ಉಚಿತ ಆಕ್ಸಿಜನ್ ಯಂತ್ರ ವಿತರಣೆ

ಮುದ್ದೇಬಿಹಾಳ:ಜೂ.8: ಕೋವಿಡ್ ಮಹಾಮಾರಿ ಎರಡನೆ ಅಲೇಯಲ್ಲಿ ಎಲ್ಲಕಡೆಯಲ್ಲಿ ಆಕ್ಸಿಜನ್ ಕೋರತೆಯಿಂದಾಗಿ ಸಾಕಷ್ಟು ಜನ ತಮ್ಮ ಪ್ರಾಣವನ್ನು ಕಳೇದುಕೊಳ್ಳಬೇಕಾಯಿತು. ಸಹೋದರ ಲಿಂಗರಾಜ ಶಂಕರರಾವ ನಾಡಗೌಡ ಅವರ ನೇನಪಿಗಾಗಿ ಡಿಎಸ್ ಪೌಂಡೇಶನ್ ವತಿಯಿಂದ ತಾಲೂಕಾ ಸರಕಾರಿ ಆಸ್ಪತ್ರೆಗೆ ಉಚಿತ ಆಕ್ಸಿಜನ್ ಯಂತ್ರವನ್ನು ವಿತರಿಸಲಾಗುತ್ತಿದೆ ಎಂದು ಮಾಜಿ ಸಚೀವ ಸಿ ಎಸ್ ನಾಡಗೌಡ ಅವರು ಹೇಳಿದರು.

ಪಟ್ಟಣದ ಇಲ್ಲಿನ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಲಿಂಗರಾಜ( ದಾದಾಧನಿ) ಶಂಕರರಾವ ನಾಡಗೌಡ ಅವರ ನೇನಪಿಗಾಗಿ ಡಿಎಸ್ ಪೌಂಡೇಶನ್ ವತಿಯಿಂದ ತಾಲೂಕಾ ಸರಕಾರಿ ಆಸ್ಪತ್ರೆಗೆ ಉಚಿತ ಆಕ್ಸಿಜನ್ ಯಂತ್ರವನ್ನು ವೈದ್ಯ ಅನೀಲಕುಮಾರ ಶೇಗುಣಸಿ, ಹಾಗೂ ತಾಲೂಕಾ ವೈದ್ಯಾಧಿಕಾರಿ ಸತೀಶ ತಿವಾರಿ ಅವರಿಗೆ ಸೋಮವಾರ ವಿತರಿಸಿ ಅವರು ಮಾತನಾಡಿದರು.

ನನ್ನ À ಪತ್ನಿ, ಪುತ್ರಿ ಸೇರಿದಂತೆ ಎಲ್ಲ ಕುಟುಂಭದವರು ಕೋರೊನಾ ಸೊಂಕಿನಿಂದ ಬಳಲುವಂತಾಯಿತು ಎಲ್ಲರೂ ಕೊರೊನಾ ಗೆದ್ದು ಆರೋಗ್ಯವಂತರಾಗಿ ಮನೆ ಸೇರಿದೇವು ಆದರೇ ಕಳೇದ 15 ದಿನಗಳ ಹಿಂದೇ ಕೋವಿಡ್ ನಿಂದಾಗಿ ಪ್ರಾಣ ಕಳೇದುಕೊಂಡ ಲಿಂಗರಾಜ( ದಾದಾಧನಿ) ಶಂಕರರಾವ ನಾಡಗೌಡ ಅವರ ಸಾವು ಇನ್ನುಕೂಡ ಮರೆಯದ ಹಾಗಾಗಿದೇ. ನನ್ನ ಎಲ್ಲ ರಾಜಕೀಯ ಹೆಜ್ಜೇಗಳಿಗೆ ನನ್ನ ಸಹೋದರ ನನಗೆ ಮಾರ್ಗದರ್ಶಕನಾಗಿ ಸದಾ ನನ್ನ ಬೆನ್ನೆಲುಬಾಗಿದ್ದರು.

ಇದನ್ನರಿತ ನನ್ನ ಪುತ್ರಿ ಪಲ್ಲವಿ ನಾಡಗೌಡ ಅವರು ನೇತೃತ್ವದ ಡಿ ಎಸ್ ಪೌಂಡೇಶನ ಮೂಲಕ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಮೂಲಕ ಸಧ್ಯ ಕೋರೊನಾ ತೀವೃತೆ ಇದೇಯೋ ಅಂತಹವರಿಗೆ ಅಗತ್ಯ ಸೇವೆ ಸಲ್ಲಿಸುವ ಉದ್ದೇಶ ಇದಾಗಿದೇ ಇನ್ನು ಅವಶ್ಯಕವಿದ್ದರೆ ಇನ್ನಷ್ಟು ಆಕ್ಸಜನ್ ಯಂತ್ರ ವಿತರಿಸಲಾಗುವುದು.

ಈ ಮದ್ಯೆ ಎಲ್ಲ ವೈದ್ಯರ ಕರ್ತವ್ಯ ನಿಜಕ್ಕೂ ಶ್ಲಾಘನಿಯ ಅವರೇ ನಮ್ಮ ದೇವರು ಎಂಬುದನ್ನು ಅರಿತು ಗೌರವಿಸು ಕಾರ್ಯವಾಗಬೇಕು. ಸಾರ್ವಜನಿಕರು ಕೋವಿಡ್ ನ್ನು ನಿರ್ಲಕ್ಷವಹಿಸದೇ ಜಾಗೃತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋರೊನಾ ಹೋಡೆದೊಡಿಸಲು ಮುಂದಾಗಬೇಕು ಎಂದರು.

ಈ ವೇಳೆ ಡಿಎಸ್ ಪೌಂಡೇಶನ್ ಮುಖ್ಯಸ್ಥೆ ಪಲ್ಲವಿ ನಾಡಗೌಡ, ಚಿನ್ನು ನಾಡಗೌಡ, ಪೃಥ್ವಿ ನಾಡಗೌಡ, ಕಾಂಗ್ರೇಸ್ ಮುಖಂಡರಾದ ವಾಯ್ ಎಚ್ ವಿಜಯಕರ, ಗುರು ತಾರನಾಳ,ಬಸನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ಪ್ರತಿಭಾ ಅಂಗಡಗೇರಿ, ಪುರಸಭೆ ಸದಸ್ಯರಾದ ಮೈಬೂಬ ಗೊಳಸಂಗಿ, ಪ್ರೀತಿ ದೇಗಿನಾಳ, ಭಾರತಿ ಪಾಟೀಲ,ತಾಲೂಕಾ ಯೂಥ್ ಕಾಂಗ್ರೇಸ್ ಘಟಕದ ಅಧ್ಯಕ್ಷ ರಫೀಕ ಶಿರೋಳ, ಎನ್ ಎಸ್ ಯೂಐ ಜಿಲ್ಲಾ ಅಧ್ಯಕ್ಷ ಸದ್ದಾಂ ಕುಂಟೋಜಿ, ಪಿಂಟು ಸಾಲಿಮನಿ ಸೇರಿದಂತೆ ಹಲವರು ಇದ್ದರು.