ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭ

ಬೆಂಗಳೂರು, ಏ.೨೮- ನಗರದಲ್ಲಿ ಆಂಬ್ಯುಲೆನ್ಸ್‌ಗಳ ಸುಲಿಗೆ ಹಾಗೂ ಕೊರತೆ ಬೆನ್ನಲ್ಲೇ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸೌಂದರ್ಯ ಅಂಬಿಕ ನರ್ಸಿಂಗ್ ಕಾಲೇಜಿನವರು ಕೋವಿಡ್ ರೋಗಿಗಳ ಸೇವೆಗಾಗಿ ಇಂದಿನಿಂದ ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭಿಸಿದೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಂಜುನಾಥನಗರದ ಶನೇಶ್ವರ ದೇವಸ್ಥಾನದ ಮುಂಭಾಗ ಉಚಿತ ಆಂಬ್ಯುಲೆನ್ಸ್ ಸೇವೆಗೆ ಕ್ಷೇತ್ರದ ಆರ್ ಎಸ್ ಎಸ್ ಘಟಕದ ಮುಖ್ಯಸ್ಥ ಗಂಗಾಧರ್ ಹಾಗೂ ಸೌಂದರ್ಯ ಅಂಬಿಕ ವಿದ್ಯಾಸಂಸ್ಥೆಯ ಮುಖ್ಯಸ್ಥ ಭರತ್ ಸೌಂದರ್ಯ ಚಾಲನೆ ನೀಡಿದರು.
ಐಸಿಯು ಸೌಲಭ್ಯ ಹೊಂದಿರುವ ಈ ಆಂಬ್ಯುಲೆನ್ಸ್ ದಿನದ ೨೪ ಗಂಟೆಗಳ ಕಾಲ ದಾಸರಹಳ್ಳಿ ವ್ಯಾಪ್ತಿಯಲ್ಲಿ ಸೇವೆ ಒದಗಿಸಲಿದೆ.ಆರೋಗ್ಯ ಭಾರತಿ ಹಾಗೂ ಆರ್ ಎಸ್ ಎಸ್ ಸಹಯೋಗದೊಂದಿಗೆ ಸೌಂದರ್ಯ ಅಂಬಿಕ ವಿದ್ಯಾ ಸಂಸ್ಥೆ ಈ ಜನೋಪಯೋಗಿ ಕಾರ್ಯಕ್ಕೆ ಮುಂದಾಗಿದೆ.
ಭರತ್ ಸೌಂದರ್ಯ ಮಾತನಾಡಿ, ನಗರದಲ್ಲಿ ಆಂಬ್ಯುಲೆನ್ಸ್ ಸೇವೆ ಸಮಸ್ಯೆ ಮನಗಂಡು ಉಚಿತ ಆಯಂಬುಲೆನ್ಸ್ ಸೇವೆ ನೀಡಬೇಕು,ನಮ್ಮ ಕ್ಷೇತ್ರದ ಜನರ ಸೇವೆ ಮಾಡಬೇಕು ಎಂಬ ಮಹದಾಸೆಯಿಂದ ಉಚಿತ ಆಂಬ್ಯುಲೆನ್ಸ್ ಸೇವೆ ಆರಂಭಿಸಿರುವುದಾಗಿ ತಿಳಿಸಿದರು.
ಮಾಹಿತಿಗಾಗಿ ಮೊಬೈಲ್ ಸಂಖ್ಯೆ
೯೮೪೫೪೫೮೩೩೯, ೯೯೮೦೦೧೬೭೨೬
ಸಂಪರ್ಕಿಸಿ.