ಉಕ್ರೇನ್ ವಿದೇಶಾಂಗ ಸಚಿವರು ಭಾರತಕ್ಕೆ ಶೀಘ್ರ ಆಗಮನ: ಬೆಂಬಲ‌ ಕೋರಿಕೆ

ನವದೆಹಲಿ,ಏ.8- ರಷ್ಯಾ ನಂತರ ಮೊದಲ ಬಾರಿಗೆ ಉಕ್ರೇನ್ ಸಚಿವರೊಬ್ಬರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡಲಿದ್ದು ಸದ್ಯ, ನಡೆಯುತ್ತಿರುವ ಸಂಘರ್ಷದ ಪರಿಣಾಮಗಳ ಬಗ್ಗೆ ಚರ್ಚಿಸಲು ಮತ್ತು ಭಾರತದ ಬೆಂಬಲ ಕೋರಲು ಮುಂದಾಗಿದ್ದಾರೆ

ಉಕ್ರೇನ್‌ನ ಮೊದಲ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಅವರು ಭಾರತೀಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ರಾಯಬಾರ ಕಚೇರಿ ಮೂಲಗಳು ತಿಳಿಸಿವೆ

ಈ ಸಂಬಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಉಕ್ರೇನ್ ಸಚಿವಾಲಯ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ

ರಷ್ಯಾ,ಉಕ್ರೇನ್ ಘರ್ಷಣೆಯ ಆರಂಭದಿಂದಲೂ ಉಕ್ರೇನ್‌ನಲ್ಲಿನ ಹಕ್ಕುಗಳ ಉಲ್ಲಂಘನೆಯನ್ನು ತನಿಖೆ ಮಾಡುವ ಅಂತರಾಷ್ಟ್ರೀಯ ತನಿಖಾ ಆಯೋಗದ ಆದೇಶವನ್ನು ವಿಸ್ತರಿಸಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ನಿರ್ಣಯದ ಮೇಲೆ ಮತದಾನದಿಂದ ಭಾರತ ಮತ್ತೊಮ್ಮೆ ಮತದಾನದಿಂದ ದೂರ ಉಳಿದ ದಿನಗಳ ನಂತರ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ಪ್ರಧಾನಿ ಭೇಟಿ:

ರಷ್ಯಾ ವಿದೇಶಾಂಗ .ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು ಉಕ್ರೇನ್ ರಾಜಧಾನಿಗೆ ಕೀವ್‌ಗೆ ಆಹ್ವಾನಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ

ಸೆಪ್ಟೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್‌ಕಿ ಅವರು ಭಾಗವಹಿಸುವ ಸಾಧ್ಯತೆಯ ಬಗ್ಗೆ ಭಾರತೀಯ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ ಎಂದು ಹೇಳಲಾಗಿದೆ.

ಉಕ್ರೇನ್ ಶ್ಲಾಘನೆ:

ಯುದ್ಧದ ಸಮಯದಲ್ಲಿ ಭಾರತದ ಮಾನವೀಯ ನೆರವಿಗೆ ಉಕ್ರೇನ್ ಶ್ಲಾಘನೆ ವ್ಯಕ್ತಪಡಿಸಿದೆ ಮತ್ತು ಉಕ್ರೇನ್‌ನಲ್ಲಿ ರಷ್ಯಾದ ಕ್ರಮಗಳ ಬಗ್ಗೆ ಭಾರತ ಹೆಚ್ಚು ನೆರವಿಗೆ ಮುಂದಾಗಬೇಕೆಂದು ಬಯಸಿದೆ.

ರಷ್ಯಾ‌ ನಡೆ ಖಂಡಿಸುವಲ್ಲಿ ಪಾಶ್ಚಿಮಾತ್ಯ ದೇಶಗಳೊಂದಿಗೆ ಸೇರಿಕೊಳ್ಳದಿದ್ದರೆ, ಝೆಲೆನ್ಸ್ಕಿ ಮತ್ತು ಮೋದಿಯೊಂದಿಗೆ ಭಾರತದೊಂದಿಗೆ ಉನ್ನತ ಮಟ್ಟದ ಮಾತುಕತೆ ಮಹತ್ವ ಪಡೆದುಕೊಂಡಿದೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ತಮ್ಮ ಸಹವರ್ತಿ ಡಿಮಿಟ್ರೋ ಕುಲೇಬಾ ಅವರೊಂದಿಗೆ ಹಲವಾರು ಸಂದರ್ಭಗಳಲ್ಲಿ ಮಾತನಾಡಿದ್ದಾರೆ.