ಉಚಿತ ಆಂಬುಲೆನ್ಸ್ ಸೇವೆ

ಬೆಂಗಳೂರು, ಮೇ ೨೦- ಕೇಸರಿ ಚಾರಿಟಿ ಫೌಂಡೇಶನ್ ವತಿಯಿಂದ ಬೆಂಗಳೂರು ಉತ್ತರ ಜಿಲ್ಲೆ ಬಿಜೆಪಿ ಕಾರ್ಯಕಾರಣಿ ಸದಸ್ಯ, ಬಿಜೆಪಿ ಯುವ ಮುಖಂಡ ಎಚ್.ಎಂ. ರವಿಕುಮಾರ್ ಅವರು ಸಾರ್ವಜನಿಕ ಸೇವೆಗಾಗಿ ಉಚಿತ ಅಂಬುಲೆನ್ಸ್ ಮತ್ತು ಆಕ್ಸಿಜನ್ ವುಳ್ಳ ಆಂಬುಲೆನ್ಸ್ ಗಳ ಸೇವೆ ಆರಂಭಿಸಿದ್ದಾರೆ.
ಬೆಂಗಳೂರು ನಗರ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಮುನಿರಾಜು,ಬಿಡಿಎ ಅಧ್ಯಕ್ಷ ಎಸ್ ಆರ್ ವಿಶ್ವನಾಥ್ ಹಾಗೂ ಉದಯಸಿಂಗ್ ಅವರ ಮಾರ್ಗದರ್ಶನದಲ್ಲಿ ಮಹಾಲಕ್ಷ್ಮಿ ಬಡಾವಣೆಯಲ್ಲಿ ಮಾಜಿ ಶಾಸಕ ನೆ ಲ ನರೇಂದ್ರಬಾಬುರವರ ಸಮ್ಮುಖದಲ್ಲಿ ಉಚಿತವಾಗಿ ಜನ ಸೇವೆಗೆ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಎಚ್.ಎಂ ರವಿಕುಮಾರ್ ಎರಡನೇ ಅಲೆ ಭೀಕರವಾಗಿದ್ದು, ಸಾವಿರಾರು ಜನರನ್ನು ಬಲಿತೆಗೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸಿಗದೆ ಪರದಾಡಿ ಜೀವ ಕಳೆದುಕೊಂಡ ಉದಾಹರಣೆಗಳಿವೆ. ಆದಕಾರಣ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತೆರಳಲು ಉಚಿತವಾಗಿ ಆಂಬುಲೆನ್ಸ್ ಸೇವೆ ಆರಂಭಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಗಿರೀಶ್, ಪ್ರದೀಪ್, ಶ್ರೀಧರ್,ನಯನ್ ಕುಮಾರ್,ಪುಪ್ಪಕ್, ಕುಮಾರ್ ಮುಂತಾದವರಿದ್ದರು. ಆಂಬುಲೆನ್ಸ್ ಸಂಪರ್ಕಕ್ಕೆ:೯೯೦೦೮೯೯೦೦೯,