ಉಗ್ರರಿಗೆ ಕೆನಡಾ ಕುಮ್ಮಕ್ಕು ಭಾರತ ಕಳವಳ

ನವೆದಹಲಿ,ಡಿ.೨೨- ಕೆನಡಾ ಭಯೋತ್ಪಾದಕರಿಗೆ ಜಾಗ ನೀಡುತ್ತಿದೆ ಎಂದು ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಈಗಾಗಲೇ ಹಳಸುವ ಹಂತದಲ್ಲಿರುವ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವೃದ್ಧಿಗೆ ಮತ್ತಷ್ಟು ಅಡ್ಡಿಯಾಗುವ ಸಾಧ್ಯತೆಗಳಿವೆ.
ಭಯೋತ್ಪಾದಕರು ಮತ್ತು ಉಗ್ರಗಾಮಿಗಳಿಗೆ ಕೆನಡಾ ಇತ್ತೀಚಿನ ದಿನಗಳಲ್ಲಿ ಹೆಚ್ಚು ನೆರವು ನೀಡುತ್ತಿದೆ.ಅಂತಾರಾಷ್ಟ್ರಿಯ ಶಾಂತಿ ಮತ್ತು ನೆಮ್ಮದಿಗೆ ಭಂಗ ಎದುರಾಗಿದೆ. ಅದರಲ್ಲಿಯೂ ಭಾರತದ ಮೇಲೆ ಸಂಚು ರೂಪಿಸುವ ಮಂದಿಗೆ ನೆರವು ನೀಡುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಸಿಖ್ ಪ್ರತ್ಯೇಕತಾವಾದಿಯನ್ನು ಗುರುಪತ್ವಂತ್ ಸಿಂಗ್ ಪನ್ನುನ್ ಕೊಲ್ಲುವ ಸಂಚಿನಲ್ಲಿ ಭಾರತೀಯ ಪ್ರಜೆಯ ಮೇಲೆ ಅಮೇರಿಕಾದ ದೋಷಾರೋಪಣೆ ಮಾಡಿದ ನಂತರ ಕೆನಡಾ ಮತ್ತು ಭಾರತದ ಸಂಬಂಧ ಹಳಸಿದೆ.ಅದು ಮತ್ತಷ್ಟು ಹದಗೆಡುವಂತಾಗಿದೆ ಎಂದಿದ್ದಾರೆ
ಭಯೋತ್ಪಾದಕರ ವಿಷಯದಲ್ಲಿ “ನಮ್ಮ ನಿಲುವು ಸ್ಥಿರವಾಗಿದೆ. ಮತ್ತು ಇದನ್ನು ಎತ್ತಿದಾಗಲೆಲ್ಲಾ ಸಮಸ್ಯೆಯನ್ನು ಹೇಗೆ ನೋಡುತ್ತೇವೆ ಎಂಬುದನ್ನು ಎತ್ತಿ ತೋರಿಸಿದ್ದೇವೆ.””ಪ್ರಮುಖ ಸಮಸ್ಯೆಯು ಉಗ್ರಗಾಮಿಗಳು ಮತ್ತು ಭಯೋತ್ಪಾದಕರಿಗೆ ಮತ್ತು ಕೆನಡಾದಲ್ಲಿ ಅದರಲ್ಲಿಯೂ ಭಾರತ ವಿರೋಧಿ ಅಂಶಗಳಿಗೆ ನೀಡಿದ ಜಾಗವಾಗಿ ಉಳಿದಿದೆ” ಎಂದು ಹೇಳಿದ್ದಾರೆ.
“ನೀವು ಇತ್ತೀಚೆಗೆ ವಿದೇಶಾಂಗ ಸಚಿವರಿಂದ ಮತ್ತು ಇತರರಿಂದ ಆ ಪ್ರಕರಣದ ಬೆಳವಣಿಗೆಗಳ ಬಗ್ಗೆ ಕೇಳಿದ್ದೀರಿ ಎಂದು ಭಾವಿಸುತ್ತೇನೆ.ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುವ ಇಂತಹ ಉಗ್ರಗಾಮಿ ಅಂಶಗಳ ಮೇಲೆ ಕ್ರಮ ತೆಗೆದುಕೊಳ್ಳುತ್ತವೆ ಎನ್ನವು ನಂಬಿಕೆ ಇದೆ ಎಂದಿದ್ದಾರೆ
ಅಮೆರಿಕದ ದೋಷಾರೋಪಣೆ ಕುರಿತು ಭಾರತ ಸರ್ಕಾರ ಹೆಚ್ಚು ಸಮಚಿತ್ತದ ಸ್ವರವನ್ನು ಅಳವಡಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಟ್ಟಂತಿದೆ . ಜೂನ್ ೧೮ ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ “ಸಂಭಾವ್ಯ” ಒಳಗೊಳ್ಳುವಿಕೆಯ ಬಗ್ಗೆ ಸೆಪ್ಟೆಂಬರ್ ೧೮ ರಂದು ಟ್ರೂಡೊ ಆರೋಪಿಸಿದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ತೀವ್ರವಾಗಿ ಹದಗೆಟ್ಟಿದೆ
ನವೆಂಬರ್‍ನಲ್ಲಿ, ಅಮೇರಿಕಾ ಮತ್ತು ಕೆನಡಾದ ದ್ವಿಪೌರತ್ವ ಹೊಂದಿರುವ ಸಿಖ್ ಪ್ರತ್ಯೇಕತಾವಾದಿಯನ್ನು ಕೊಲ್ಲುವ ವಿಫಲ ಸಂಚಿನಲ್ಲಿ ಒಬ್ಬ ನಿಖಿಲ್ ಗುಪ್ತಾ ಭಾರತೀಯ ಸರ್ಕಾರಿ ಉದ್ಯೋಗಿಯೊಂದಿಗೆ ಕೆಲಸ ಮಾಡುತ್ತಿದ್ದಾನೆ ಎಂದು ಅಮೇರಿಕಾದ ಫೆಡರಲ್ ಪ್ರಾಸಿಕ್ಯೂಟರ್ ಗಳು ಆರೋಪಿಸಿದ್ದರು
.ಪ್ರತ್ಯೇಕತಾವಾದಿ ಸಿಖ್ ನಾಯಕನನ್ನು ಹೆಸರಿಸದಿದ್ದರೂ, ಮಾಧ್ಯಮ ವರದಿಗಳು ಅವರನ್ನು ಗುರುಪತ್ವಂತ್ ಸಿಂಗ್ ಪನ್ನುನ್ ಎಂದು ಗುರುತಿಸಿವೆ, ಭಾರತದಲ್ಲಿ ನಿಷೇಧಿಸಲಾದ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ನಾಯಕ ಎನ್ನಲಾಗಿದೆ.