ಈ ಬಾರಿ ಹಂಪಿ ಉತ್ಸವ ಇಲ್ಲ: ಆನಂದ್ ಸಿಂಗ್

(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.04: ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಇಂದಿನ‌ ಪೀಳಿಗೆಗೆ   ಪರಿಚಯಿಸುವ  ಹಂಪಿ ಉತ್ಸವವನ್ನು ಸರ್ಕಾರ ಈ ವರ್ಷ ಆಚರಿಸುತ್ತಿಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ವಿಜಯನಗರ ಜಿಲ್ಲೆ ಉದ್ಘಾಟನೆ ಹಿನ್ನಲೆಯಲ್ಲಿ ಸರ್ಕಾರದಿಂದಲೇ 4.5 ಕೋಟುರೂ ಗೂ ಹೆಚ್ಚು ಅನುದಾನದಿಂದ  ವಿಜಯನಗರ ಉತ್ಸವ ಹಮ್ಮಿಕೊಂಡಿದ್ದರಿಂದ ಮತ್ತೆ ಹಂಪಿ ಉತ್ಸವ ಮಾಡಲಾಗುತ್ತಿಲ್ಲ.
ಮುಂದಿನ ವರ್ಷ ದಿ.ಎಂ.ಪಿ.ಪ್ರಕಾಶ್ ಅವರ ಆಶಯದಂತೆ ನವೆಂಬರ್ 3.4. ಮತ್ತು 5 ರಂದು‌ ಮೂರು ದಿನಗಳ ಕಾಲ‌  ಹಂಪಿ ಉತ್ಸವ ನಡೆಸಲಿದೆ.  ಹಂಪಿ ಉತ್ಸವಕ್ಕೆ ಸರ್ಕಾರ ಮೈಸೂರು ದಸರಾಗೆ ನೀಡಿದಂತೆ ಪ್ರತಿವರ್ಷ ಬಜೆಟ್ ನಲ್ಲಿಯೇ 10 ಕೋಟಿ ರೂ ಮೀಸಲಿಡಲು ನ 8 ರಂದು ಕರೆದಿರುವ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಕ್ಕೆ ಒತ್ತಾಯಿಸಲಿದೆಂದು ಹೇಳಿದರು.
ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಹೊಸಪೇಟೆಯಲ್ಲಿ ವಿಜಯನಗರ ಉತ್ಸವ ಹಮ್ಮಿಕೊಳ್ಳಬೇಕು ಎಂಬ ಬೇಡಿಕೆಯೂ ಇದ್ದು ಈ‌ ಬಗ್ಗೆ ಸ್ಥಳೀಯರ ಜೊತೆ ಸಮಾಲೋಚನೆ ನಡೆಸಿ ತೀರ್ಮಾನಿಸುವಿದಾಗಿ ಹೇಳಿದ್ದಾರೆ.