ಈ ಬಾರಿ ನನಗೆ ಆಯ್ಕೆಯ ವಿಶ್ವಾಸ:ಪ್ರತಾಪ್ ರೆಡ್ಡಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,3- ಕಳೆದ ಬಾರಿ ಮತದಾರರು ಮತ ಚಲಾಯಿಸುವಲ್ಲಿ ಮಾಡಿದ ಕೆಲ ತಪ್ಪುಗಳಿಂದ ಸೋಲು ಕಾಣುವಂತಾದ ನನಗೆ ಈ ಬಾರಿ ಆಯ್ಕೆಯಾಗುವ ವಿಶ್ವಾಸ ಇದೆ ಎಂದು ವಿಧಾನ ಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ನಾರಾ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಅವರು ಇಂದು ನಗರದ ಬಾಲ ಭಾರತಿ  ಶಾಲೆಯ ಮತಗಟ್ಟೆಯಲ್ಲಿ ಪತ್ನಿ ಶೈಲಜ ಹಾಗು ಕುಟುಂಬದ ಸದಸ್ಯರೊಂದಿಗೆ  ಮತ ಚಲಾಯಿಸಿ ನಂತರ ಸಂಜೆವಾಣಿಯೊಂದಿಗೆ ಮಾತನಾಡಿದರು.  ಕಳೆದ ಬಾರಿ ಅತ್ಯಲ್ಪ ಮತಗಳಿಂದ ಸೋಲುವಂತಾಯ್ತು. ಅದಕ್ಕೆ ಕುಲಗೆಟ್ಟ ಮತಗಳು ಕಾರಣವಾದವು. ಈ ಬಾರಿ ಶುಶಿಕ್ಷತ ಮತದಾರರಿಗೆ ಮತದಾನ ಮಾಡುವ ಕುರಿತು ವಿವರವಾಗಿ ತಿಳಿಸಿದೆ. ಕಳೆದ ಬಾರಿಯಾದ ತಪ್ಪು ಈ ಬಾರಿ ಕಡಿಮೆ ಪ್ರಯಾಣವಾಗಲಿದೆ.
ಸೋತರೂ ನಾನು ಸೋಲೇ ಗೆಲುವಿನ ಮೆಟ್ಟಿಲು ಎನ್ನುವಂತೆ ಕ್ಷೇತ್ರದ ಮತದಾರರ ಬಳಿ ನಿರಂತರ ಸಂಪರ್ಕವಿಟ್ಟುಕೊಂಡು ಕಳೆದ ಒಂದು ವರ್ಷದಿಂದ ಮತದಾರರ ನೋಂದಣಿ ಮತ್ತು ಮತದಾನ ಮಾಡುವ ವಿಧಾನ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಮತ್ತು ನೇರವಾಗಿ ಭೇಟಿ ನೀಡಿ ತಿಳಿಸಿರುವೆ. ಬಳ್ಳಾರಿ ಭಾಗದಲ್ಲಿ ಈ ಭಾಗಕ್ಕೆ ಆದ್ಯತೆ ನೀಡಲು ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.  ಇತರಡೆಗಳಲ್ಲೂ ಎರೆಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಬಗ್ಗೆ ಒಲವಿಲ್ಲದ ಮತದಾರ ನನ್ನ ಬೆಂಬಲಕ್ಕೆ ನಿಂತಿದ್ದು ಗೆಲುವಿನ ವಿಶ್ವಾಸ ಹೆಚ್ಚಿದೆಂದು ಹೇಳಿದ್ದಾರೆ.