
ರಾಯಚೂರು,ಮೇ.೨೪-
ಅರಣ್ಯ ಇಲಾಖೆಯು ಸಾರ್ವಜನಿಕರಿಗೆ ಸಸಿಗಳನ್ನು ಬೆಳೆಸುವ ಯೋಜನೆಯಡಿಯಲ್ಲಿ ವಿತರಿಸುವ ಗಿಡಗಳಿಗೆ ಈ ವರ್ಷ ರಿಯಾಯಿತಿ ಕಡಿತಗೊಳಿಸಿ ೧ರೂ ಗೆ,೩ರೂ ಗೆ ವಿತರಣೆ ಮಾಡುತ್ತಿದ್ದ ಗಿಡಗಳನ್ನು ೫ರೂ ಗೆ, ೬ರೂ ಗೆ, ಹಾಗೂ ೨೩ರೂ ಗೆ ಹೆಚ್ಚಿನ ಬೆಲೆ ನಿಗದಿ ಪಡಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ಸುತ್ತೋಲೆ ಹೊರಡಿಸಲಾಗಿದೆ ಇದನ್ನು ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ಪತ್ರಿಕಾ ಗೋಷ್ಠಿಯಲ್ಲಿ ಖಂಡಿಸಿದರು.
ಪರಿಸರ ಸಂರಕ್ಷಣೆಗಾಗಿ ಸರ್ಕಾರ ಉಚಿತವಾಗಿ ಸಸಿಗಳನ್ನು ನೀಡಬೇಕು, ಪರಿಸರ ಉಳಿವಿಗಾಗಿ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಸರ್ಕಾರ ಹೆಚ್ಚಿನ ಬೆಲೆ ನಿಗದಿಪಡಿಸಿರುವುದಕ್ಕೆ ಹಲವರಿಗೆ ಸಸಿಗಳನ್ನು ಕೊಂದುಕೊಳ್ಳಲು ಅನಾನುಕೂಲವಾಗುತ್ತದೆ ಅದರಿಂದ ಕೂಡಲೇ ಸರ್ಕಾರ ಸೂಕ್ತ ಆದೇಶ ಹೊರಡಿಸಬೇಕೆಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.