ಈ ಶತಮಾನದ ಮಾದರಿ ಹೆಣ್ಣು ಎಂದು ಗೀತಸಾಹಿತ್ಯ ರಚಿಸಿ ಸಾಮಾಜಿಕ ಚಿತ್ರಗಳ ಮೂಲಕ ಸಂದೇಶ ಸಾರಿದ್ದು ಪುಟ್ಟಣ್ಣ ಕಣಗಾಲ್: ಮಂಡ್ಯ ರಮೇಶ್

ಮೈಸೂರು: ಡಿ.01:- ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಿರ್ದೇಶಕ ಎಸ್.ಆರ್ ಪುಟ್ಟಣ್ಣ ಕಣಗಾಲ್ ರವರ 88ನೇ ಜನ್ಮದಿನೋತ್ಸವದ ಅಂಗವಾಗಿ “ಚಿತ್ರಬ್ರಹ್ಮನ ನೆನೆಪು” ಕಾರ್ಯಕ್ರಮವನ್ನ ಕೆಎಂಪಿಕೆ ಟ್ರಸ್ಟ್ ವತಿಯಿಂದ ಚಾಮುಂಡಿಪುರಂನಲ್ಲಿರುವ ಅಪೂರ್ವ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕನ್ನಡ ಚಿತ್ರರಂಗದ ನಟರು ರಂಗಭೂಮಿ ಕಲಾವಿದರಾದ ಮಂಡ್ಯ ರಮೇಶ್ ರವರು ಪುಟ್ಟಣ್ಣ ಕಣಗಾಲ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚಾಲನೆ ನೀಡಿದರು.
ನಂತರ ಮಾತನಾಡಿ ಸಮಾಜದ ಕಣ್ಣು ಹೆಣ್ಣು ಅವಳಿಗೂ ಸಮಾನತೆ ಸಿಗಬೇಕು ಎಂದು ಈ ಶತಮಾನದ ಮಾದರಿ ಹೆಣ್ಣು ಎಂದು ಗೀತಸಾಹಿತ್ಯ ರಚಿಸಿ ಸಾಮಾಜಿಕ ಚಿತ್ರಗಳ ಮೂಲಕ ಸಂದೇಶ ಸಾರಿದ್ದು ಪುಟ್ಟಣ್ಣ ಕಣಗಾಲ್ ರವರ ನಿರ್ದೇಶನದ ಚಿತ್ರಗಳು ಪೌರಾಣಿಕ ಮತ್ತು ಧಾರ್ಮಿಕ ಕತೆಗಳ ಆಧಾರಿತ ಚಿತ್ರಗಳನ್ನ ಪ್ರೇಕ್ಷಕರು ವರ್ಷಾನುಗಟ್ಟಲೇ ಕಾದು ನೋಡುತ್ತಿದ್ದ ಸಂಧರ್ಭದಲ್ಲಿ ಕನ್ನಡ ಭಾಷೆಯಲ್ಲಿ ಸಾಮಾಜಿಕ ಸಂದೇಶಗಳ ಚಿತ್ರಗಳನ್ನ ನಿರ್ದೇಶಿಸಿ ಪ್ರೇಕ್ಷಕರು ಚಿತ್ರಮಂದಿರಗಳ ಬಳಿ ಸಾಲುಗಟ್ಟಿ ಟಿಕೆಟ್ ಪಡೆಯಲು ನಿಲ್ಲುವಂತೆ ಮಾಡಿದವರೇ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ರವರು, ಸೋರಟ್ ಅಶ್ವಥ್ ರವರ ಬಳಿ ನಾಟಕ ಪ್ರಚಾರಕಲೆಯಲ್ಲಿ ಶ್ರಮಿಸುತ್ತಿದ್ದರು.
ವರದಾಚಾರ್ ರವರ ಬಳಿ ಪೆÇೀಟೋಗ್ರಾಫರ್ ರಾಗಿ ಕೆಲಸಕ್ಕೆ ಸೇರಿ ಅಂದು ಬಿ.ಆರ್ ಪಂತಲು ಅವರ ಬಳಿ ಮೆಕ್ಯಾನಿಕ್ ಡ್ರೈವರ್ ಕಮ್ ಸಹಾಯಕ ನಿರ್ದೇಶಕನಾಗಿ ಕೆಲಸಕ್ಕೆ ಸೇರಿ ನಂತರ ಇಡೀ ದೇಶವೇ ಕನ್ನಡ ಚಿತ್ರಗಳನ್ನ ನೋಡಿ ಚಪ್ಪಾಳೆ ಹೊಡೆಯುವ ಹಾಗೇ ಮಾಡಿ ರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದು ಚಿತ್ರನಿರ್ದೇಶಕರಾಗಿ ಬೆಳೆದು ನಿಂತರು, ಕಣಗಾಲ್ ಪ್ರಭಾಕರ್ ಶಾಸ್ತ್ರಿ ಮತ್ತು ಪುಟ್ಟಣ್ಣ ಕಣಗಾಲ್ ಎಂದರೆ ಡಾ. ರಾಜಕುಮರ್ ರವರಿಗೆ ಎಲ್ಲಿಲ್ಲದ ಪ್ರೀತಿ ಗುರುಗಳ ಸ್ಥಾನದಲ್ಲಿ ಭಕ್ತಿಯಿಂದ ಕಾಣುತ್ತಿದ್ದರು, ಮೈಸೂರು ದಸರಾ,ಮಾನಸ ಸರೋವರ, ಕನ್ಯಾಕುಮಾರಿ, ಕೊಡಗಿನ ಕಾವೇರಿ, ಚಿತ್ರದುರ್ಗ ಓನಕೆ ಓಬ್ಬವ ಇವೆಲ್ಲವೂ ಮುಂದಿನ ಯುವಪೀಳಿಗೆ ಸ್ಮರಿಸುವಂತ ಕೆಲಸಗಳನ್ನ ಚಿತ್ರಗಳ ಮೂಲಕ ನಿರ್ದೇಶಿಸಿದ್ದಾರೆ.
ನಂತರ ಹಿರಿಯ ಸಮಾಜಸೇವಕರಾದ ಕೆ.ರಘುರಾಂ ವಾಜಪೇಯಿ ಮಾತನಾಡಿ ಕಲಾವಿದರ ತವರೂರು ಮೈಸೂರು ಚಿತ್ರರಂಗಕ್ಷೇತ್ರದಲ್ಲಿ ಉತ್ತಂಗಕ್ಕೆ ಏರಲು ಪುಟ್ಟಣ್ಣ ಕಣಗಾಲ್ ರವರ ಪಾತ್ರ ಪ್ರಮುಖವಾದದ್ದು, ಪುಟ್ಟಣ್ಣನವರ ಚಿತ್ರದಲ್ಲಿ ಪಾತ್ರಗಳ ನಟನೆಯಲ್ಲಿ ಪರಿಪೂರ್ಣತೆ ಸಿಗುವ ವರೆಗೂ ಕಲಾವಿದರು ಭಯದ ವಾತವರಣದಲ್ಲೇ ನಟಿಸುತ್ತಿದ್ದ ಕಾರಣ ಇಂದಿಗೆ ವಿಷ್ಣುವರ್ಧನ್ ಅಂಬರೀಶ್ ಶ್ರೀನಾಥ್ ಸೇರಿದಂತೆ ಅತ್ಯುತ್ತಮ ನಟರಾಗಿ ಹೊಮ್ಮಿದರು, ಪುಟ್ಟಣ್ಣನವರ ಚಿತ್ರವು ಸಮಾಜಕ್ಕೆ ಸಂದೇಶ ಮತ್ತು ಕುಟುಂಬಪ್ರಧಾನವಾಗಿದ್ದ್ದವು, ಚಾಮಯ್ಯ ಮೇಷ್ಟ್ರು ಅಶ್ವಥ್ ರವರ ಪಾತ್ರ ಇವತ್ತಿಗೂ ಸಂಸ್ಕಾರದ ಸಂದೇಶ ತೋರಿಸುತ್ತದೆ ಎಂದರು.
ಚಿತ್ರನಟರ ಕಾಲ್ಷೀಟ್ ಮತ್ತು ಬ್ಯಾನರ್ ಪ್ರಭಾವದ ಮೇಲೆ ಚಿತ್ರಗಳ ಪ್ರದರ್ಶನ ನಿರ್ಮಾಣ ಕಾಣುತ್ತಿದ್ದ ಸಂಧರ್ಭದಲ್ಲಿ ಒಬ್ಬ ನಿರ್ದೇಶಕನ ಮೇಲೆಯೇ ಅವಲಂಬಿತವಾಗಿ ಚಿತ್ರಗಳು ಶತದಿನಗಳ ಪ್ರದರ್ಶನ ಕಾಣುತ್ತಿತ್ತು ಎಂದರೆ ಪುಟ್ಟಣ್ಣ ಕಣಗಾಲ್ ರವರ ವಿಶೇಷತೆ, ಮೈಸೂರು ದಸರ ನವರಾತ್ರಿ ವಿಶೇಷವನ್ನ ಚಿತ್ರದಲ್ಲಿ ಸಾರಿದರು, ಮೆಲೆನಾಡು ಚಿತ್ರದುರ್ಗದ ಬೆಟ್ಟದಿಂದ ಕನ್ಯಾಕುಮಾರಿ ಮಾನಸ ಸರೋವರದೊರೆಗೂ ಸ್ಥಳಗಳು ಪುಟ್ಟಣ್ಣನವರ ಚಿತ್ರಿಸಿದ ಪರಿಣಾಮ ಪ್ರವಾಸಿ ಕ್ಷೇತ್ರವಾಗಿ ಜನಸಾಮನ್ಯರನ್ನು ಆಕರ್ಷಿಸಲು ಕಾರಣವಾಯಿತು, ಹೊಸ ಆಯಾಮ ಸೃಷ್ಟಿಸಿತು ಕನ್ನಡ ಚಿತ್ರರಂಗವು ಬಹುಭಾಷ ಚಿತ್ರಗಳ ಮುಂದೆ ಅಸ್ಥಿತ್ವಕ್ಕಾಗಿ ಸ್ಪರ್ಧಿಯಲಿದ್ದಾಗ ಒಬ್ಬ ಚಿತ್ರನಿರ್ದೇಶಕ ಭಾರತಚಿತ್ರರಂಗವೇ ಕನ್ನಡ ಭಷೆಯತ್ತ ಬೆರಳು ಇಟ್ಟು ನೋಡುವತ್ತ ಮಾಡಿ ರಾಷ್ಟ್ರ ಪ್ರಶಸ್ತಿಗಳ ವಿಜೇತರಾಗಿ ನೂರಾರು ಕಲಾವಿದರನ್ನ ಮುಖ್ಯವಾಹಿನಿಗೆ ತರಲು ಶ್ರಮಿಸಿದವರು ಪುಟ್ಟಣ್ಣ ಕಣಗಾಲ್ ರವರು, ಅವರ ಹೆಸರಲ್ಲಿ ರಾಜ್ಯಸರ್ಕಾರ ಪ್ರತಿವರ್ಷ ಪ್ರಶಸ್ತಿ ಮತ್ತು ಗೌರವಧನ ಅತ್ಯುತ್ತಮ ಪ್ರಶಸ್ತಿ ಆಯ್ಕೆಯಾದವರಿಗೆ ಕೊಡುತ್ತಾರೆ ಆದರೆ ಪಿರಿಯಾಪಟ್ಟಣ್ಣ ಕಣಗಾಲ್ ನಲ್ಲಿರುವ ಅವರ ಮನೆಯನ್ನ ಸ್ಮಾರಕವಾಗಿ ಕಾಪಾಡುವುದರ ಕಡೆ ಮುಂದಾಗಬೇಕು ಎಂದರು.
ನಂತರ ನಗರಪಾಲಿಕೆ ಸದಸ್ಯ ಮಾವಿ. ರಾಂಪ್ರಸಾದ್ ರವರು ಮಾತನಾಡಿ ಮೈಸೂರು ನಗರದಲ್ಲಿ ನಿರ್ಮಾಣವಾಗುವ ಯಾವುದಾದರೂ ನೂತನ ಬಡಾವಣೆಗೆ ಪುಟ್ಟಣ್ಣ ಕಣಗಾಲ್ ರವರ ಹೆಸರನ್ನು ಇಡಲು ಸೂಚಿಸಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಲಿ ಎಂದರು.
ಪುಟ್ಟಣ್ಣ ಕಣಗಾಲ್ ರವರ 88ನೇ ಜನ್ಮದಿನೋತ್ಸವದ ಅಂಗವಾಗಿ ಆಚರಿಸಿದ ಚಿತ್ರಬ್ರಹ್ಮನ ನೆನೆಪು ಕಾರ್ಯಕ್ರಮದಲ್ಲಿ ಇದೇ ಸಂದರ್ಭದಲ್ಲಿ ಹಿರಿಯ ರಂಗಕರ್ಮಿ ಹಾಗೂ ಕಲಾವಿದ ಮಂಡ್ಯ ರಮೇಶ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ, ನಗರಪಾಲಿಕೆ ಸದಸ್ಯ ಮಾ.ವಿ ರಾಮಪ್ರಸಾದ್, ನಾಮನಿರ್ದೇಶಕ ನಗರಪಾಲಿಕೆ ಸದಸ್ಯ ಜಗದೀಶ್, ಮುಡಾ ಸದಸ್ಯೆ ಲಕ್ಷ್ಮೀದೇವಿ, ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಕೆ.ಎಂ.ಪಿ.ಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಅಪೂರ್ವ ಸುರೇಶ್, ಶಿಕ್ಷಕರಾದ ರವಿ, ಸುಚೇಂದ್ರ, ಜಯಸಿಂಹ, ಎಸ್ ಎನ್ ರಾಜೇಶ್, ರಾಕೇಶ್ ಕುಂಚಿಟಿಗ, ಆನಂದ್, ಪರಿಸರ ಸ್ನೇಹಿ ತಂಡ ಅಧ್ಯಕ್ಷ ಲೋಹಿತ್, ನವೀನ್ ಕೆಂಪಿ ಹಾಗೂ ಇನ್ನಿತರರು ಹಾಜರಿದ್ದರು.