ಉಚಿತ ಅಭ್ಯಂಗಸ್ನಾನ ಸಪ್ತಾಹ


ಧಾರವಾಡ ಎ.11-ಇಲ್ಲಿಯ ಉದಯ ಹಾಸ್ಟೆಲ್ ರಸ್ತೆಯಲ್ಲಿರುವ ಶ್ರೀ ಗುರುದೇವ ಆಯುರ್ವೇದ ಪಂಚಕರ್ಮಚಿಕಿತ್ಸಾಲಯ’ ಆಯುರ್ಧಾವÀÀು’ದ 5ನೇ ವಾರ್ಷಿಕೋತ್ಸವ ಅಂಗವಾಗಿ ಹಾಗೂ ಯುಗಾದಿ ಹಬ್ಬದ ಪ್ರಯುಕ್ತಆಯುರ್ವೇದ ಚಿಕಿತ್ಸಾಲಯದಲ್ಲಿ ಇಂದಿನಿಂದ 17ರ ವರೆಗೆ ಸಾರ್ವಜನಿಕರಿಗಾಗಿ ಉಚಿತ ಅಭ್ಯಂಗಸ್ನಾನ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ಚಿಕಿತ್ಸಾಲಯದ ತಜ್ಞವೈದ್ಯ ಡಾ. ಮಹಾಂತಸ್ವಾಮಿ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿ, ಶಿರೋಭ್ಯಂಗ, ಶರೀರಾಭ್ಯಂಗ, ಪಾದಾಭ್ಯಂಗ, ಕರ್ಣಪೂರಣ ಮುಂತಾದ ಪ್ರಕಾರಗಳಲ್ಲಿ ನಡೆಸುವ ಅಭ್ಯಂಗದಿಂದ ಮನುಷ್ಯನಚರ್ಮದಕಾಂತಿ ಹೆಚ್ಚುತ್ತದೆ. ಇಂದ್ರಿಯಗಳು ಪ್ರಸನ್ನವಾಗುತ್ತವೆ. ಮನುಷ್ಯನಆರೋಗ್ಯ ಹಾಗೂ ಆಯುಷ್ಯ ವೃದ್ಧಿಯಾಗುತ್ತದೆ. ಶರೀರಕ್ಕೆಆಯಾಸಆಗುವುದನ್ನುತಪ್ಪಿಸುತ್ತದೆ. ಮನಸ್ಸು ಮತ್ತು ಶರೀರಕ್ಕೆಚೈತನ್ಯಒದಗುತ್ತದೆ.ಕೆಲವೊಂದು ಸಂಧಿವಾತ ರೋಗಗಳಲ್ಲಿ ಅಭ್ಯಂಜನದಿಂದ ನೋವು ಕಡಿಮೆಯಾಗುತ್ತದೆಎಂದಿದ್ದಾರೆ.
ಬೆಚ್ಚಗಿನ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡಿ ಕೆಲಹೊತ್ತು ಬಿಟ್ಟು ಸ್ನಾನ ಮಾಡುವ ಪದ್ಧತಿ-ಪರಂಪರೆಯನ್ನು ನಮ್ಮ ಹಿರಿಯರು ಯುಗಾದಿ ಪ್ರತಿಪದೆ, ವಿಜಯದಶಮಿ, ದೀಪಾವಳಿ ಪ್ರತಿಪದೆ ಮುಂತಾದ ಪ್ರಮುಖ ಹಬ್ಬಗಳ ಪರ್ವಕಾಲಗಳನ್ನು ಗುರುತಿಸಿಅಭ್ಯಂಗಸ್ನಾನಕ್ಕೆಸೂಚಿಸಿದ್ದಾರೆ. ಪ್ರಕೃತಿದತ್ತವಾದ ವಿವಿz sÀಔಷಧೀಯ ಗುಣಗಳುಳ್ಳ ಬೇರೆಬೇರೆ ತೈಲಗಳಿಂದ ಮಸಾಜ್ ಅಂದರೆ ಅಭ್ಯಂಜನವನ್ನು ಪ್ರತ್ಯೇಕ ನುರಿತ ಸ್ತ್ರೀ-ಪುರುಷರಿಂದ ಮಾಡಿಸಿ ಅದಕ್ಕೆ ಆಯುರ್ವೇದ ತತ್ವಗಳನ್ನು ಅನುಸರಿಸಲಾಗುವುದು.
ಸಾರ್ವಜನಿಕರಿಗಾಗಿಯೇ ಹಮ್ಮಿಕೊಂಡಿರುವ ಉಚಿತ ಅಭ್ಯಂಗಸ್ನಾನ ಸಪ್ತಾಹದ ಸದುಪಯೋಗವನ್ನು ಜನತೆ ಮಾಡಿಕೊಳ್ಳಬೇಕು. ಈ ಕುರಿತಮಾಹಿತಿಗೆಡಾ. ಮಹಾಂತಸ್ವಾಮಿ ಹಿರೇಮಠಅವರನ್ನು (ಮೊ. 9448157681)ಇಲ್ಲವೇಗೂಗಲ್‍ದಲ್ಲಿಚಿಥಿuಡಿಜhಚಿmಚಿಜhಚಿಡಿಚಿತಿಚಿಜಮೂಲಕ ಸಂಪರ್ಕಿಸುವಂತೆಕೋರಲಾಗಿದೆ.