ಈ.ವಿನಯಕುಮಾರರಿಂದ ಮುಸ್ಲಿಂರಿಗೆ ಮೋಸ

ರಾಯಚೂರು,ಏ.೦೪- ನಗರ ಸಭೆಯ ಮಾಜಿ ಅಧ್ಯಕ್ಷರಾದ ಈ.ವಿನಯಕುಮಾರ ರವರು ನಿನ್ನೆ ಪತ್ರಿಕಾ ಹೇಳಿಕೆ ಮೂಲಕ ಮುಸ್ಲಿಂರಿಗೆ ಅನ್ಯಾಯವಾದರೆ ಜೆ.ಡಿ.ಎಸ್.ಬೆಂಬಲಿಸಲು ಕೋರಿದ್ದಾರೆ, ಆದರೆ ಮುಸ್ಲಿಂರಿಗೆ ಮೋಸ ಆಗಿರುವುದು ತಮ್ಮಿಂದ ಎಂದು ನೆನೆದುಕೊಳ್ಳಬೇಕು ಎಂದು ಬ್ಲಾಕ್ ಅಲ್ಪ ಸಂಖ್ಯಾತರ ವಿಭಾಗದ ಕಾರ್ಯದರ್ಶಿಯಾದ ಇಂಜಿನೀಯರ್ ಮುಜಾಹಿದ್ ಮರ್ಚೆಡ್ ಪತ್ರಿಕಾ ಹೇಳಿಕೆ ನೀಡಿದರು.
ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ಅಭ್ಯರ್ಥಿಯಾದ ಸಾಜಿದ್ ಸಮೀರ್ ರವರಿಗೆ ಬೆಂಬಲಿಸದೇ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ನೀವೇ ಎಂಬುದನ್ನು ರಾಯಚೂರು ಮುಸ್ಲಿಂರಿಗೆ ಗೊತ್ತಿರುವ ವಿಷಯ ಮತ್ತು ಮರೆಯುವಂತ ವಿಷಯವಲ್ಲ, ಬಿ.ಜೆ.ಪಿ.ಸರ್ಕಾರದಲ್ಲಿಯ ಮುಸ್ಲಿಂರ ಮೇಲಿನ ದುರಾಢಳಿತದ ಹಿಜಾಬ್, ಹಲಾಲ್, ಅಝಾನ್, ಕೋಮು ಗಲಭೆ ಹಾಗೂ ಮುಸ್ಲಿಂರ ಹಕ್ಕಾದ ೪% ಮೀಸಲಾತಿಯನ್ನು ಕಡಿತಗೊಳಿಸಿದಾಗ ಮುಸ್ಲಿಂ ಸಮುದಾಯದ ಮೇಲೆ ಇಲ್ಲದ ಕಾಳಜಿ ಈಗ ಏಕಾಏಕಿ ಚುನವಣಾ ಸಮಯದಲ್ಲಿ ಬಂತೆ..?
ರಾಯಚೂರು ನಗರ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಕಾಂಗ್ರೆಸ್ ಹೈ-ಕಮಾಂಡ್ ಈ ಬಾರಿ ಕೆಲವು ತನ್ನದೇ ಆದ ಷರತ್ತುಗಳನ್ವಯ ಮತ್ತು ಸಾಮಾಜಿಕ ನ್ಯಾಯದಡಿ ಗೆಲ್ಲುವಂತಹ ಅಭ್ಯರ್ತಿ ಆಯ್ಕೆ ಮಾಡಲಿದೆ ಅದು ಮುಸ್ಲಿಂ ಆಗಲಿ ಅಥವಾ ಬೇರೆ ಸಮುದಾಯದವರು ಅಭ್ಯರ್ಥಿ ಆಗಲಿ, ಆದರೆ ರಾಯಚೂರು ನಗರ ಮುಸ್ಲಿಂ ಸಮುದಾಯ ಯಾವತ್ತಿದ್ದರೂ ಕಾಂಗ್ರೆಸ್ ಪಕ್ಕಕ್ಕೆ ಬೆಂಬಲಿಸುವ ಸಮುದಾಯ ಇದನ್ನ ತಾವುಗಳು ಬಿ.ಜೆ.ಪಿ.ಜೊತೆ ಸೇರಿ ನಮ್ಮ ಸಮುದಾಯದವರನ್ನು ಧೃವಿಕರಿಸುವುದು ಅಸಾದ್ಯ. ಈ ಬಾರಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ರಚನೆಯಾಗುತ್ತೆ ಮತ್ತು ರಾಯಚೂರು ನಗರದ ಯಾರೆ ಅಭ್ಯರ್ಥಿ ಆಗಲಿ ಎಲ್ಲಾ ನಾಯಕರು ಒಗ್ಗೂಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎಂದು ದೇವಸೂಗೂರು ಬ್ಲಾಕ್ ಅಲ್ಪ ಸಂಖ್ಯಾತರ ವಿಭಾಗದ ಕಾರ್ಯದರ್ಶಿಯಾದ ಇಂಜಿನೀಯರ್ ಮುಜಾಹಿದ್ ಮರ್ಚೆಡ್ ಪತ್ರಿಕೆಗೆ ಹೇಳಿಕೆ ನೀಡಿದರು.