ಉಗ್ರರ ದಾಳಿ ಕರ್ನಲ್, ಪತ್ನಿ, ಪುತ್ರ, ಮೂವರು ಯೋಧರು ಸೇರಿ 6 ಮಂದಿ‌ ಹುತಾತ್ಮ

ಇಂಪಾಲ, ನ.13-ಮ್ಯಾನ್ಮಾರ್ ಗಡಿಗೆ ಹೊಂದಿ ಕೊಂಡಿರುವ ಮಣಿಪುರದಲ್ಲಿ ಉಗ್ರಗಾಮಿಗಳು ನಡೆಸಿ ಮಾರಣ ಹೋಮದಲ್ಲಿ ಭಾರತೀಯ ಸೇನೆಯ ಕರ್ನಲ್, ಪತ್ನಿ, ಪುತ್ರ ಹಾಗೂ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಇದು ಈ ಭಾಗದಲ್ಲಿ ಭಯೋತ್ಪಾದಕರು ನಡೆಸಿದ ಅತ್ಯಂತ ಭಯಾನಕ ದಾಳಿ‌ ಇದಾಗಿದೆ.
ಮಣಿಪುರದ ಚೌರಾಚಾಂದ್ ಪುರ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಅಸ್ಸಾಂ ರೈಫಲ್ಸ್ 46ನೇ ಕಮಾಂಡಿಂಗ್ ಅಧಿಕಾರಿ ವಿಪ್ಲವ್ ತ್ರಿಪಾಠಿ ಅವರು ಸೇನೆಯ ಮುಂಚೂಣಿ ನೆಲೆಗಳಿಗೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದ ವೇಳೆ ಈ ಭೀಕರ ನರಮೇಧ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಮಣಿಪುರ ಮೂಲದ ಪೀಪಲ್ಸ್ ಲಿಬರೇಷನ್ ಆರ್ಮಿ ಭಯೋತ್ಪಾದಕ ಸಂಘಟನೆ ಈ ವಿಧ್ವಂಸಕ ಕೃತ್ಯ ನಡೆಸಿದೆ ಎಂದು ನಂಬಲಾಗಿದೆ.
ಆದರೆ ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ.
ಘಟನಾ ಸ್ಥಳದಲ್ಲಿ ಭಯೋತ್ಪಾದಕರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ಮುಂದುವರಿದಿದೆ. ರಾಜಧಾನಿ ಇಂಫಾಲದಿಂದ 100 ಕಿ.ಮೀ ದೂರದ ಗುಡ್ಡಗಾಡು ಗ್ರಾಮದಲ್ಲಿ ಈ ದಾಳಿ ನಡೆದಿದೆ.
ಸೇನಾ ಮುಖ್ಯಸ್ಥ ಹಾಗೂ ಮತ್ತವರ ಕುಟಂಬಸ್ಥರು ಹುತಾತ್ಮರಾಗಿರುವುದನ್ನು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಖಚಿತಪಡಿಸಿದ್ದಾರೆ.
ಗುಂಡಿನ ದಾಳಿ ಮುಂದುವರಿದಿದ್ದು, ಓರ್ವ ನಾಗರಿಕ ಮೃತಪಟ್ಟಿದ್ದಾನೆ.