ಉಕ್ರೇನ್‌ನ ೧೫.೬ ಶತಕೋಟಿ ಡಾಲರ್ ಪ್ಯಾಕೇಜ್ ಅಂಗೀಕಾರ

ಕೀವ್ (ಉಕ್ರೇನ್), ಏ.೧- ರಷ್ಯಾದ ದಾಳಿಯಿಂದ ತೀವ್ರವಾಗಿ ಆರ್ಥಿಕ ಪರಿಸ್ಥಿತಿ ಎದುರಿಸುತ್ತಿರುವ ಉಕ್ರೇನ್‌ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರೀ ನೆಮ್ಮದಿ ಮೂಡಿಸಿದೆ. ಸಂಘರ್ಷ-ಪೀಡಿತ ಉಕ್ರೇನ್‌ನ ಆರ್ಥಿಕ ಚೇತರಿಕೆಗೆ ಸಹಾಯ ಮಾಡಲು ಬರೋಬ್ಬರಿ ೧೫.೬ ಶತಕೋಟಿ ಡಾಲರ್ ಬೆಂಬಲ ಪ್ಯಾಕೇಜ್ ಅನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅನುಮೋದಿಸಿದೆ.
ರಷ್ಯಾದ ದಾಳಿ ಆರಂಭವಾದ ಬಳಿಕ ಉಕ್ರೇನ್‌ನ ಆರ್ಥಿಕತೆ ಪರಿಸ್ಥಿತಿ ದುಸ್ಥಿತಿಗೆ ತಲುಪಿದೆ. ಕಳೆದ ವರ್ಷ ಚಟುವಟಿಕೆಯು ಸುಮಾರು ೩೦ ಪ್ರತಿಶತದಷ್ಟು ಸಂಕುಚಿತಗೊಂಡಿತು. ಅದರ ಹೆಚ್ಚಿನ ಬಂಡವಾಳ ಸಂಗ್ರಹಕ್ಕೆ ಭಾರೀ ಹಿನ್ನಡೆ ತಂದಿದ್ದು, ಅಲ್ಲದೆ ಬಡತನವನ್ನು ಮತ್ತೆ ಹೆಚ್ಚಿಸಿದೆ ಎಂದು ಎಂದು ಐಎಂಎಫ್ ತಿಳಿಸಿದೆ. ಇನ್ನು ಯುದ್ದದಿಂದ ಕೇವಲ ಉಕ್ರೇನ್ ಮಾತ್ರ ತತ್ತರಿಸಿಲ್ಲ. ಬದಲಾಗಿ ಜಗತ್ತಿನ ಗೋಧಿ ಉತ್ಪಾದನೆಯಲ್ಲಿ ರಷ್ಯಾ ಹಾಗೂ ಉಕ್ರೇನ್ ಮುಂಚೂಣಿಯಲ್ಲಿದ್ದು, ಆದರೆ ಯುದ್ದದಿಂದಾಗಿ ಗೋಧಿ ಮತ್ತು ತೈಲ ಬೆಲೆ ಏರಿಕೆಯಾಗಿ, ಜಾಗತಿಕ ಹಣದುಬ್ಬರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದೆ. ಅದರಲ್ಲೂ ಇಂಧನಕ್ಕಾಗಿ ರಷ್ಯಾವನ್ನೇ ನೆಚ್ಚಿಕೊಂಡಿದ್ದ ಯುರೋಪ್ ರಾಷ್ಟ್ರಗಳು ಸದ್ಯ ಅನ್ಯಮಾರ್ಗದತ್ತ ದೃಷ್ಟಿ ಹರಿಸಿದೆ. ರಷ್ಯಾದ ಇಂಧನವನ್ನು ನೇರವಾಗಿ ಖರೀದಿಸದಿದ್ದರೂ ಅನ್ಯಮಾರ್ಗದ ಮೂಲಕ ಪಡೆದುಕೊಂಡು, ತನ್ನ ಬೇಡಿಕೆಯನ್ನು ಈಡೇರಿಸಿಕೊಳ್ಳುತ್ತಿದೆ. ಇನ್ನು ಐಎಂಎಫ್‌ನ ಬೆಂಬಲ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಎಂಎಫ್‌ನ ಉಕ್ರೇನ್ ಮಿಷನ್ ಮುಖ್ಯಸ್ಥ ಗೇವಿನ್ ಗ್ರೇ, ಸದ್ಯ ನೀಡಲಾದ ೧೫.೬ ಶತಕೋಟಿ ಡಾಲರ್‌ನ ಸಾಲ ಪರಿಹಾರವು, ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಸಂಸ್ಥೆಗಳ ಅನುದಾನ ಮತ್ತು ಸಾಲಗಳನ್ನು ಒಳಗೊಂಡಿರುವ ಒಟ್ಟಾರೆ ೧೧೫ ಶತಕೋಟಿ ಡಾಲರ್‌ನ ಭಾಗವಾಗಿದೆ. ಸದ್ಯ ನೀಡಲಾದ ಐಎಂಎಫ್‌ನ ಮೊತ್ತವು ಆರ್ಥಿಕ ನೀತಿಗಳಿಗೆ ಆಧಾರವನ್ನು ಒದಗಿಸುವುದು, ಸ್ಥೂಲ ಆರ್ಥಿಕ ಆರ್ಥಿಕ ಸ್ಥಿರತೆಯನ್ನು ಉಳಿಸಿಕೊಳ್ಳುವ ಮತ್ತು ಆರ್ಥಿಕ ಮತ್ತು ಆರ್ಥಿಕ ಚೇತರಿಕೆಗೆ ಬೆಂಬಲ ನೀಡುವುದಾಗಿದೆ ಎಂದು ಎಂದು ತಿಳಿಸಿದ್ದಾರೆ.