ಉಕ್ರೇನ್‌ಗೆ ತೈವಾನ್ ನೆರವು

ನ್ಯೂಯಾರ್ಕ್, ಸೆ.೨೦- ರಶ್ಯಾದ ಆಕ್ರಮಣಕಾರಿ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಹೋರಾಟ ನಡೆಸುತ್ತಿರುವ ಉಕ್ರೇನ್‌ಗೆ ಸಹಾಯ ನೀಡಲು ನನಗೆ ಅಪೂರ್ವ ಹೆಮ್ಮೆ ಎನಿಸುತ್ತಿದೆ ಎಂದು ತೈವಾನ್ ಅಧ್ಯಕ್ಷೆ ತ್ಸೈ ಇಂಗ್-ವೆನ್ ತಿಳಿಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಭಾಗಿಯಾಗಿ, ಈ ವಿಚಾರ ತಿಳಿಸಿದ್ದಾರೆ.
ಉಕ್ರೇನ್ ತಮ್ಮ ಹೋರಾಟವನ್ನು ಮತ್ತಷ್ಟು ಮುಂದುವರೆಸಬೇಕು. ರಷ್ಯಾದ ಆಕ್ರಮಣದ ಹತ್ಯಾಕಾಂಡವನ್ನು ನಾವು ನೋಡುತ್ತಿದ್ದೇವೆ. ತಮ್ಮ ದೇಶ ಮತ್ತು ಸ್ವಾತಂತ್ರ?ಯವನ್ನು ರಕ್ಷಿಸುವ ಹೋರಾಟದಲ್ಲಿ ಉಕ್ರೇನಿಯನ್ನರಿಗೆ ಸಹಾಯ ಮಾಡುವ ಪ್ರಯತ್ನದಲ್ಲಿ ತೈವಾನ್ ಪಾತ್ರ ವಹಿಸುತ್ತಿರುವ ಬಗ್ಗೆ ಹೆಮ್ಮೆಪಡುತ್ತದೆ. ನಾವು ನಮ್ಮ ಪ್ರಯತ್ನವನ್ನು ಇನ್ನಷ್ಟು ಮುಂದುವರಿಸಬೇಕು. ತೈವಾನ್ ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸಲು ಚೀನಾ ಹವಣಿಸುತ್ತಿದೆ. ಸಾಮೂಹಿಕ ಭವಿಷ್ಯಕ್ಕಾಗಿ ಸ್ವಾತಂತ್ರ?ಯ ಮತ್ತು ಮಾನವ ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ತೈವಾನ್‌ನ ಪ್ರಜಾಪ್ರಭುತ್ವವನ್ನು ಸುರಕ್ಷಿತಗೊಳಿಸುವುದು ಅತ್ಯಗತ್ಯವಾಗಿದೆ. ಯುಎನ್ ವ್ಯವಸ್ಥೆಯಲ್ಲಿ ತೈವಾನ್ ಅನ್ನು ಸೇರಿಸುವುದರೊಂದಿಗೆ, ಭವಿಷ್ಯದ ಸವಾಲುಗಳನ್ನು ಎದುರಿಸಲು ಮತ್ತು ನಿಯಮಾಧಾರಿತ ಅಂತರಾಷ್ಟ್ರೀಯ ಕ್ರಮವನ್ನು ಕಾಪಾಡಲು ನಾವು ಇನ್ನಷ್ಟು ನಿಕಟವಾಗಿ ಕೆಲಸ ಮಾಡಬಹುದು ಎಂದು ನನಗೆ ವಿಶ್ವಾಸವಿದೆ ಎಂದು ಅವರು ತಿಳಿಸಿದರು.