ಈ ಭಾಗದ ಶೈಕ್ಷಣಿಕ ಅಭಿವೃದ್ಧಿ
 ಬಸವರಾಜೇಶ್ವರಿಯವರ ಕನಸು: ಭೂಪಾಲ್


(ಸಂಜೆವಾಣಿ ವಾರ್ತೆ)
ಬಳ್ಳಾರಿ: ಶೈಕ್ಷಣಿಕವಾಗಿ  ಹಿಂದುಳಿದ ಈ ಭಾಗದ ಪ್ರಗತಿಗಾಗಿ ಈ ಕಾಲೇಜು ಸೇರಿದಂತೆ ನಮ್ಮ ಸಂಸ್ಥೆಯ ಇತರೇ ಶಿಕ್ಷಣ ಶಾಲಾ ಕಾಲೇಜು ಆರಂಭಿಸಲು ಅಂದು ಸಂಸದರಾಗಿದ್ದ ನಮ್ಮ ತಾಯಿ  ಬಸವರಾಜೇಶ್ವರಿಯವರು  ಕನಸು ಕಂಡರು, ಅದು ಈಗ ಸಂಪೂರ್ಣ ನನಸಾಗಿದೆ ಎಂದು
 ಬಳ್ಳಾರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ ಮ್ಯಾನೇಜ್‌ಮೆಂಟ್ (ಬಿಐಟಿಎಂ) ನ ಅಧ್ಯಕ್ಷ ಡಾ. ಯಶವಂತ್ ಭೂಪಾಲ್ ಅವರು
ಹೇಳಿದರು
ಅವರು ನಿನ್ನೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಿ.ಇ. ಪ್ರಥಮ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳಿನ್ನು ಸ್ವಾಗತಿಸಿ ಮಾತನಾಡುತ್ತಿದ್ದರು.
ಅಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಮಾತ್ರ ಅತೀ ಹೆಚ್ಚಿನ ತಾಂತ್ರಿಕ ಕಾಲೇಜುಗಳು ಇದ್ದವು. ಹಿಂದುಳಿದ ಹೈದರಬಾದ್-ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೂ ಉನ್ನತ ತಾಂತ್ರಿಕ ಶಿಕ್ಷಣ ನೀಡಬೇಕು, ಶಿಕ್ಷಣ ಕಲ್ಪಿಸಬೇಕು, ನಮ್ಮ ಮಕ್ಕಳು ಕೂಡ ಎಲ್ಲರಂತೆ ಅಧ್ಯಯನ ಮಾಡಬೇಕು, ಉನ್ನತ ವ್ಯಾಸಂಗಕ್ಕೆ ಕಷ್ಟಪಡಬಾರದು ಎಂದು ಬಸವರಾಜೇಶ್ವರಿ ಅವರು ತೀರ್ಮಾನಸಿ, ತಾಂತ್ರಿಕ ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು.
ನಮ್ಮ ಸುತ್ತಮುತ್ತಲಿನ ಗ್ರಾಮೀಣ ಮಕ್ಕಳು, ಲೈನ್ ಮ್ಯಾನ್, ಶಿಕ್ಷಕರ ಮಕ್ಕಳು, ಹೀಗೇ ಹಲವಾರು ವಿದ್ಯಾರ್ಥಿಗಳು ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದು ಉನ್ನತ ಕ್ಷೇತ್ರದಲ್ಲಿ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದರು.
 ಕಾಲೇಜಿನ ಉಪ ನಿರ್ದೇಶಕ ವೈ.ಜೆ.ಪೃಥ್ವಿರಾಜ್ ಭೂಪಾಲ್  ಮಾತನಾಡಿ “ಬರೀ ಪದವಿಯಿಂದ ನೌಕರಿ ಸಿಗೋಲ್ಲ, ಅದಕ್ಕೆ ತಕ್ಕ ಉನ್ನತ ಶಿಕ್ಷಣವೂ ಅಗತ್ಯ. ಅದಕ್ಕಾಗಿ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು, ಒಂದು ವೇಳೆ ಇಲ್ಲದಿದ್ದರೂ ಒಳ್ಳೆಯದು. ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಬೇಕಾಗುವ ಎಲ್ಲಾ ರೀತಿಯ ಇಂಟರ್‌ನೆಟ್ ಮತ್ತು ಪ್ರಯೋಗಾಲಯಗಳ ಸೌಲಭ್ಯಗಳನ್ನು ಒದಗಿಸಲಾಗಿದೆ ಮತ್ತು ಪ್ಲೇಸ್‌ಮೆಂಟ್‌ಗೆ ಪೂರ್ವ ಸಿದ್ದತೆಯನ್ನು ವಿದ್ಯಾರ್ಥಿಗಳಿಗೆ ಮಾಡಲಾಗುವುದು ಎಂದರು.
ಟಿ.ಇ.ಹೆಚ್.ಆರ್.ಡಿ. ಟ್ರಸ್ಟ್ ನ ಅಧ್ಯಕ್ಷ ಡಾ.ಎಸ್.ಜೆ.ವಿ. ಮಹಿಪಾಲ್‌ ಅವರು ಮಾತನಾಡಿ “ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣವನ್ನು ಪಡೆದು ಭವಿಷ್ಯವನ್ನು ರೂಪಿಸಿಕೊಂಡು, ಭಾರತದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಕೊಡುಗೆಯನ್ನು ನೀಡಬೇಕೆಂದರು.
ಪ್ರಾಂಶುಪಾಲ ಡಾ. ಯಡವಳ್ಳಿ ಬಸವರಾಜ್‌ರವರು ಕಾಲೇಜಿನ ಸಮಗ್ರ ಮಾಹಿತಿಯನ್ನು ನೀಡಿದರು. ಉಪಪ್ರಾಚಾರ್ಯ ಡಾ. ಬಿ.ಎಸ್.ಕೇಣೆದ್  ಸಮಗ್ರ ಇಂಜಿನಿಯರಿಂಗ್ ಶಿಕ್ಷಣದ ಬಗ್ಗೆ ವಿವರಿಸಿದರು.
ಡೀನ್‌ಗಳಾದ ಡಾ.ವಿ.ಸಿ.ಪಾಟಿಲ್, ಡಾ. ಯು.ಈರಣ್ಣ, ವಿಭಾಗ ಮುಖ್ಯಸ್ಥರುಗಳಾದ ಡಾ.ಆರ್.ಎನ್.ಕುಲಕರ್ಣಿ, ಡಾ. ಬಿ.ಎಂ.ವಿದ್ಯಾವತಿ, ಡಾ.ವೆಂಕಟರಮಣ, ಡಾ.ಶರಣರೆಡ್ಡಿ, ಡಾ.ಕೆ.ಎಂ.ಸದ್ಯೋಜಾತ, ಡಾ.ಟಿ.ಹೆಚ್.ಪಾಟೀಲ್, ಡಾ.ಜನೆಟ್ ಡಿಸೋಜ, ಡಾ.ಟಿ.ಮಾಚಪ್ಪ, ಡಾ.ಕೆ.ಎಸ್.ಆರ್.ಶ್ರೀಧರ್, ಡಾ.ಸುರೇಶ್, ಆಡಳಿತಾಧಿಕಾರಿಗಳಾದ ಪಿ.ಅಮರೇಶಯ್ಯ ಪ್ರಾಧ್ಯಾಪಕರು ಮತ್ತು ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ಕೀರ್ತಿಕ ನಿರೂಪಿಸಿದರು, ಭಾಗ್ಯ ಪ್ರಾರ್ಥಿಸಿದರು