ಉಗ್ರಾವತಾರ ಹಾಡು ಅನಾವರಣ

ಹಿರಿಯ ನಟಿ ಪ್ರಿಯಾಂಕ ಉಪೇಂದ್ರ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ “ಉಗ್ರವತಾರ” ಚಿತ್ರದ ಹಾಡು ಬಿಡುಗಡೆಯಾಗಿದೆ.

ಸಿದ್ದಿ ಸಹೋದರಿಯರು ಹಾಡಿರುವ ‘ಹಂಗೆ ಬರತೋಳ್ ನೋಡೋ’ ಗೀತೆಯನ್ನು ನಟ ಉಪೇಂದ್ರ  ಬಿಡುಗಡೆ ಮಾಡಿ ಪತ್ನಿಯ ಚಿತ್ರಕ್ಕೆ ಶುಭ ಕೋರಿದರು.

ಈ ವೇಳೆ ಉಪೇಂದ್ರ, ಬಹಳ ವರ್ಷಗಳ ನಂತರ ಮಹಿಳಾ ಪ್ರಧಾನ ಆಕ್ಷನ್ ಚಿತ್ರ ಬರುತ್ತಿದೆ.  ಸಾಹಸ ಚಿತ್ರದಲ್ಲಿ ಮಾಲಾಶ್ರೀ, ಅದರ ಹಿಂದೆ ಮಂಜುಳಾ ಮಾಡ್ತಾ ಇದ್ದರು. ಸದ್ಯ ಫಿಮೇಲ್ ಸಿನಿಮಾಗಳು ಕಡಿಮೆಯಾಗುತ್ತಿದೆ. ಈ ರೀತಿಯ ಪಾತ್ರ ಪ್ರಿಯಾಂಕ ಮಾಡಿದ್ದಾರೆ. ನಿರ್ಮಾಪಕರು ಎಲ್ಲೂ ರಾಜಿಯಾಗದೆ ಚಿತ್ರೀಕರಣ ಮಾಡಿದ್ದಾರೆ ಎಂದರು.

 ನಾಯಕಿ ಪ್ರಿಯಾಂಕ ಉಪೇಂದ್ರ ಮಾತನಾಡಿ ಡ್ಯೂಪ್ ಬಳಸದೆ ಫೈಟ್ ಮಾಡಿದ್ದೇನೆ. ಅದಕ್ಕಾಗಿ ತರಬೇತಿ ಪಡೆದುಕೊಂಡಿದ್ದೆ. ಮಹಿಳಾ ಅಧಿಕಾರಿಗಳು ಹೇಗೆ ಫೈಟ್ ಮಾಡುತ್ತಾರೆ ಎಂಬುದನ್ನು ನೋಡಿಕೊಂಡು ಅದೇ ರೀತಿ ಕ್ಯಾಮಾರ ಮುಂದೆ ಅಭಿನಯಿಸಿದ್ದೇನೆ. ಸಮಾಜದಲ್ಲಿ ಶೋಷಣೆಗೆ ಒಳಗಾಗಿ, ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರುಗಳಿಗೆ ಸಹಕಾರಿಯಾಗಿ ಪೊಲೀಸ್ ಇರುತ್ತಾರೆ ಎಂಬುದನ್ನು ಹೇಳಲಾಗಿದೆ ಎಂದರು.

ಸಿದ್ದಿ ಸಹೋದರಿಯಲ್ಲಿ ಒಬ್ಬರಾದ ಗಿರಿಜಾ   ಕಥೆ ಕೇಳಿ ಅದಕ್ಕೆ ತಕ್ಕಂತೆ ಸಾಹಿತ್ಯ ಬರೆಯಲಾಗಿದೆ. ಪ್ರಿಯಾಂಕ ಅವರೊ ಜತೆಗೆ ಡ್ಯಾನ್ಸ್ ಮಾಡಿದ್ದು ತೃಪ್ತಿ ತಂದುಕೊಟ್ಟಿದೆ. ‘ಕನ್ನಡ ಹಾಗೂ ಕೊಂಕಣಿ ಭಾಷೆಯನ್ನು ಬಳಸಲಾಗಿದೆ ಎನ್ನುವ ವಿವರ ನೀಡಿದರು. ನಿರ್ದೇಶಕ ಗುರುಮೂರ್ತಿ, ನಿರ್ಮಾಪಕ ಸತೀಶ್,  ಖಳನಟ ಸೂರ್ಯ ಪ್ರವೀಣ್,  ಸಂಭಾಷಣೆ ಬರೆದಿರುವ ಕಿನ್ನಾಳ್‍ರಾಜ್, ಛಾಯಾಗ್ರಾಹಕ ನಂದಕುಮಾರ್ ಅನುಭವ ಹಂಚಿಕೊಂಡರು.