ಉಗ್ರಾಣ ಕಟ್ಟಡ ಬಿಲ್ ತಡೆಯಿಡಿಯಲು ಆಗ್ರಹ

ರಾಯಚೂರು. ಮಾ.೨೧-ಹಳೆ ತಲಮಾರಿ ಗ್ರಾಮದ ಉಗ್ರಣ ಕಟ್ಟಡ ನಿರ್ಮಾಣ ಬಿಲ್ ಮತ್ತು ಜೆ.ಜೆ. ಎಂ.ಕಾಮಗಾರಿ ಯೋಜನೆಯನ್ನು ಜಿಲ್ಲಾಡಳಿತ ಕೂಡಲೇ
ತಡೆಯಿಡಿಯಬೇಕು ಎಂದು ಗ್ರಾಮದ ಮುಖಂಡ ಮುನೀರ್ ಅವರು ಆಗ್ರಹಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಾಲೂಕಿನ ತಲಮಾರಿ ಗ್ರಾಮವು ಸರ್ಕಾರದ ಆದೇಶದಂತೆ ಸ್ಥಳಾಂತರಗೊಂಡಿರುತ್ತದೆ,ನೆರೆಹಾವಳಿಗೆ ಸಾವಿರಾರು ಕೋಟಿ ತುತ್ತಾಗಿರುವ ಗ್ರಾಮಸ್ಥರಿಗೆ ಮನೆಗಳನ್ನು ಮಂಜೂರು ಮಾಡಿದ್ದು ಹಳೆ ಸ್ಥಳವನ್ನು ಬಿಟ್ಟು ಹೊಸ ಸ್ಥಳದಲ್ಲಿ ನಿರ್ಮಿಸಿರುವ ಮನೆಗಳಲ್ಲಿ ವಾಸಿಸಲು ಸರ್ಕಾರ ಸೂಚಿರುತ್ತದೆ ಈ ಸ್ಥಳದಲ್ಲಿ ಈಗಾಗಲೇ ಸುಮಾರು ೩೫೦ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದಾರೆ.ಗ್ರಾಮದ ಮುಖಂಡರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಾನೂನು ವಿರುದ್ಧ ನದಿಯ ಪ್ರವಾಹಕ್ಕೆ ತುತ್ತಾಗುವಂತೆ ಹಳೆ ಗ್ರಾಮದಲ್ಲಿ ಉಗ್ರಾಣವನ್ನು ನಿರ್ಮಿಸಿರುತ್ತಾರೆ ಇದರಿಂದ ಗ್ರಾಮದ ಜನತೆಗೆ ಯಾವುದೇ ಉಪಯೋಗ ಬರುವುದಿಲ್ಲ
ಮಳೆಗಾಲದ ಸಂದರ್ಭದಲ್ಲಿ ಪ್ರವಾಹ ಬಂದಾಗ ನೀರು ತುಂಬುವ ಸಂಭವ ಇದೆ ಇದರಿಂದ ರೈತರು ಶೇಖರಿಸಿ ಇಟ್ಟಿರುವ ದವಸ ಧನ್ಯಗಳು ನೀರು ಪಾಲು ಆಗುತ್ತದೆ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತದೆ.
ಅದರಂತೆ ಹಳೆ ತಲಮಾರಿ ಗ್ರಾಮದಲ್ಲಿ ೫ ವರ್ಷದ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದ್ದು ಮತ್ತೆ ಜೆಜೆಎಂ ಕಾಮಗಾರಿ ಯೋಜನೆಯಲ್ಲಿ ೧ ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಮರಳಿ ಮಾಂಜುರು ಮಾಡಲಾಗಿದೆ,ಈ ಯೋಜನೆಯನ್ನು ನಿರ್ಮಿಸಿದರೆ ಗ್ರಾಮದ ಜನತೆಗೆ ಯಾವುದೇ ಉಪಯೋಗವಾಗುವುದಿಲ್ಲ ಇದನ್ನು ಕೊಡಲೇ ತಡೆಯಿಡಿದು ಹೊಸ ಗ್ರಾಮದಲ್ಲಿ ನಿರ್ಮಿಸಿದರೆ ವಿದ್ಯಾರ್ಥಿಗಳಿಗೆ, ಗ್ರಾಮದ ಜನತೆಗೆ ಉಪಯೋಗವಾಗುತ್ತದೆ. ಈ ಕುರಿತು ಹಲವಾರು ಬಾರಿ ಜಿಲ್ಲಾಡಳಿತ, ಜಿಲ್ಲಾಪಂಚಯಿತಿ,ಶಾಸಕರಿಗೆ ಮನವಿ ಸಲ್ಲಿಸಿದರು ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ ಕಟ್ಟಡ ಬಿಲ್ ಮತ್ತು ಜೆಜೆಎಂ ಯೋಜನೆಯನ್ನು ತಡೆದು ಹೊಸ ತಲಮಾರಿ ಗ್ರಾಮದಲ್ಲಿ ಮಂಜೂರು ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಭೀಮೇಶ್, ವಲಿಯುದ್ದೀನ್, ಶಿವರಾಜ,ರಾಮಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.