ಉಚಿತ ಆಂಬ್ಯೂಲೆನ್ಸ್ ಸೇವೆಗೆ ಚಾಲನೆ ಎಲ್ಲಕ್ಕಿಂತ ಶ್ರೇಷ್ಠವಾದದ್ದು ಸೇವಾ ಗುಣ

ಶಹಾಪುರ:ನ.19:ಎಲ್ಲಕ್ಕಿಂತ ಶ್ರೇಷ್ಠವಾದದ್ದು ಸೇವಾ ಗುಣ, ಸೇವೆ ಮಾಡುವ ಭಾವನೆಯೇ ದೊಡ್ಡದು. ನಿಮ್ಮ ಮನೆಯ ಬಾಗಿಲಿಗೆ ಬಂದು ಉಚಿತ ಸೇವೆಯನ್ನು ಮಾಡುವಂತಹ ಕಾರ್ಯ ಮಾದರಿಯಾಗಿದೆ ಎಂದು ಫಕೀರೇಶ್ವರ ಮಠದ ಶ್ರೀ.ಮ.ನಿ ಪ್ರ. ಗುರುಪಾದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿಕೊಂಡು ನುಡಿದರು.

ನಗರದ ಸುಬೇದಾರ ಆಸ್ಪತ್ರೇ ಆವರಣದಲ್ಲಿ ದಿ. ಅಚ್ಚಪ್ಪಗೌಡ ಸುಬೇದಾರ ರೂರಲ್ ಮತ್ತು ಅರ್ಬನ್ ಟ್ರಸ್ಟ್ ಹಾಗೂ ಸುಬೇದಾರ ಆರೋಗ್ಯ ಚಕ್ರ ಉಚಿತ ಆರೋಗ್ಯ ತಪಾಸಣ ವಾಹನಕ್ಕೆ ಚಾಲನೆ ನೀಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ಅವರು ಬಡವರ ಸೇವೆಗಾಗಿ ಆರೋಗ್ಯವೇ ಮಹಾಭಾಗ್ಯ ವೆಂಬುವ ಧ್ಯೇಯವನ್ನಿಟ್ಟ್ಟುಕೊಂಡು ಸಕಾರಾತ್ಮÀಕವಾಗಿ ಬಡ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಆರೋಗ್ಯ ತಪಾಸಣೆಗಾಗಿ ಆಂಬ್ಯೂಲೆನ್ಸ್ ಸೇವೆಯನ್ನು ಆರಂಭಿಸಿದ್ದು ನಿಜಕ್ಕೂ ಶ್ಲಾಘನೀಯವಾದದ್ದು. ಮನುಷ್ಯ ಇರುವಷ್ಟು ಕಾಲ ಪರೋಪಕಾರಿ ಬದುಕಬೇಕು. ಸೇವ ಮನೋಭಾವಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಖ್ಯಾತ ವೈದ್ಯರಾದ ಡಾ. ಚಂದ್ರಶೇಖರ ಸುಬೇದಾರ ಅವರು ತಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ಹೆಚ್ಚಿಸಿ ಕೊಂಡಿದ್ದಾರೆ .ಭೂಮಿಯ ಮೇಲÉ ಪ್ರತಿಯೊಬ್ಬರಿಗೂ ಸಾವು ಖಚಿತ ಆದರೆ ಇರುವಷ್ಟು ದಿನ ಮಾಡುವÀ ಸಾರ್ಥಕ ಕಾರ್ಯಗಳು ಅಚ್ಚಳಿಯದೆ ಉಳಿಯುತ್ತವೆ. ಕೊರೋನ ಸೋಂಕಿತರಿಗೆ ಮತ್ತು ಕೊರೋನಾ ದಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದ ಅನೇಕರಿಗೆ ನೈತಿಕವಾಗಿ ಸ್ಥರ್ಯ, ಧೈರ್ಯ ಜೊತೆಗೆ ಜಾಗೃತಿ ತುಂಬುವಂತಹ ಕೆಲಸ ಮಾಡಿದ ಹಿರಿಯ ಜೀವ ಸುಬೇದಾರ್ ಅವರು ಪ್ರತಿಯೊಬ್ಬರಿಗೂ ಸ್ಫೂರ್ತಿ ಎಂದರು. ವೈದ್ಯರಾದ ಚಂದ್ರಶೇಖರ ಸುಬೇದಾರ್ ಅವರು ಮಾತನಾಡಿ ವೈದ್ಯನಾಗಿ ನೀಷ್ಠಯಿಂದ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಇನ್ನೂ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂಬುವುದೇ ಮುಖ್ಯ ದ್ಯೇಯ. ಟ್ರಸ್À್ಟ ವತಿಯಿಂದ ಆರೋಗ್ಯದ ದೃಷ್ಠಿಯಿಂದ ಇನ್ನು ಅನೇಕ ಸಮಾಜಮುಖಿಯ ಕಾರ್ಯಗಳಲ್ಲಿ ತೊಡಗಿಕೊಳ್ಳಲಾಗುವುದು. ಸಗರ ಗ್ರಾಮದ ಮಕ್ಕಳಿಗೆ ತೊಂದರೆ ಯಾಗಬಾರದೆನ್ನುವ ನಿಟ್ಟಿನಲ್ಲಿ ಶಾಲೆಯನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಲಾಗುವುದು. ಕಲುಬುರಗಿ ಮತ್ತು ಸಗರ ಗ್ರಾಮದಲ್ಲಿ ಯೂ ಸಹ ಶೀಘ್ರದಲ್ಲಿ ನೂತನ ಆಸ್ಪತ್ರೇಯಗಳನ್ನು ಪ್ರಾರಂಭಿಸಿ ಸೇವೆ ಮುಂದುವರೆಸಲಾಗುವುದು ಎಂದು ತಿಳಿಸಿದರು. ಶ್ರೀ ಕಾಂತ್ ಸುಬೇದಾರ ಕಾರ್ಯಕ್ರಮದ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಚಂದ್ರಶೇಖರ ಆರಭೋಳ, ಮಲ್ಲಣ್ಣ ಸಾಹು ಮಡ್ಡಿ, ಅಮಾತೆಪ್ಪ ಕಂದಕೂರ, ಚಂದ್ರಶೇಖರ ಮಾಗನೂರ್, ವೈ.ಪಿ ಚಿಪ್ಪಾರ್, ಬಸಣ್ಣಗೌಡ ಸುಬೇದಾರ್, ನಾಗಣ್ಣಗೌಡ ಸುಬೇದಾರ್, ಲಿಂಗಣ್ಣ ಪಡಶೇಟ್ಟಿ, ಸಿದ್ದಲಿಂಗಪ್ಪ ಆನೇಗುಂದಿ, ಡಾ. ದೇವಿಂದ್ರಪ್ಪ ಹಡಪದ, ಬಸವರಾಜಪ್ಪಗೌಡ ತಂಗಡಿಗಿ, ಸಣ್ಣ ನಿಂಗಣ್ಣ ನಾಯ್ಕೋಡಿ, ಮುಸ್ತಫ ದರ್ಬಾನ್, ಸಿದ್ದಲಿಂಗಪ್ಪಗೌಡ ಹಬ್ಬಳ್ಳಿ, ಡಾ. ರುದ್ರಣ್ಣ ಚಟ್ರಕಿ, ಶಿವರಾಜ ದೇಶಮುಖ, ಮರೆಪ್ಪ ಪ್ಯಾಟಿ, ರಾಘವೇಂದ್ರ ಯಕ್ಷಿಂತಿ ಸೇರಿದಂತೆ ನಗರಸಭೆ ಸದಸ್ಯರು, ಕಾರ್ಯಕರ್ತರು, ಟ್ರಸ್ಟ್ ನ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಡಾ. ಕರಣ ಗೌಡ ಸುಬೇದಾರ ಸ್ವಾಗತಿಸಿದರು. ಬಸವರಾಜ ಸಿನ್ನೂರ್ ನಿರೂಪಿಸಿ ಕೊನೆಯಲ್ಲಿ ವಂದಿಸಿದರು. ಸುಬೇದಾರ್ ಪರಿವಾರ ಬಂಧುಗಳು ಇದ್ದರು.


ಭಗವಂತನ ರೂಪದಲ್ಲಿ ದೇವರನ್ನು ಕಾಣುತ್ತಿದ್ದೇವೆ. ವೈದ್ಯ ವೃತ್ತಿಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಡಾ.ಚಂದ್ರಶೇಖರ ಸುಬೇದಾರ ಮತ್ತು ಅವರ ಪುತ್ರ ಕರಣ ಅವರ ಕಾರ್ಯ ಹೆಮ್ಮೇಯ ಸಂಗತಿ.

ಬಾಸ್ಕರ್‍ರಾವ್ ಮೂಡಬೂಳ

ಹಿರಿಯ ನ್ಯಾಯವಾದಿಗಳು.