ಉಗ್ರರ ಜತೆ ನಂಟು ಪೊಲೀಸ್ ಅಧಿಕಾರಿ ಸೆರೆ

ನವದೆಹಲಿ,ಸೆ.೨೨- ಭಯೋತ್ಪಾದಕರ ಜತೆ ನಂಟು ಹೊಂದಿದ್ದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ಉಪ ಅಧೀಕ್ಷಕರನ್ನು ಬಂಧಿಸಲಾಗಿದೆ.
ಭಯೋತ್ಪಾದಕ ಶೇಖ್ ಆದಿಲ್ ಮುಷ್ತಾಕ್ ಬಂಧನದಿಂದ ತಪ್ಪಿಸಿಕೊಳ್ಳಲು ಭಯೋತ್ಪಾದಕ ಕಾರ್ಯಕರ್ತನಿಗೆ ಸಹಾಯ ಮಾಡಿದ ಮತ್ತು ಆತನನ್ನು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯನ್ನು ಸಿಲುಕಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸ್ ಉಪ ಅಧೀಕ್ಷಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳ ಮೇಲೆ ಅಧಿಕಾರಿಯನ್ನು ಬಂಧಿಸಲಾಗಿತ್ತು. ಬಂಧಿತ ಅಧಿಕಾರಿಯನ್ನು ಶ್ರೀನಗರದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಜುಲೈನಲ್ಲಿ ಬಂಧನಕ್ಕೊಳಗಾದ ಭಯೋತ್ಪಾದಕ ಆರೋಪಿ ಆದಿಲ್ ಮುಷ್ತಾಕ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಖಚಿತ ಮಾಹತಿ ಆಧರಿಸಿ ಬಂಧಿಸಲಾಗಿದೆ. ಕಾನೂನಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಭಯೋತ್ಪಾಧಕರಿಗೆ ಸಲಹೆ ನೀಡುತ್ತಿದ್ದ ಅಧಿಕಾರಿ ಈಗ ಪೊಲೀಸ್ ಬಂಧಿಯಾಗಿದ್ದಾರೆ.
ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಆದಿಲ್ ಮುಷ್ತಾಕ್ ಟೆಲಿಗ್ರಾಂ ಆಪ್‌ನಲ್ಲಿ ಆರೋಪಿಗಳೊಂದಿಗೆ ಮಾತನಾಡುತ್ತಿದ್ದರು. “ಭಯೋತ್ಪಾದಕ ಆರೋಪಿಗಳು ಮತ್ತು ಉಪ ಅಧೀಕ್ಷಕರ ನಡುವೆ ಕನಿಷ್ಠ ೪೦ ಕರೆಗಳಷ್ಟು ಸಂಭಾಷಣೆ ನಡೆದಿದೆ, ಬಂಧನದಿಂದ ತಪ್ಪಿಸಿಕೊಳ್ಳುವುದು ಮತ್ತು ಕಾನೂನು ನೆರವು ಪಡೆಯುವುದು ಹೇಗೆ ಎಂದು ಅವರಿಗೆ ಮಾರ್ಗದರ್ಶನ ನೀಡುತ್ತಿದ್ದರು” ಎಂದು ತನಿಖೆಯ ಮೇಲ್ವಿಚಾರಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಂತ್ರಿಕ ಪುರಾವೆಗಳು ಮತ್ತು ಹಣದ ಜಾಡು ಆಧರಿಸಿ ಪೊಲೀಸರು ಅಧಿಕಾರಿ ವಿರುದ್ಧ ಜಲನಿರೋಧಕ ಪ್ರಕರಣವನ್ನು ದಾಖಲಿಸಿದ್ದಾರೆ. “ಭಯೋತ್ಪಾದಕ ಆರೋಪಿಗಳಿಗೆ ಅವನು ಹೇಗೆ ಸಹಾಯ ಮಾಡುತ್ತಿದ್ದ ಎನ್ನವುದಕ್ಕೆ ಸಾಕ್ಷಿ ಸಮೇತ ಪೊಲೀಸ್ ಅಧಿಕಾರಿ ಸಿಕ್ಕಿ ಬಿದ್ದಿದ್ದಾರೆ ಎಂದಿದ್ದಾರೆ.