ಉಚಿತ ಅಂಬ್ಯುಲೆನ್ಸ್ ಸೇವೆಗೆ ಚಾಲನೆ


ಹುಬ್ಬಳ್ಳಿ ಜೂ 1 : ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಜನರಿಗೆ ನೆರವಾಗಲು ಹೆಚ್ಚುವರಿಯಾಗಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ 15 ಉಚಿತ ಆಂಬ್ಯುಲನ್ಸ್‍ಗಳನ್ನು ಮತ್ತು ನಿರಾಶ್ರಿತರಿಗೆ ಹಾಗೂ ಬಡವರಿಗೆ ದಿನಾಲೂ 1000 ಆಹಾರ ಪೆÇಟ್ಟಣಗಳನ್ನು ಹಂಚುವ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಉದ್ಘಾಟಿಸಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಧಾರವಾಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಿರಾಶ್ರಿತರಿಗೆ ಹಾಗೂ ಬಡವರಿಗೆ ಸಹಾಯ ಹಸ್ತ ಚಾಚಿದ್ದಾರೆ.
ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿಯೂ ಕೂಡಾ ಸಾವಿರಾರು ಬಡವರ ಹೊಟ್ಟೆ ತುಂಬಿಸಿ ಹಾಗೂ ರೈತರು ಸಂಕಷ್ಟದ ಸಂದರ್ಭದಲ್ಲಿದ್ದಾಗ ರೈತರ ಬೆಳೆಗಳನ್ನು ಖರೀದಿ ಮಾಡಿ ಬಡವರಿಗೆ ಹಂಚಿ ಮಾನವೀಯತೆ ಮೆರದಿದ್ದರು. ಮತ್ತೇ ಕೊರೊನಾ ಎರಡನೇ ಅಲೆಯಲ್ಲಿಯೂ ಕೂಡಾ ಪಾಟೀಲ್ ಅವರು ಜನ ಮೆಚ್ಚುವ ಕಾರ್ಯವನ್ನು ನಿರ್ವಹಿಸಿದ್ದು ಶ್ಲಾಘನೀಯ ಎಂದರು.
ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಪಾಟೀಲ್ ಅವರು ಕೊರೊನಾ ಮಹಾಮಾರಿಯನ್ನು ಎಲ್ಲರೂ ಒಗ್ಗೂಡಿ ಓಡಿಸಬೇಕಿದೆ. ಕೊರೊನಾ ತಡೆಗೆ ಎಲ್ಲರ ಸಹಕಾರ ಅತ್ಯಗತ್ಯ. ಅಲ್ಲದೇ ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಕಾಂಗ್ರೆಸ್ ಸಮಿತಿ ವತಿಯಿಂದ ನಿರಂತರ ನೇರವಿನ ಹಸ್ತ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕರಾದ ಪ್ರಸಾದ್ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಹು-ಧಾ ಮಹಾನಗರ ಕಾಂಗ್ರೇಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ನಾಗರಾಜ ಗೌರಿ, ಸತೀಶ ಮೆಹರವಾಡೆ, ರಾಬರ್ಟ್ ದದ್ದಾಪುರಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.