ಉಚಿತ ಆನ್ಲೈನ್ ಯೋಗ ತರಬೇತಿ

ಚಿತ್ರದುರ್ಗ. ಜೂ.೧೦;ಇದೇ ಜೂನ್  21 ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮಹರ್ಷಿ ಯೋಗ ಯೋಗ ಶಿಕ್ಷಣ ಸಂಸ್ಥೆ ವತಿಯಿಂದ ಯೊಗ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದುರವಿ ಅಂಬೇಕರ್ ತಿಳಿಸಿದ್ದಾರೆ.ಕೊರೊನಾ ಕಾಲ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬಾರದೆ ಮನೆಯಲ್ಲೇ ಯೋಗ ಕಲಿಯಬಯಸುವ ಸಾರ್ವಜನಿಕರಿಗಾಗಿ ಇದೇ ಜೂನ್ 12ರ ಶನಿವಾರ ದಿಂದ 21ನೇ ತಾರೀಖಿನವರೆಗೆ ಹತ್ತು ದಿನಗಳ ಉಚಿತ ಆನ್ಲೈನ್ ಯೋಗ ತರಬೇತಿ ಶಿಬಿರ ಹಮ್ಮಿಕೊಂಡಿದ್ದು ಶಿಬಿರದಲ್ಲಿ ಪ್ರತಿದಿನ ಸಂಜೆ 5 ಗಂಟೆಯಿಂದ 6 ರವರೆಗೆ ನುರಿತ ಯೋಗ ಶಿಕ್ಷಕರು ತರಬೇತಿ ನೀಡುವರು, ಎಲ್ಲಾ ವಯಸ್ಸಿನ, ಲಿಂಗ ಭೇದ, ಧರ್ಮ ಭೇದವಿಲ್ಲದೆ ಎಲ್ಲಾ.ಯೋಗಾಸಕ್ತ ಸಾರ್ವಜನಿಕರು ಮೊಬೈಲ್ 9900667740 ಸಂಖ್ಯೆಗೆ ಕರೆಮಾಡಿ ಹೆಸರು ನೊಂದಾಯಿಸಿಕೊಂಡು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಶಿಬಿರದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ