ಉಚಿತ ಅಮೃತ ಆರೋಗ್ಯ ತಪಾಸಣಾ ಶಿಬಿರ

ಧಾರವಾಡ,ನ18 : ಶಾಸಕ ಅಮೃತ ದೇಸಾಯಿ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬೃಹತ್ ಉಚಿತ ಅಮೃತ ಆರೋಗ್ಯ ತಪಾಸಣಾ ಶಿಬಿರ ಧಾರವಾಡ ತಾಲೂಕಿನ ಗರಗ ಗ್ರಾಮದ ಮಡಿವಾಳೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ದೇಸಾಯಿ ಮನೆತನದ ಅಮೃತ ದೇಸಾಯಿ ಅವರ ಧರ್ಮಪತ್ನಿಯಾದ ಶ್ರೀಮತಿ ಪ್ರಿಯಾ ಅಮೃತ ದೇಸಾಯಿ ಅವರ ಮಕ್ಕಳಾದ ಹಂಸಿನಿ ದೇಸಾಯಿ ಸ್ವರೂಪಿಣಿ ದೇಸಾಯಿ, ಅರೋಶ್ರೀ ದೇಸಾಯಿ ಅವರು ಕೂಡ ಈ ಸೇವಾ ಕಾರ್ಯದಲ್ಲಿ ಭಾಗವಹಿಸಿ ನೋಂದಣಿ ಕಾರ್ಯ ಹಾಗೂ ವೃದ್ಧರಿಗೆ ಸೇವೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಡಕೋಡ ಗ್ರಾಮದ ಅಜ್ಜನಗೌಡ ಪಾಟೀಲ್, ಕುಮಾರಸ್ವಾಮಿ ಯರಗಂಬ್ಲಿಮಠ, ಶಿವಲಿಂಗಪ್ಪ ಸುಣಕದ, ಸಂಗಪ್ಪ, ಅಬ್ಬಾರ್, ಬಸಪ್ಪ ಲಂಗೋಟಿ, ಈರಣ್ಣ ಟಿ ಸೊಪ್ಪಿನ್ , ಈರಣ್ಣ,ಈರಣ್ಣ ಹಿರಳಿ, ಮಟಗೊಡ್ಲಿ, ಮಹಾಬಳೆಶ್ವರ ಮರಿಗೌಡರ, ಭಾರತೀಯ ಜನತಾ ಪಾರ್ಟಿ ಸಿದ್ಧಾಂತಗಳನ್ನು ಮೆಚ್ಚಿಕೊಂಡು ಪಕ್ಷ ಸೇರ್ಪಡೆಯಾದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯಲ್ಲಿನ ಜನರು ಆರೋಗ್ಯ ತಪಾಸಣೆ ಮಾಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಅಮೃತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು 11230 ನೊಂದಣಿಯಾಗಿದ್ದು ಎಲ್ಲರಿಗೂ ಉಚಿತ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಅಮೃತ ದೇಸಾಯಿ ಗೆಳೆಯರ ಬಳಗ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಮೃತ ದೇಸಾಯಿ ಗೆಳೆಯರ ಬಳಗದ ಸದಸ್ಯರು ತಿಳಿಸಿದ್ದಾರೆ.