ಉಗಾಂಡ ಕ್ರಿಕೆಟ್ ತಂಡಕ್ಕೆ ಐತಿಹಾಸಿಕ ಗೆಲುವು

ಗಾಯಾನಾ.ಜೂ.೬- ಪಪುವ ನ್ಯೂ ಗಿನಿ ತಂಡದ ವಿರುದ್ಧ ಉಗಾಂಡ ಕ್ರಿಕೆಟ್ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ.
ಇದೇ ಮೊದಲ ಬಾರಿ ಟಿ೨೦ ವಿಶ್ವಕಪ್ ಆಡುತ್ತಿರುವ ಉಗಾಂಡ ತಂಡ ೩ ವಿಕೆಟ್‌ಗಳ ಗೆಲುವು ದಾಖಲಿಸಿತು.
ಇದರೊಂದಿಗೆ ಟಿ೨೦ ವಿಶ್ವಕಪ್‌ನಲ್ಲಿ ಮೊದಲ ಗೆಲುವು ದಾಖಲಿಸಿದ ಸಾಧನೆ ಮಾಡಿತು.
ಉಗಾಂಡ ತಂಡದ ಆಟಗಾರರು ವಿಶೇಷವಾಗಿ ನೃತ್ಯ ಮಾಡಿ ಸಂಭ್ರಮಿಸಿದರು.
ಇಲ್ಲಿನ ಪ್ರಾವಿಂಡೆನ್ಸ್ ಮೈದಾನದಲ್ಲಿ ನಡೆದ ಟಿ೨೦ ವಿಶ್ವಕಪ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಪುವಾ ನ್ಯೂ ಗಿನಿ ೧೯.೧ ಓವರ್‌ಗಳಲ್ಲಿ ೭೭ ರನ್‌ಗಳಿಗೆ ಆಲೌಟ್ ಆಯಿತು. ಉಗಾಂಡ ತಂಡ ೧೮.೨ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೭೮ ರನ್ ಕಲೆ ಹಾಕಿತು.
ಉಗಾಂಡ ಪರ ರಿಯಾಜತ್ ಅಲಿ ಶಾ ೩೩, ಆಲ್ಪೇಶ್ ರಾಮಜಾನಿ ೮ ರನ್ ಹಾಗೂ ಜುಮಾ ಮಿಯಾಗಿ ೧೩ ರನ್ ಗಳಿಸಿದರು.
ಅಲಿ ನಿಯೊ ೧೬ಕ್ಕೆ ೨, ನೊರ್‌ಮಾನ್ ೧೯ಕ್ಕೆ ೨, ಸೋಪರ್ ಹಾಗೂ ವಾಲಾ ತಲಾ ೧ ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಪಪುವ ನ್ಯೂಗಿನಿ ಹಿರಿ ಹಿರಿ ೧೫ ರನ್, ಸಿಯಾಕಾ ಹಾಗೂ ಕಿಪ್ಲೀನ್ ತಲಾ ೧೨
ರನ್ ಹೊಡೆದರು. ಉಗಾಂಡ ಪರ ಫ್ರಾಂಕ್, ಜುಮಾ, ಕೊಸ್ಮಾಸ್ ಹಾಗೂ ಆಲ್ಪೇಶ್ ತಲಾ ೨ ವಿಕೆಟ್ ಪಡೆದರು.