
ನವದೆಹಲಿ,ಆ.೨೮- ಉಕ್ರೇನ್‌ನೊಂದಿಗಿನ ಕಪ್ಪು ಸಮುದ್ರದ ಧಾನ್ಯ ಒಪ್ಪಂದ ಪುನರುಜ್ಜೀವನಗೊಳಿಸಲು ರಷ್ಯಾ ಹೊಸ ಒತ್ತಡ ಹೇರುತ್ತಿರುವ ನಡುವೆಯೇ ಅಮೇರಿಕಾ, ಭಾರತ ಸೇರಿದಂತೆ ಇತರೆ ದೇಶಗಳತ್ತ ಉಕ್ರೇನ್ ಚಿತ್ತ ಹರಿಸಿದೆ. ಜಾಗತಿಕ ಆಹಾರ ಭದ್ರತೆಯ ಮೇಲೆ ಯುದ್ಧದ ಪರಿಣಾಮ ತಗ್ಗಿಸಲು ವಿಶ್ವಸಂಸ್ಥೆ ಮತ್ತು ಟರ್ಕಿ ನಡುವೆ ಕಳೆದ ವರ್ಷ ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಒಪ್ಪಂದದ ಅನುಷ್ಠಾನಲ್ಲಿ ಭಾರತದ ಪಾತ್ರವೂ ಇರುವ ಹಿನ್ನೆಲೆಯಲ್ಲಿ ಉಕ್ರೇನ್, ಭಾರತ ಸೇರಿದಂತೆ ಇತರೆ ದೇಶಗಳತ್ತ ಗಮನ ಹರಿಸಿದೆ. ವಿದೇಶಾಂಗ ನೀತಿ ಮುಖ್ಯಸ್ಥ ಜೋಸೆಪ್ ಬೊರೆಲ್ ಅವರು ಈ ತಿಂಗಳ ಆರಂಭದಲ್ಲಿ ಎಲ್ಲಾ ಜಿ-೨೦ ವಿದೇಶಾಂಗ ಸಚಿವರನ್ನು ಸಂಪರ್ಕಿಸಿ ಒಪ್ಪಂದಕ್ಕೆ ಮರುಸೇರ್ಪಡೆಗೊಳ್ಳಲು ಮಾಸ್ಕೋ ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ, ಉಕ್ರೇನ್ ಮೇಲೆ ಯಾವುದೇ ಯುದ್ದ ಮಾಡದಂತೆ ಭಾರತ ರಷ್ಯಾಗೆ ಒತ್ತಡ ಹೇರಿದೆ. ಇದು ಕೂಡ ಉಕ್ರೇನ್ ದೇಶ ಭಾರತದತ್ತ ಗಮನ ಹರಿಸಲು ಕಾರಣ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೇರಿಕಾ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ವಿಶ್ವಸಂಸ್ಥೆ ಮಟ್ಟದಲ್ಲಿ ಅಮೆರಿಕದ ಸರ್ಕಾರ, ಭಾರತದೊಂದಿಗೆ ತೊಡಗಿಸಿಕೊಂಡಿವೆ ಎಂದು ತಿಳಿದಿದೆ. ಇದು ಬಹಳ ಮುಖ್ಯ ಮತ್ತು ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಯುದ್ಧಗಳು ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತವೆ. ಯುರೋಪ್ ಮಾತ್ರವಲ್ಲ ಭಾರತದ ಆಹಾರ ಭದ್ರತೆ ಸಹ ಬಲವಾಗಿರಬೇಕೆಂದು ಬಯಸುತ್ತೇವೆ” ಎಂದು ತಿಳಿಸಿದ್ದಾರೆ. ಭಾರತ, ರಷ್ಯಾದೊಂದಿಗೆ ರಾಜತಾಂತ್ರಿಕವಾಗಿ ಈ ಸಮಸ್ಯೆಯನ್ನು ತೆಗೆದುಕೊಂಡಿದೆಯೇ ಎಂಬುದು ಇನ್ನೂ ತಿಳಿದಿಲ್ಲ, ಆದರೆ ಜುಲೈ ೧೭ ರಂದು ರಷ್ಯಾ ಹಿಂದೆಗೆದುಕೊಂಡ ಒಪ್ಪಂದ ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ವಿಶ್ವಸಂಸ್ಥೆ ಸರ್ಕಾರ ಬಲವಾಗಿ ಬೆಂಬಲಿಸಿದೆ ಎನ್ನಲಾಗಿದೆ.