ಈ ಬಾರಿ ಸಂಪೂರ್ಣ ಅಭಿವೃದ್ಧಿಪರ ಬಜೆಟ್ : ಕಾಂತಾ ನಾಯಕ

ವಿಜಯಪುರ:ಜು.8: ಮುಖ್ಯಮಂತ್ರಿ ಸಿದ್ಧರಾಮಯ್ಯ 2023-24ನೇ ರಾಜ್ಯ ಬಜೆಟ್ ಮಂಡಿಸಿದ್ದು, ಈ ಬಜೆಟ್ ಸಂಪೂರ್ಣ ಮಹಿಳಾ ಪರ, ರೈತಪರ ಹಾಗೂ ಒಟ್ಟಾರೆ ಅಭಿವೃದ್ಧಿಪರ ಬಜೆಟ್ ಆಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಇ ಬಾರಿಯ ಬಜೆಟ್‍ನಲ್ಲಿ ಒಟ್ಟು 3 ಲಕ್ಷ 27 ಸಾವಿರ ಕೋಟಿ ರೂ ಗಾತ್ರವಾಗಿದ್ದು ಅದರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 24166 ಕೋಟಿ ಮೀಸಲಿಟ್ಟಿದ್ದು, ಮಹಿಳಾ ಉದ್ದೇಶಿತ ಯೋಜನೆಗಳಿಗೆ 70,427 ಕೋಟಿ ರೂ ಘೋಷಣೆ ಮಾಡಿದ್ದು ಸರಕಾರ ಮಹಿಳಾ ಪರ ಕಾಳಜಿಯನ್ನು ತೋರಿದೆ ಮತ್ತು ಶಿಕ್ಷಣ ಇಲಾಖೆಗೆ 37597 ಕೋಟಿ, ಆರೋಗ್ಯ ಮತ್ತು ಕುಟುಂಬ ಇಲಾಖೆಗೆ 14950 ಕೋಟಿ ರೂ ಸೇರಿದಂತೆ ಹಲವಾರು ಇಲಾಖೆಗೆ ಬಜೆಟ್‍ನ್ನು ಹಂಚಿಕೆ ಮಾಡಲಾಗಿದೆ. ಒಟ್ಟಾರೆ ಈ ಬಜೆಟ್‍ನಲ್ಲಿ ಮಹಿಳೆಯರಿಗೆ, ಶಿಕ್ಷಣಕ್ಕೆ, ರೈತರಿಗೆ ಒತ್ತನ್ನು ನೀಡಲಾಗಿದ್ದು, ಹಸು, ಎತ್ತು, ಎಮ್ಮೆ ಮೃತ ಪಟ್ಟರೆ 10 ಸಾವಿರ ಪರಿಹಾರವನ್ನು ಸಹ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ ಮತ್ತು ಎಪಿಎಂಸಿ ಕಾಯ್ದೆಯನ್ನು ಸಹ ವಾಪಸ್ಸು ಪಡೆದುಕೊಳ್ಳುವ ನಿರ್ಧಾರವನ್ನು ಸರಕಾರ ಮಾಡಿದ್ದು ಇದು ರೈತರಿಗೆ ನೇರವಾಗಲಿದೆ ಹೀಗೆ ಸಮಗ್ರ ಅಭಿವೃದ್ಧಿ ಸರಕಾರದ ಗುರಿಯಾಗಿದೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವಲ್ಲಿ ಕಾಂಗ್ರೆಸ್ ಸರಕಾರ ಶ್ರಮಿಸುತ್ತಿದೆ. ಸಿದ್ಧರಾಮಯ್ಯನವರ ನೆತೃತ್ವದಲ್ಲಿ ನಮ್ಮ ಸರಕಾರ ನುಡಿದಂತೆ ನಡೆದಿದೆ. ಕೊಟ್ಟಿರುವ ಪ್ರಣಾಳಿಕೆಯ ಮಾತುಗಳನ್ನು ಇಡೇರಿಸುವ ಮೂಲಕ ಜನರ ಭರವಸೆಯನ್ನು ಕಾಂಗ್ರೆಸ್ ಸರಕಾರ ಉಳಿಸಿಕೊಂಡಿದ್ದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಮೂಲ ಮಂತ್ರದೊಂದಿಗೆ ಕರ್ನಾಟಕದ ಕಾಂಗ್ರೆಸ್ ಸರಕಾರ ಮಾದರಿಯ ಆಡಳಿತವನ್ನು ನೀಡುತ್ತಿದ್ದೆ. ಇಗಾಗಲೇ ಕೊಟ್ಟಿರುವ ಐದು ಭರವಸೆಗಳಲ್ಲಿ ಗ್ರಹ ಜ್ಯೋತಿ, ಅನ್ನ ಭಾಗ್ಯ ಯೋಜನೆ ಹಾಗೂ ಶಕ್ತಿ ಯೋಜನೆ ಜಾರಿಗೆ ಬಂದಿವೆ ಇನ್ನು ಗ್ರಹ ಲಕ್ಷ್ಮೀ ಮತ್ತು ಯುವನಿಧಿ ಯೋಜನೆಗಳನ್ನು ಜಾರಿಗೆ ತರಲು ಸಿದ್ಧತೆಗಳು ನಡೆದಿವೆ. ಸರಕಾರ ಯೋಜನೆಗಳ ಜೊತೆಗೆ ಈ ಬಾರಿ ಅತ್ಯುತ್ತಮ ಬಜೆಟ್ ಮಂಡನೆ ಮಾಡಿದ್ದು, ಕಾಂಗ್ರೆಸ್ ಸರಕಾರ ಸದಾ ಜನಪರ ಎಂಬುದನ್ನು ಮತ್ತೊಂಮ್ಮೆ ಸಾಭಿತು ಮಾಡಿದೆ. ಇನ್ನು ವಿಜಯಪೂರ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಈ ವರ್ಷವೇ ಪೂರ್ಣಗೊಳಿಸಿ ಸೇವೆ ಆರಂಭಿಸಲು ನಿರ್ಧರಿಸಲಾಗಿದ್ದು ಶೀಘ್ರವೆ ವಿಜರಪುರ ಜನತೆಗೆ ಸಹಾಯವಾಗಲಿದೆ ಎಂದು ತಿಳಿಸಿದರು.