ಉಗ್ರರ ದಾಳಿಗೆ ೭೯ ಮಂದಿ ಸಾವು

ನೈಸರ್.ಜ೩-ಇಸ್ಲಾಮಿಕ್ ಉಗ್ರರು ದಾಳಿ ನಡೆಸಿದ ಪರಿಣಾಮ ಸುಮಾರು ೭೯ ಜನ ಸಾವನ್ನಪ್ಪಿರುವ ಘಟನೆ ನೈಸರ್ ನ ಎರಡು ಹಳ್ಳಿಗಳಲ್ಲಿ ನಡೆದಿದೆ. ನೈಸರನ ಟೊಂಬಂಗೌ ಗ್ರಾಮದಲ್ಲಿ ೪೯ ಮಂದಿ ಉಗ್ರರ ದಾಳಿಗೆ ತುತ್ತಾಗಿದ್ದು, ೧೭ ಮಂದಿ ಗಾಯಗೊಂಡಿದ್ದಾರೆ. ಇನ್ನು ಜಾರೌಮ್‌ಡಾರೆಎಂಬಲ್ಲಿ ೩೦ ಮಂದಿ ಸಾವನ್ನಪ್ಪಿದ್ದು,ಈ ಎರಡು ದಾಳಿಗಳು ನೈಸರ್ ನ ಪಶ್ಚಿಮ ಗಡಿಯ ಬಳಿ ನಡೆದಿದೆ.
ಇನ್ನು ಇತ್ತೀಚೆಗೆ ಆಫ್ರಿಕಾದ ಸಾಹೇಲ್ ಪ್ರದೇಶದಲ್ಲಿ ಉಗ್ರಗಾಮಿಗಳು ಹಲವಾರು ಹಿಂಸಾತ್ಮಕ ಕೃತ್ಯಗಳನ್ನ ನಡೆಸಿದ್ದಾರೆ ಎನ್ನಲಾಗಿದೆ. ಜೊತೆಗೆ ಕಳೆದ ಶನಿವಾರ ನೈಸರ್ ನ ಮಾಲಿಯಲ್ಲಿ ತನ್ನ ಇಬ್ಬರು ಸೈನಿಕರನ್ನ ಉಗ್ರಗಾಮಿಗಳು ಕೊಂದಿದ್ದಾರೆಂದು ಫ್ರಾನ್ಸ್ ತಿಳಿಸಿದೆ. ಇನ್ನು ಮಾಲಿಯಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಮೂರು ಫ್ರೆಂಚ್ ಸೈನಿಕರನ್ನು ಹತ್ಯೆ ಮಾಡಿದ್ದು, ಈ ಕೃತ್ಯದ ಹಿಂದೆ ಅಲ್-ಖೈದಾದ ಸಂಪರ್ಕ ಹೊಂದಿರುವುದಾಗಿ ತಿಳಿದು ಬಂದಿದೆ.
ಇನ್ನು ಪಶ್ಚಿಮ ಆಫ್ರಿಕಾದ ಇಸ್ಲಾಮಿಸ್ಟ್‌ಉಗ್ರರ ವಿರುಧ್ದ, ಫ್ರಾನ್ಸ್, ಪಶ್ಚಿಮ ಆಫ್ರಿಕಾದ ಮತ್ತು ಯುರೋಪಿಯನ್ ಮಿತ್ರ ರಾಷ್ಟ್ರಗಳ ಕ್ರಮಕೈಗೊಳ್ಳಲು ಮುಂದಾಗಿವೆ. ಆದರೆ ನೈಜರ್ ಮತ್ತು ಮಾಲಿಯಂತಹ ದೇಶಗಳಲ್ಲಿ ಜನಾಂಗೀಯ ಹಿಂಸೆ, ಮಾನವ ಮತ್ತು ಮಾದಕವಸ್ತು ಕಳ್ಳಸಾಗಣೆ ಮತ್ತು ದರೋಡೆಯಲ್ಲಿ ಅತಿ ಹೆಚ್ಚು ಪ್ರಭಾವಿತವಾಗಿದ್ದು, ಇತ್ತೀಚೆಗೆ ನೈಜರ್‌ನ ಎರಡು ಹಳ್ಳಿಗಳ ಮೇಲೆ ದಾಳಿಯನ್ನ ಅಲ್ಲಿನ ಸರ್ಕಾರ ಫ್ರೆಂಚ್ ಆರ್‌ಎಫ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದೆ.
ಇನ್ನು ಈ ಪ್ರದೇಶದಲ್ಲಿನ ನಾಗರೀಕರನ್ನ ರಕ್ಷಿಸುವ ಸಲುವಾಗಿ ವಿಶೇಷ ಸೈನಿಕರನ್ನ ನಿಯೋಜನೆ ಮಾಡಿರುವುದಾಗಿ ಆಂತರಿಕ ಸಚಿವ ಅಲ್ಕಾಚೆ ಅಲ್ಹಡಾ ಹೇಳಿದ್ದಾರೆ.
ಇನ್ನು ದೇಶದ ಟಿಲ್ಲಾಬೆರಿ ಪ್ರದೇಶವು ೨೦೧೭ ರಿಂದ ತುರ್ತು ಪರಿಸ್ಥಿತಿಯಲ್ಲಿದ್ದು, ಜಿಹಾದಿ ಗುಂಪುಗಳ ದಾಳಿಗಳು ಸಾಮಾನ್ಯವಾಗಿ ಬಿಟ್ಟಿದೆ ಎನ್ನಲಾಗಿದೆ. ಇನ್ನು ಕಳೆದ ತಿಂಗಳು ನೈಜೀರಿಯಾದ ಜಿಹಾದಿ ಗುಂಪು ಬೊಕೊ ಹರಮ್ ಆಗ್ನೇಯದ ಡಿಫಾ ಪ್ರದೇಶದಲ್ಲಿ ಸುಮಾರು ೨೭ ಜನರನ್ನ ಹತ್ಯೆಗೈದಿತ್ತು.
ಅಧ್ಯಕ್ಷ ಮಹಮದೌ ಇಸೌಫೌ ತನ್ನ ಅವಧಿಯ ಸ್ಥಾನದಿಂದ ಕೆಳಗಿಳಿಯುತ್ತಿದ್ದು, ನೈಜರ್ ನಲ್ಲಿ ರಾಷ್ಟ್ರೀಯ ಚುನಾವಣೆಗಳಿಂದಾಗಿ ಇತ್ತೀಚಿನ ದಾಳಿಗಳು ನಡೆಯುತ್ತಿವೆ.