾರಿ, ಡಾ. ಅರುಣ್ ಅವಟೆ, ಡಾ. ನಝೀಯ ಮೌಲಾಲಿ ಮತ್ತು ಡಾ. ಮೊಹಮ್ಮದ್ ಮುಸ್ತಫಾ ಭಾಗವಹಿಸಿದರು. ಇವರಿಂದ ಸುಮಾರು 250ಕ್ಕೂ ಹೆಚ್ಚು ಜನರು ತಮ್ಮ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ಮಾಡಿಕೊಂಡರು.

ಅಲ್ಲದೆ ಕಲಬುರಗಿಯ ಡಿಎ??? ಡೈಗ್ನೋಸ್ಟಿಕ್ ಸೆಂಟರ್ ಅವರಿಂದ ಅತ್ಯಂತ ಕಡಿಮೆ ಮತ್ತು ರಿಯಾಯಿತಿ ದರದಲ್ಲಿ ಪ್ರಯೊಗಾಲಯದ ಹಲವು ಪರೀಕ್ಷೆಗಳನ್ನು ಮಾಡಲಾಯಿತು. ಸುಮಾರು 150ಕ್ಕೂ ಹೆಚ್ಚು ಜನ ಇದರ ಲಾಭ ಪಡೆದುಕೊಂಡರು ಎಂದು ಸಿದ್ದೇಶ್ವರ ಆಸ್ಪತ್ರೆಯ ವ್ಯವಸ್ಥಾಪಕರಾದ ಶರಣು ಹಾವನೂರ ತಿಳಿಸಿದರು.