ಉಂಡೆನಾಮದ ಹಿಂದೆ ಕೋಮಲ್

ಹಾಸ್ಯನಟ ಕೋಮಲ್ ಕುಮಾರ್ ಮತ್ತು  ನಿರ್ದೇಶಕ ಕೆ.ಎಲ್ ರಾಜಶೇಖರ್ ಕಾಂಬಿನೇಷನ್ ಹೊಸ ಚಿತ್ರ ” ಉಂಡೆನಾಮ”. ಸಂಪೂರ್ಣ ಹಾಸ್ಯಮಯ ಚಿತ್ರ ಮುಂದಿನ ತಿಂಗಳು ತೆರೆಗೆ ತರಲು ಬರಲು ಸಜ್ಜಾಗಿದೆ.

ಚಿತ್ರದ ಶೀರ್ಷಿಕೆ ಯನ್ನು  ಚಿತ್ರರಂಗದ ಹಲವು  ಮಂದಿ ಹೇಳುವ ಮೂಲಕ ವಿನೂತನವಾಗಿ ಅನಾವರಣ ಮಾಡಿದ್ದಾರೆ. ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ದೇಶಕ ರಾಜಶೇಖರ್,  ಹೆಸರಿನಲ್ಲೇ ಹಾಸ್ಯ ಹೊಂದಿರುವ ಉಂಡೆನಾಮ ಏಪ್ರಿಲ್ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೆಂಗಳೂರಿನಲ್ಲಿ ಸುಮಾರು 35 ದಿನಗಳ‌ ಕಾಲ ಚಿತ್ರೀಕರಣ ಮಾಡಲಾಗಿದೆ. ಸಂಪೂರ್ಣ ಮನರಂಜನೆ ಆಧಾರಿತ ಚಿತ್ರ ನಗುವಿನ‌ ಕಚಗುಳಿ ಇಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಮಾಹಿತಿ ನೀಡಿದರು.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕೋಮಲ್  ಜೊತೆ ಹರೀಶ್ ರಾಜ್,ಧನ್ಯ ಬಾಲಕೃಷ್ಣ, ತಬಲಾನಾಣಿ,‌ ಅಪೂರ್ವ, ವೈಷ್ಣವಿ,ತನಿಷ ಕುಪ್ಪಂಡ,ಬ್ಯಾಕ್ ಜನಾರ್ಧನ್ ಮುಂತಾದವರು ನಟಿಸಿದ್ದಾರೆ.

ಈ ಚಿತ್ರವನ್ನು  ಸಿ.ನಂದ ಕಿಶೋರ್  ನಿರ್ಮಿಸಿದ್ದಾರೆ. ಇನ್ನುಳಿದಂತೆ ಶ್ರೀಧರ್ ಸಂಭ್ರಮ ಸಂಗೀತ,ನವೀನ್ ಕುಮಾರ್ ಛಾಯಾಗ್ರಾಹಣ,ಕೆ.ಎಮ್.ಪ್ರಕಾಶ್ ಸಂಕಲನ ಚಿತ್ರಕ್ಕಿದೆ