ಈ ವರ್ಷ ಉತ್ತರ ಭಾರತದಲ್ಲಿ ಕಠಿಣ ದೀರ್ಘ ಚಳಿಗಾಲ

ನವದೆಹಲಿ, ಡಿ. ೨೫- ಈ ವರ್ಷ ಉತ್ತರ ಭಾರತದಲ್ಲಿ ಚಳಿಗಾಲವು ತ ಕಠಿಣ ಮತ್ತು ದೀರ್ಘವಾಗಿರುತ್ತದೆ.
ಜಾಗತಿಕ ಹವಾಮಾನ ತಂಪಾಗಿಸುವ ಪರಿಣಾಮವನ್ನು ಹೊಂದಿರುವ ಜಾಗತಿಕ ಹವಾಮಾನ ಮಾದರಿ ಲಾ ನಿನಾ ಹೆಚ್ಚು ಪ್ರಬಲವಾಗಿರುವುದರಿಂದ ಉತ್ತರ ಭಾರತದಲ್ಲಿ ಈ ವರ್ಷ ಚಳಿಗಾಲ ಕಠಿಣ ಮತ್ತು ದೀರ್ಘವಾಗಿ ಇರಲಿದೆ.
ಜಾಗತಿಕ ಹವಾಮಾನ ಮಾದರಿ ಲಾ ನಿನಾ ಕಳೆದ ಸೆಪ್ಟಂಬರ್ನಲ್ಲಿ ಆರಂಭವಾಗಿತ್ತು ಈಗ ಲಾ ನಿನಾ ಉಚ್ಛ್ರಾಯ ಸ್ಥಿತಿ ತಲುಪಿದ್ದು ಈ ಕಾರಣದಿಂದ ಉತ್ತರಭಾರತದಲ್ಲಿ ಚಳಿಗಾಲ ದೀರ್ಘ ಮತ್ತು ಕಠಿಣ ಎನಿಸಲಿದೆ.
ಜಾಗತಿಕ ಹವಾಮಾನ ಮಾದರಿ ಈ ಲಾ ನಿನಾದ ಪರಿಣಾಮ ಮುಂದಿನ ಬೇಸಿಗೆಯ ವರೆಗೂ ಇರಲಿದೆ ಮುಂದಿನ ಬೇಸಿಗೆಯ ಕೊನೆಯಲ್ಲಿ ಮಾತ್ರ ಲಾ ನಿನಾ ತಟಸ್ಥ ಸ್ಥಿತಿಗೆ ಮರಳಬಹುದು ಅಂದಾಜಿಸಲಾಗಿದೆ ಎಂದು ವಿವಿಧ ಹವಾಮಾನ ನಿಯತಾಂಕಗಳು ಹೇಳಿವೆ.
ವಿಶ್ವ ಹವಾಮಾನ ಸಂಸ್ಥೆ ಪ್ರಕಾರ ಸಹ (ಡಬ್ಲ್ಯುಎಂಒ) ಉತ್ತರ ಭಾರತದಲ್ಲಿ ದೀರ್ಘ, ಕಠಿಣ ಚಳಿಗಾಲವನ್ನು ಚಳಿಗಾಲ ಆಗಲಿದೆ ಇದು ಮುಂದಿನ ಮುಂಗಾರು ಮಾರುತದ ಮೇಲೂ ಪರಿಣಾಮ ಬೀರಲಿದೆ ಎಂದು ಹವಾಮಾನ ಸಂಸ್ಥೆ ಹೇಳಿದೆ.
ಮುಂದಿನ ಮೇ, ಜೂನ್ ಮತ್ತು ಜುಲೈನಲ್ಲಿ ಜಾಗತಿಕ ಹವಾಮಾನ ಮಾದರಿ ಲಾ ನಿನಾದ ಸ್ಥಿತಿಯನ್ನು ಅವಲಂಬಿಸಿ ಮುಂಬರುವ ಮಾನ್ಸೂನ್ ಮೇಲೆ ಪರಿಣಾಮ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ಅಂದಾಜಿಸಬಹುದು ಈಗಲೇ ಮಾನ್ಸೂನ್ ಮೇಲಿನ ಪರಿಣಾಮದ ಬಗ್ಗೆ ಹೇಳಲು ಸಾಧ್ಯವಿಲ್ಲ ಎಂದು ಹವಾಮಾನ ಸಂಸ್ಥೆ ಹೇಳಿದೆ.
ಜಾಗತಿಕ ಹವಾಮಾನ ಮಾದರಿ ಲಾ ನಿನಾದ ಪರಿಣಾಮಗಳ ಬಗ್ಗೆ ಅಂದಾಜಿಸಿರುವ ಜಾಗತಿಕ ಸಂಸ್ಥೆ ನ್ಯಾಷನಲ್ ಓಷಿಯಾನಿಕ್ ಮತ್ತು ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್ ಮಾರ್ಚ್ 2021 ರವರೆಗೆ ಲಾ ನಿನಾ ಮುಂದುವರಿಯುವ ಸಂಭವನೀಯತೆ ಶೇಕಡ 95ರಷ್ಟು ಇದೆ ಎಂದು ಅಂದಾಜಿಸಿದೆ.