ಉಕುಮನಾಳದಲ್ಲಿ ಭೂಕಂಪನ

ವಿಜಯಪುರ: ಡಿ.8:ತಾಲೂಕಿನ ಉಕುಮನಾಳ ಗ್ರಾಮದಲ್ಲಿ ಶುಕ್ರವಾರ ಲಘು ಭೂಕಂಪನ ಸಂಭವಿಸಿದೆ. ಉಕುಮನಾಳ ಗ್ರಾಮ ಸೇರಿದಂತೆ ಗ್ರಾಮದ ಸುತ್ತಮುತ್ತಲಿನ ಕೆಲವು ಕಡೆಗಳಲ್ಲೂ ಕೂಡಾಜನರಿಗೆ ಭೂಮಿ ಕಂಪಿಸಿದ ಅನುಭವ ಆಗಿದೆ. ಬೆಳಗ್ಗೆ 6:52 ಕ್ಕೆ ಭೂಕಂಪನ ಆಗಿದೆ.
ಇನ್ನೂ ಭೂಕಂಪನ ರಿಕ್ಟರ್ ಮಾಪಕದಲ್ಲಿ 3 ರಷ್ಟು ಪ್ರಮಾಣ ದಾಖಲಾಗಿದೆ ಎಂದು ಕೆಎಸ್‍ಎನ್‍ಡಿಎಂಸಿ ಅವರು ದೃಢಪಡಿಸಿದ್ದಾರೆ. ಕಳೆದೆರಡು ವರ್ಷಗಳಿಂದ ವಿಜಯಪುರ ಜಿಲ್ಲೆಯಲ್ಲಿ ಹಲವಾರು ಬಾರಿ ಭೂಮಿ ಕಂಪಿಸಿದೆ.ಇದರಿಂದ ಜನತೆ ಭಯಭೀತರಾಗಿದ್ದಾರೆ. ಕಳೆದ ಹಲವಾರು ದಿನಗಳಿಂದ ಭೂಮಿ ಕಂಪಿಸಿರಲಿಲ್ಲ. ಇವತ್ತು ಮತ್ತೆ ಭೂಮಿ ಕಂಪಿಸಿ ಜನರಲ್ಲಿ ಆತಂಕ ಹೆಚ್ಚಿಸಿದೆ.