ಈ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರೀತೆ?


ಲಕ್ಷ್ಮೇಶ್ವರ,ಜೂ.15: ಹೆಸರಿಗೆ ಮಾತ್ರ ತಾಲೂಕು ಆಗಿರುವ ತಾಲೂಕ ಕೇಂದ್ರ ಸ್ಥಳವಾದ ಲಕ್ಷ್ಮೇಶ್ವರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ ಅಂದರೆ ಸರ್ಕಾರಿ ಆಸ್ಪತ್ರೆ ಕಳೆದ 20 ವರ್ಷಗಳಿಂದಲೂ ಆರಕ್ಕೆರಿಲ್ಲ ಮೂರಕ್ಕಿಳದಿಲ್ಲ ಎಂಬಂತಾಗಿದೆ.
ಈ ಆಸ್ಪತ್ರೆಗೆ ಪ್ರತಿನಿತ್ಯ ಕನಿಷ್ಠ 300 ಜನ ಹೊರರೊಗಿಗಳಾಗಿ ಬಂದು ಹೋಗುತ್ತಿದ್ದಾರೆ.
ಅನೇಕ ಸಂದರ್ಭಗಳಲ್ಲಿ ಈ ಆಸ್ಪತ್ರೆಯಲ್ಲಿ ಸೌಲಭ್ಯಗಳು ಲಭ್ಯವಿಲ್ಲದಿರುವುದರಿಂದ ಅನಿವಾರ್ಯವಾಗಿ ವೈದ್ಯರುಗಳು ಜಿಲ್ಲಾ ಆಸ್ಪತ್ರೆಗೆ ಇಲ್ಲವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸುತ್ತಿದ್ದಾರೆ. ಈ ಆಸ್ಪತ್ರೆ ಈಗ 30 ಬೆಡ್ ಹಾಸ್ಪಿಟಲ್ ಇದ್ದು ಇದನ್ನು ಮೇಲ್ದರ್ಜೆಗೇರಿಸಿದರೆ 100ಬೆಡ್ಡ್ ಆಸ್ಪತ್ರೆಯಾಗಿ ಪರಿವರ್ತನೆಯಾಗಲಿದೆ.
ಒಂದೊಮ್ಮೆ ಸರ್ಕಾರ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ದರೆ ಅನೇಕ ಸೌಲಭ್ಯಗಳು ಹರಿದು ಬರಲಿವೆ.
ಆಸ್ಪತ್ರೆಯಲ್ಲಿ ಎಲುಬು ಮತ್ತು ಕೀಲು ತಜ್ಞವೈದ್ಯರು ಕಣ್ಣಿನ ವೈದ್ಯರು ಕಿವಿ ಮೂಗು ಗಂಟಲು ತಜ್ಞರು ಚರ್ಮರೋಗ ತಜ್ಞರು ಹೃದಯ ರೋಗ ತಜ್ಞರು ಒಬಿಜಿ ಅಂದರೆ ಪ್ರಸೂತಿ ತಜ್ಞರು ಮಕ್ಕಳ ತಜ್ಞ ವೈದ್ಯರು ತುರ್ತು ಚಿಕಿತ್ಸಾ ವೈದ್ಯರು ಡಿಜಿಟಲ್ ಎಕ್ಸರೇ ಆಪರೇಷನ್ ಥಿಯೇಟರ್ ವೆಂಟಿಲೇಟರ್ ಐಸಿಯು ಡಯಾಲಿಸಿಸ್ ಮತ್ತು ಕಚೇರಿಯ ಸಿಬ್ಬಂದಿ ಪ್ರಥಮ ದರ್ಜೆ ಸಹಾಯಕರು ದ್ವಿತೀಯ ದರ್ಜೆಯ ಸಹಾಯಕರ ಹುದ್ದೆಗಳು ಶಸ್ತ್ರ ಚಿಕಿತ್ಸಾ ವೈದ್ಯರು ಹಿರಿಯ ಫಾರ್ಮ ಸಿಸ್ಟ್ ಹೀಗೆ ಗ್ರೂಪ್ ಡಿ ಸಹಿತ 15 ರಿಂದ 17 ಹುದ್ದೆಗಳು ಮಂಜೂರಾಗಲಿವೆ ಅಲ್ಲದೆ ಜೊತೆಗೆ ಬ್ಲಡ್ ಬ್ಯಾಂಕ್, ಮಂಜುರಾಗಲಿದೆ ಎಂಬುದು ಲೆಕ್ಕಾಚಾರವಾಗಿದೆ.
ಈ ಕುರಿತಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸರ್ಕಾರಕ್ಕೆ ಪತ್ರವನ್ನು ಬರೆದಿದ್ದು ಪತ್ರ ಕ್ರಮ ಸಂಖ್ಯೆ ನಂಬರ್ ಜಿಆಕುಕಗ/ಅಭಿವೃದ್ಧಿ ಇವರು ಪತ್ರ ಬರೆದಿದ್ದು ಅದರಲ್ಲಿ ಸನ್ 2017 – 18 ನೇ ಸಾಲಿನಲ್ಲಿ ಆಯವ್ಯ ಪತ್ರದಲ್ಲಿ ಹೊಸ ತಾಲೂಕುಗಳನ್ನು ಘೋಷಣೆ ಮಾಡಿದ್ದು ಅದರ ಅನ್ವಯ ಲಕ್ಷ್ಮೇಶ್ವರದಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಪರಿವರ್ತನೆ ಮಾಡಿ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯವನ್ನು ಸ್ಥಾಪಿಸುವಂತೆ ಹೀಗೆ ಪತ್ರಗಳನ್ನು ಬರೆದಿದ್ದು ಇದೇ ದಿನಾಂಕ 07.06.23 ರಂದು ಮತ್ತೊಂದು ಪತ್ರವನ್ನು ಬರೆದಿದ್ದು ಆದರೆ ತಾಲೂಕು ಕೇವಲ ಘೋಷಣೆಗೆ ಸೀಮಿತವಾಗಿರುವುದರಿಂದ ಸರಕಾರದ ಇಲಾಖೆಗಳು ಮರೀಚಿಕೆಯಾಗಿವೆ.
ಆಡಳಿತಾತ್ಮಕ ಸಾರ್ವಜನಿಕ ಹಿತ ದೃಷ್ಟಿಯಿಂದ ಹೊಸ ತಾಲೂಕನ್ನು ಘೋಷಿಸಿದರು ಏಳು ವರ್ಷಗಳಿಂದಲೂ ಎಲ್ಲಿದ್ದೀಯೋ? ಜೋಗಿ ಎಂದರೆ ಅಲ್ಲಿಯೇ ಎಂಬಂತೆ ಲಕ್ಷ್ಮೇಶ್ವರ ತಾಲೂಕಿನ ಸ್ಥಿತಿಯಾಗಿದೆ.
ರಾಜಕೀಯ ಇಚ್ಛಾಸಕ್ತಿಯ ಕೊರತೆ ರಾಜಕೀಯ ಬದಲಾವಣೆ ಇವುಗಳಿಂದಾಗಿ ಹೊಸ ತಾಲೂಕುಗಳು ಏನನ್ನು ಕಾಣದ ಸ್ಥಿತಿಯಲ್ಲಿವೆ.