ಉಚಿತವಾಗಿ ಆಹಾರ ಧಾನ್ಯ ಕಿಟ್ ವಿತರಣೆ

ನಿಡಗುಂದಿ, ಜೂ.8-ಜಿಲ್ಲೆಯ ನಿಡಗುಂದಿ ತಾಲೂಕಿನ ನಾÀಯಕ್ ಶಿಕ್ಷಣ ಸಂಸ್ಥೆ ವಿಜಯಪುರ ಇದರ ಅಡಿಯಲ್ಲಿ ನಡೆಯುತ್ತಿರುವ ನ್ಯೂ ಇಂಗ್ಲೀಷ್ ಪ್ರೌಢ ಶಾಲೆಯಲ್ಲಿ ಶ್ರೀಮತಿ ರೇಷ್ಮಾ ರಾಜೇಶ್ ಲಮಾಣಿ ಅಧ್ಯಕ್ಷರು ತುಳಜಾ ಭವಾನಿ ವಿದ್ಯಾವರ್ಧಕ ಸಂಘ ನಿಡಗುಂದಿ ಇವರ ಸಹಯೋಗದೊಂದಿಗೆ, ವಿಧಾನ ಪರಿಷತ್ ಸದಸ್ಯರು, ಕೆ.ಪಿ.ಸಿ.ಸಿ ವಕ್ತಾರರು, ಹಾಗೂ ಗೋವಾ ರಾಜ್ಯದ ಉಸ್ತುವಾರಿಗಳು ಆದ ಪ್ರಕಾಶ್ ರಾಠೋಡ ರವರು ನಿಡಗುಂದಿ ತಾಲೂಕಿನ ಅನುದಾನÀ ರಹಿತ ಶಿಕ್ಷಕರು, ಶಿಕ್ಷಕಿಯರು ಹಾಗೂ ಅನುದಾನ ರಹಿತ ಕಾಲೇಜಿನ ಉಪನ್ಯಾಸಕ/ಕಿಯರಿಗೆ ಹಾಗೂ ಬೋಧಕೇತರ ಸಿಬ್ಬಂದಿಗೆ ಕೋವಿಡ್-19 ರ್ ಪ್ರಯುಕ್ತ ಉಚಿತವಾಗಿ ಆಹಾರ ಧಾನ್ಯ ಕಿಟ್‍ಗಳನ್ನು ವಿತರಿಸಿದರು.
ಅನುದಾನ ರಹಿತ ಪ್ರಾಥಮಿಕ, ಪ್ರೌಢÀಶಾಲಾ ಶಿಕ್ಷ್ಷಕರು, ಹಾಗೂÀ ಕಾಲೇಜಿನ ಸಿಬ್ಬಂದಿಗೆ ಕೋವಿಡ್ ಬಗ್ಗೆ ಭಯಬೇಡಾ, ಮೂಡನಂಬಿಕೆಯನ್ನು ಬಿಟ್ಟು ಎಲ್ಲರು ಲಸಿಕೆಗಳನ್ನು ಹಾಕಿಸಿಕೊಳ್ಳಲು ಧೈರ್ಯ ತುಂಬಿದರು. ಅನುದಾನ ರಹಿತ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢ ಶಾಲಾ ಶಿಕ್ಷಕ್ಷಕರು, ಕಾಲೇಜಿನ ಉಪನ್ಯಾಸಕರು ಮನವಿಯನ್ನುÀ ಸ್ವೀಕರಿಸಿ ಸರಕಾರದ ಗಮನ ಸಳೆದು ಅನುದಾ£ ಕೊಡಿಸುವ ಭರವಸೆಯನ್ನು ನಿಡುವದರೊಂದಿಗೆ ನಾವು ಯಾವತ್ತು ನಿಮ್ಮೆಲ್ಲರ ಬೆನ್ನಿಗೆ ನಿಲುತ್ತ್ತೇವೆ ಎಂದು ಹೇಳಿದರು.
ಸದರಿ ಕಾರ್ಯಕ್ರಮದಲ್ಲ್ಲಿ ಖ್ಯಾತ ವೈದ್ಯರಾದ ಡಾ. ದಿಶಿತಾ ರಾಠೋಡ, ಖ್ಯಾತ ಉದ್ಯಮಿಗಳಾದ ಮಯೂರ ಗೌಡಾ ಮಂಗಳೂರ, ಮತ್ತು ಕಾಲೇಜಿನ ಪ್ರಾಚಾರ್ಯರರಾದ ಸಿ.ಎಸ. ರಾಠೋಡ ಮತ್ತು ಮುಖಂಡರು ಹಾಗೂ ಇತರರು ಉಪಸ್ಥಿತÀರಿದ್ದರು.