ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ

ಕೆ.ಆರ್. ಪುರ,ನ.೮- ಆರೋಗ್ಯ ತುರ್ತುಪರಿಸ್ಥಿತಿಯ ಸಮಯದಲ್ಲಿ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯತಿ ಮಾಡಿರುವ ಉಚಿತ ಅಂಬುಲೆನ್ಸ್ ಸೇವಾ ಕಾರ್ಯ ಶ್ಲಾಘನೀಯ ಎಂದು ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಮಹದೇವಪುರ ಕ್ಷೇತ್ರದ ಕಣ್ಣೂರು ಗ್ರಾಮ ಪಂಚಾಯತಿ ಮಾಡಿರುವ ಉಚಿತ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.
ಕಣ್ಣೂರು ಪಂಚಾಯತಿ ವ್ಯಾಪ್ತಿಯಲ್ಲಿ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು,ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಂಬುಲೆನ್ಸ್ ಸೇವೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ನುಡಿದರು.
ತುರ್ತು ಆರೋಗ್ಯ ಪರಿಸ್ಥಿತಿಯ ಸಂದರ್ಭದಲ್ಲಿ ಅಂಬುಲೆನ್ಸ್ ಸೇವೆ ಅನಿವಾರ್ಯವಾಗಿದ್ದು,ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಯ ಕಾರ್ಯ ಮಾದರಿಯಾಗಿದೆ,ಕ್ಷೇತ್ರದ ಏಲ್ಲ ಪಂಚಾಯತಿಗಳು ಅಂಬುಲೆನ್ಸ್ ಸೇವೆ ನೀಡಲು ಸಲಹೆ ನೀಡಿದರು.
ಮಾಜಿ ಸಚಿವರಾದ ಅರವಿಂದ್ ಲಿಂಬಾವಳಿ ಅವರ ಮಾದರಿ ಸಮಾಜಮುಖಿ ಕಾರ್ಯಕ್ರಮಗಳೆ ತಮಗೆ ಸ್ಪೂರ್ತಿಯಾಗಿದ್ದು ಅವರ ಹಾದಿಯನ್ನು ನಾನು ಅನುಸರಿಸುವ ಕೆಲಸ ಮಾಡುತ್ತೆನೆ ಎಂದರು.
ಪ್ರತಿಯೊಬ್ಬರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಕಿರು ಸೇವೆ ಮಾಡುವಂತೆ ಮನವಿ ಮಾಡಿದರು.
ಗ್ರಾಮಾಂತರ ಮಂಡಲ ಅಧ್ಯಕ್ಷ ನಟರಾಜ್ , ಕಣ್ಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ,ಉಪಾಧ್ಯಕ್ಷೆ ಲಲಿತಾ ದೇವರಾಜ್, ಇಓ ವಸಂತ್ ಕುಮಾರ್, ಸದಸ್ಯರಾದ ಸುಂದರ್,ದೊಡ್ಡಣ್ಣ,ಮುಖಂಡರಾದ ಮೋಹನ್ ರೆಡ್ಡಿ,ಶಂಕರೆಗೌಡ ಮತ್ತಿತರರು ಇದ್ದರು.