ಉಗ್ರರ ದಮನ ಮೋದಿ ಶಪಥ

ನವದೆಹಲಿ,ನ.೧೮- ಉಗ್ರರ ವಿರುದ್ಧ ಸಮರ ಸಾರಿರುವ ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯುವತನಕ ವಿರಮಿಸುವುದಿಲ್ಲ ಎಂದು ಘೋಷಿಸಿದ್ದಾರೆ. ನಮ್ಮ ದೇಶದ ನಾಗರೀಕರು ಸುರಕ್ಷಿತವಾಗಿರಬೇಕಾದರೆ ಉಗ್ರರ ನಮ್ಮ ಮನೆಯ ಬಾಗಿಲವರೆಗೂ ಬರುವವರೆಗೆ ನಾವು ಕಾಯಲು ಸಾಧ್ಯವಿಲ್ಲ. ಅವರನ್ನು ಬೆನ್ನಟ್ಟಿಕೊಂಡು ಹೋಗಿ ಉಗ್ರರ ಜಾಲಗಳನ್ನು ಎಡೆ ಮುರಿಕಟ್ಟಬೇಕು. ಅವರಿಗೆ ಹಣ ಸಿಗಬಾರದು. ಉಗ್ರರ ಆರ್ಥಿಕತೆಗೆ ಹೊಡೆತ ನೀಡಬೇಕು. ಆಗ ಮಾತ್ರ ಭಯೋತ್ಪಾದನೆ ಕಿತ್ತೊಗೆಯಲು ಸಾಧ್ಯ ಎಂದು ಹೇಳಿದ್ದಾರೆ.ಭಯೋತ್ಪಾದನಾ ಸಂಘಟನೆಗಳಿಗೆ ಹಣದ ಪೂರೈಕೆ ಸ್ಥಗಿತಗೊಳಿಸುವ ಕುರಿತ ೩ ನೇ ಸಚಿವರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಭಯೋತ್ಪಾದನೆಗೆ ಸಂಬಂಧಪಟ್ಟ ಒಂದೇ ಒಂದು ದಾಳಿ ಸಹ ಹಲವಾರು ಎಂದು ನಾವು ಪರಿಗಣಿಸುತ್ತೇವೆ. ವಿಧ್ವಂಸಕ ಕೃತ್ಯಗಳಲ್ಲಿ ಕಳೆದು ಹೋದ ಒಂದು ಜೀವವು ಸಹ ಹಲವಾರು ಹೀಗಾಗಿ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಬೇಕೆಂದು ಪ್ರತಿಪಾದಿಸಿದರು.ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೊಗೆಯಲು ದೊಡ್ಡ ಪೂರ್ವಭಾವಿ ಪ್ರಕ್ರಿಯೆಯ ಅಗತ್ಯವಿದೆ. ಭಯೋತ್ಪಾದಕರ ವಿಭಿನ್ನ ದಾಳಿಗಳಿಗೆ ಪ್ರತಿಕ್ರಿಯೆಯ ತೀವ್ರತೆಯೂ ಎಲ್ಲ ಸಂಭವಿಸುತ್ತದೆ ಎಂಬುದರ ಆಧಾರದ ಮೇಲೆ ಬದಲಾಗುವುದಿಲ್ಲ. ಎಲ್ಲ ಭಯೋತ್ಪಾದಕ ದಾಳಿಗಳು ಸಮಾನ ಆಕ್ರೋಶ ಮತ್ತು ಕ್ರಮವನ್ನು ಹೊಂದಿರುತ್ತದೆ ಎಂದು ತಿಳಿಸಿದರು.
ಕಳೆದ ಕೆಲವು ದಶಕಗಳಿಂದ ಭಯೋತ್ಪಾದನೆ ವಿವಿಧ ಆಯಾಮಗಳಲ್ಲಿ ಭಾರತವನ್ನು ಘಾಸಿಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ತಮ್ಮ ನೇತೃತ್ವದ ಸರ್ಕಾರ ದಿಟ್ಟತನದಿಂದ ಭಯೋತ್ಪಾದನೆ ವಿರುದ್ಧ ಹೋರಾಡಿದೆ ಎಂದು ಅವರು ಹೇಳಿದರು.
ಭಯೋತ್ಪಾದನೆ ಮಾನವೀಯತೆ, ಸ್ವಾತಂತ್ರ್ಯ ಮತ್ತು ನಾಗರಿಕತೆಯ ಮೇಲೆ ದಾಳಿಯಾಗಿದೆ. ಜಗತ್ತಿನಾದ್ಯಂತ ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸುವ ಮೊದಲೇ ನಮ್ಮ ದೇಶ ಕರಾಳ ಮುಖವನ್ನು ಖಂಡಿದೆ ಎಂದರು.
ತಾವು ಒಂದೇ ಒಂದು ವಿಧ್ವಂಸಕ ಕೃತ್ಯವನ್ನು ಲಘುವಾಗಿ ಪರಿಗಣಿಸುವುದಿಲ್ಲ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದೇಶಗಳು ಅದರ ಪರಿಣಾಮ ಎದುರಿಸುತ್ತಿವೆ ಎಂದು ನೆರೆಯ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ ನಡೆಸಿದರು.
ಭಯೋತ್ಪಾದಕ ಸಂಘಟನೆಗಳು ಹಲವು ಮೂಲಗಳ ಮೂಲಕ ಹಣ ಪಡೆಯುತ್ತೇವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದಕ್ಕಾಗಿ ಕೆಲವು ರಾಜ್ಯ, ಕೆಲವು ದೇಶಗಳು ತಮ್ಮ ವಿದೇಶಾಂಗ ನೀತಿ ಭಾಗವಾಗಿ ಭಯೋತ್ಪಾದನೆಯನ್ನು ಬೆಂಬಲಿಸುತ್ತೇವೆ. ಅವುಗಳು ರಾಜಕೀಯ ಸೈದ್ಧಾಂತಿಕ ಹಾಗೂ ಆರ್ಥಿಕ ಕೊಡುಗೆಗಳನ್ನು ನೀಡುತ್ತೇವೆ ಎಂಬುದು ಗೊತ್ತಿರುವ ವಿಚಾರ ಎಂದು ಹೇಳಿದರು.ಭಯೋತ್ಪಾದಕ ಪಿಡುಗಿಗೆ ಜಂಟಿ ಪರಿಹಾರ ಕಂಡುಕೊಳ್ಳುವುದು ಅತ್ಯಗತ್ಯವಾಗಿದೆ. ಅಮೂಲಾಗ್ರಿಕರಣವನ್ನು ಬೆಂಬಲಿಸಿರುವರಿಗೆ ಯಾವುದೇ ದೇಶದಲ್ಲಿ ಸ್ಥಾನವಿಲ್ಲ ಎಂದು ಹೇಳಿದರು.ಭಯೋತ್ಪಾದಕ ಸಂಘಟನೆಗಳು ಹಲವು ಮೂಲಗಳ ಮೂಲಕ ಹಣ ಪಡೆಯುತ್ತವೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಕೆಲವು ದೇಶಗಳು ತಮ್ಮ ವಿದೇಶಾಂಗ ನೀತಿಯ ಭಾಗವಾಗಿ ಭಯೋತ್ಪಾದನೆ ಬೆಂಬಲಿಸುತ್ತವೆ ಎಂದು ಹೆಸರೇಳದೆ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ವಿರುದ್ದ ಹರಿಹಾಯ್ದಿದ್ದರು.ಜೊತೆಗೆ ಭಯೋತ್ಪಾದಕ ಸಂಘಟನೆಗಳಿಗೆ ರಾಜಕೀಯ, ಸೈದ್ಧಾಂತಿಕ ಮತ್ತು ಆರ್ಥಿಕ ಕೊಡುಗೆಗಳನ್ನು ನೀಡುವ ಮೂಲಕ ವಿಶ್ವದಾದ್ಯಂತ ದುಷ್ಕೃತ್ಯ ನಡೆಸಲು ಕಾರಣವಾಗುತ್ತಿದ್ದಾರೆ.ಇಂತವರನ್ನು ಗುರುತಿಸಿ ಮಟ್ಟ ಹಾಕುವುದು ಕೂಡ ಮುಖ್ಯವಾಗಿದೆ ಎಂದಿದ್ದಾರೆ.ಭಯೋತ್ಪಾದನೆ ಸಂಘಟನೆಗಳಿಗೆ ಆರ್ಥಿಕ ನೀಡುವ ದೇಶಗಳು ಮತ್ತು ಸಂಸ್ಥೆಗಳನ್ನು ಜಗತ್ತು ಗಂಭೀರವಾಗಿ ಪರಿಗಣಿಸಬೇಕಾಗಿದೆ. ದೇಶದಲ್ಲಿ ಭಯೋತ್ಪಾದನೆಯ ಭೀಕರತೆ ಎದುರಿಸಿದೆ. ದಶಕಗಳಿಂದ ವಿವಿಧ ರೂಪಗಳಲ್ಲಿ ಭಯೋತ್ಪಾದನೆಯಿಂದ ಭಾರತ ಬಸವಳಿದಿದೆ. ಆದರೆ ಭಯೋತ್ಪಾದನೆಯನ್ನು ಧೈರ್ಯದಿಂದ ಎದುರಿಸಿದ್ದೇವೆ ಎಂದು ತಿಳಿಸಿದ್ಧಾರೆ.ಭಯೋತ್ಪಾದನೆಯ ಅಪಾಯಗಳ ಬಗ್ಗೆ ಜಗತ್ತಿಗೆ ಯಾರೂ ನೆನಪಿಸುವ ಅಗತ್ಯವಿಲ್ಲ. ಆದಾಗ್ಯೂ, ಕೆಲವು ವಲಯಗಳಲ್ಲಿ ಭಯೋತ್ಪಾದನೆಯ ಬಗ್ಗೆ ಇನ್ನೂ ಕೆಲವು ತಪ್ಪು ಕಲ್ಪನೆಗಳಿವೆ ಎಂದು ಹೇಳಿದ್ದಾರೆ.ಸಮಾವೇಶದಲ್ಲಿ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಪಾಲ್ಗೊಂಡಿದ್ದರು.