ಉಚಿತ ಅಂಬ್ಯುಲೆನ್ಸ್ ಸೇವೆಗೆ ಚಾಲನೆ

ಹುಬ್ಬಳ್ಳಿ, ಜೂ 5: ಕೊರೊನಾ ಸಂಕಷ್ಟದ ಸಮಯದಲ್ಲಿ ಬಡಜನರಿಗೆ ತುರ್ತು ಆರೋಗ್ಯ ಸೇವೆ ಕಲ್ಪಿಸಲು ಅನುಕೂಲವಾಗುವಂತೆ ಇಲ್ಲಿನ ಗಿರಣಿಚಾಳದ ಯಾತಗೇರಿ ಸಹೋದರರು ಆರಂಭಿಸಿರುವ “ಆಪತ್ಭಾಂದವ” ಉಚಿತ ಆಂಬ್ಯುಲೆನ್ಸ ಸೇವೆಗೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕೊರೊನಾ ಸಂಕಷ್ಟದ ಸಮಯದಲ್ಲಿಇಂಥ ಮಾನವೀಯ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪಾಲಿಕೆ ಮಾಜಿ ಸದಸ್ಯ ವೆಂಕಟೇಶ ಮೇಸ್ತ್ರಿ, ಕಾಂಗ್ರೆಸ್ ಮುಖಂಡರಾದ ರಜತ್ ಉಳ್ಳಾಗಡ್ಡಿಮಠ, ಇಮ್ರಾನ್ ಎಲಿಗಾರ್, ಮಲ್ಲಿಕಾರ್ಜುನ ಯಾತಗೇರಿ, ಗುರುನಾಥ ಯಾತಗೇರಿ, ಸುರೇಶ ಯಾತಗೇರಿ, ಮನೋಹರ ಅಮರಾವತಿ, ಮಂಜುನಾಥ ಬಳ್ಳಾರಿ, ಇತರರು ಇದ್ದರು.