ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ:ಮೋದಿ

ವಿಜಯಪುರ,ಏ 30 : ನನ್ನ ಕೊನೆಯ ಚುನಾವಣೆ ಮತ ಕೊಡಿ ಎಂದು ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ನಾಯಕರು ಮತ ಕೇಳುತ್ತಿದ್ದಾರೆ, ಆದರೆ ಯುವಕರೇ ಇರಲಿ, ಮಹಿಳೆಯರೇ ಇರಲಿ, ದಲಿತರೇ ಇರಲಿ, ಆದಿವಾಸಿಗಳೇ ಇರಲಿ ಉತ್ಸಾಹಭರಿತ ಬಿಜೆಪಿಗೆ ಮತ ನೀಡಲು ನಿರ್ಧರಿಸಿದ್ದಾರೆ, ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ರಚನೆಗೆ ನಿರ್ಧರಿಸಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ವಿಜಯಪುರದ ಸೈನಿಕ ಶಾಲೆಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನುದ್ದೇಶಿಸಿ ಸಂದೇಶದುದ್ದಕ್ಕೂ ಡಬಲ್ ಇಂಜಿನ್ ಸರ್ಕಾರದ ಯಶಸ್ಸುಗಳನ್ನು ಉಲ್ಲೇಖಿಸಿದರು. ಬಸವಣ್ಣನವರ ಆಶಯಗಳನ್ನು ಇಡೇರಿಸುವ ನಿಟ್ಟಿನಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾರ್ಥಕತೆ ಕುರಿತು ಸುದೀರ್ಘವಾಗಿ ವಿವರಿಸಿದರು.
ಗರೀಬಿ ಹಟಾವೋ ಹೆಸರಿನಲ್ಲಿ ರೂಪಿಸಿದ ಅನೇಕ ಯೋಜನೆಗಳಿಂದ ಏನೂ ಪ್ರಯೋಜನವಾಗಿಲ್ಲ, ಭ್ರಷ್ಟಾಚಾರ ಮಾತ್ರ ಜನರಿಗೆ ಕೊಡುಗೆಯಾಗಿ ಸ್ವೀಕರಿಸಿತು, ಕಾಂಗ್ರೆಸ್ ಪ್ರಧಾನಮಂತ್ರಿ ಹೇಳಿದಂತೆ ಕೇಂದ್ರ ಸರ್ಕಾರದಿಂದ 1 ರೂ. ಬರುತ್ತದೆ ಇಲ್ಲಿಗೆ ಬಂದು ಮುಟ್ಟಲು 15 ಪೈಸೆ ಅಷ್ಟೇ ಬರುತ್ತದೆ, ಶೇ.85 ಅನುದಾನ ಭ್ರಷ್ಟಾಚಾರ, ಪ್ರಧಾನಮಂತ್ರಿಯೊಬ್ಬರು ಇದನ್ನು ಸಾರಿದ್ದರು, ಪಂಚಾಯತನಿಂದ ಪಾರ್ಲಿಮೆಂಟ್‍ವರೆಗೆ ಕಾಂಗ್ರೆಸ್ ಸರ್ಕಾರ ಲೂಟಿಯನ್ನು ತಡೆಗಟ್ಟಲು ಏನೂ ಮಾಡಲಿಲ್ಲ, ಬಡವರ ಕಣ್ಣೀರು ಒರೆಸಲಿಲ್ಲ, ಇಂದಿನ ಪರಿಸ್ಥಿತಿಗೆ ಹೋಲಿಕೆ ಮಾಡಿ ನೋಡಿದಾಗ ಬಡವರ ದೊಡ್ಡ ಪ್ರಮಾಣದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೆ ಇಂದು ಬಿಜೆಪಿ ಸರ್ಕಾರದ ಸಾರಥ್ಯದಲ್ಲಿ 29 ಲಕ್ಷ ಕೋಟಿ ರೂ. ಹಣವನ್ನು ಬಿಪಿಟಿ ಮೂಲಕ ಯೋಜನಾ ಫಲಾನುಭವಿಗಳಿಗೆ ಅವರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಬರುವ 100 ರೂ. ಅನುದಾನ ಪೂರ್ಣಪ್ರಮಾಣದಲ್ಲಿ 100 ರೂ. ಫಲಾನುಭವಿಗಳಿಗೆ ದೊರಕುತ್ತಿದೆ ಎಂದರು. ಕಾಂಗ್ರೆಸ್ ಈ ಕಾರ್ಯ ಮಾಡಿದ್ದರೆ ಬಡವರ ಹಕ್ಕಿನ ಶೇ.85 ರಷ್ಟು ಹಣ ಮಾಯ ಆಗುತ್ತಿರಲಿಲ್ಲ, ಅದೇ ಕಾಂಗ್ರೆಸ್ ಸರ್ಕಾರ ಇದ್ದರೆ 24 ಲಕ್ಷ ಕೋಟಿ ರೂ. ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿತ್ತು. ಡಬಲ್ ಇಂಜಿನ್ ಸರ್ಕಾರ ಇದೇ ಹಣ ಬಳಸಿ ಬಡವರಿಗೆ ಪಡಿತರ ನೀಡುತ್ತಿದೆ, ಕಾಂಗ್ರೆಸ್ ಸರ್ಕಾರ ಅನ್ನದಾತನ ಹೆಸರಿನಲ್ಲಿ ಘೋಷಣೆ ಘೋಷಿಸುತ್ತಿತ್ತು, ಆದರೆ ಬಡ ರೈತರಿಗೆ ಯಾವ ಪ್ರಯೋಜನ ದೊರಕಿಲ್ಲ, ಕಿಸಾನ್ ಸಮ್ಮಾನ ಯೋಜನೆ 1.5 ಲಕ್ಷ ಕೋಟಿ ರೂ. ಕರ್ನಾಟಕಕ್ಕೆ 600 ಕೋಟಿ ರೂ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಈ ಹಣ ಯಾವತ್ತೂ ನಿಮಗೆ ಸೇರುತ್ತಿರಲಿಲ್ಲ ಎಂದು ಗುಡುಗಿದರು. ಅನ್ನದಾತನ ಸಮಸ್ಯೆಯನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲಿಲ್ಲ. ಆದರೆ ಬಿಜೆಪಿ ಅನ್ನದಾತನ ಸಮಸ್ಯೆಗಳ ಮೇಲೆ ಅರಿವಿದೆ, ಪಂಚನಾದಿಗಳ ಬೀಡಿದ್ದರೂ ನೀರಾವರಿಗೆ ದೊಡ್ಡ ಪ್ರಯತ್ನಗಳು ನಡೆಯಬೇಕಿದ್ದವೋ ಅಷ್ಟು ಪ್ರಯತ್ನ ಪ್ರಯತ್ನ ನಡೆದಿಲ್ಲ ಅನೇಕ ನೀರಾವರಿ ಯೋಜನೆಗಳ, ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಯುಕೆಪಿ ಮೂರನೇಯ ಹಂತದ ಕೃಷ್ಣಾ ಕೊಳ್ಳದ ನೀರಾವರಿ, ನಾರಾಯಣಪುರ ಜಲಾಶಯಕ್ಕೆ ಆಧುನಿಕ ಸ್ಪರ್ಶ, ಮುಳವಾಡ ಲಿಫ್ಟ್ ಇರಿಗೇಷನ್, ಹೊರ್ತಿ-ರೇವಣಸಿದ್ದೇಶ್ವರ ಯೋಜನೆ ಡಬಲ್ ಇಂಜಿನ್ ಸರ್ಕಾರದ ಮಾಡಿದ ಸಾಧನೆ ದೊಡ್ಡದಿದೆ ಎಂದರು. ಕಾಂಗ್ರೆಸ್ ಸರ್ಕಾರದ ಅಲಕ್ಷ್ಯದಿಂದ ತೊಂದರೆ ಎದುರಿಸಿದ್ದು ಮಹಿಳೆಯರು. ಮಹಿಳೆಯರ ಸುರಕ್ಷತೆ, ಉದ್ಯೋಗದ ಬಗ್ಗೆ ಚಿಂತೆಯೇ ಮಾಡಿಲ್ಲ. ಡಬಲ್ ಇಂಜನಿನ್ ಸರ್ಕಾರ ಆಯಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ಯೋಜನೆ ಜಾರಿ ಮಾಡಿ ಮಹಿಳೆಯರಿಗೆ ಆರೋಗ್ಯದ ಅಭಯ ನೀಡಿದೆ ಎಂದರು. ಕಾಯಕ, ದಾಸೋಹದ ಮಾರ್ಗವನ್ನು ಅಣ್ಣ ಬಸವಣ್ಣ ತೋರಿದ್ದಾರೆ. ಬಿಜೆಪಿಯ ವಿಚಾರಧಾರೆಯಾಗಿರುವ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ ಎನ್ನುವ ಉಕ್ತಿಗೆ ಬಸವಣ್ಣನವರ ಆಶಯವೇ ಆಧಾರ, ಅಣ್ಣ ಬಸವಣ್ಣನವರ ಕಾಯಕ-ದಾಸೋಹದ ಪ್ರಭಾವ ಬಿಜೆಪಿ ಎಲ್ಲ ಯೋಜನೆಗಳಲ್ಲಿ ಕಾಣಿಸಿಗುತ್ತಿದೆ, ಬಿಜೆಪಿ ಸರ್ಕಾರ ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ ಪ್ರಾತಿನಿಧ್ಯ, ಆರ್ಥಿಕ-ಸಾಮಾಜಿಕ ಸುರಕ್ಷೆ ನೀಡಿದೆ, 9 ಲಕ್ಷ ಕುಟುಂಬಗಳಿಗೆ ಅನೇಕ ಪೀಳಿಗೆಯ ನಂತರ ಪಕ್ಕಾ ಮನೆಯಲ್ಲಿ ಪಾದಾರ್ಪಣೆ ಮಾಡಿದ್ದಾರೆ, ದಲಿತ, ಶೋಷಿತರು, ಹಿಂದುಳಿದ ವರ್ಗಗಳ ಕುಟುಂಬದವರೇ ಹೆಚ್ಚು ಎಂದು ಮೋದಿ ಉಲ್ಲೇಖಿಸಿದರು. ಅಭಿವಂದನ ಪತ್ರದ ಕಾಣಿಕೆ ಸಹಸ್ರಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ಅಭಿವಂದನ ಪತ್ರದ ಭಾವಚಿತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಲಾಯಿತು. ಸೈನಿಕ ಶಾಲೆಯಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಮೋದಿ ಆಗಮಿಸುತ್ತಿದ್ದಂತೆ ಮೋದಿ ಮೋದಿ ಎಂಬ ಘೋಷಣೆಯನ್ನು ಮೊಳಗಿದರು. ಕನ್ನಡದಲ್ಲಿ ಮೋದಿ ಮಾತು ಕನ್ನಡದಲ್ಲಿ ಮಾತುಗಳನ್ನಾಡಿದ ಪ್ರಧಾನಿ ಮೋದಿ ಅವರುಪಂಚನದಿಗಳ ನಾಡು ವಿಜಯಪುರದ ಎಲ್ಲ ಜನತೆಗೆ ನಮಸ್ಕಾರಗಳು…ಎಂದು ಕನ್ನಡದಲ್ಲಿಯೇ ಉಲ್ಲೇಖಿಸಿದರು. ಅದೇ ತೆರನಾಗಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ…ಎನ್ನುವ ಸಾಲುಗಳನ್ನು ಕನ್ನಡದಲ್ಲಿ ಹಲವಾರು ಬಾರಿ ಉಚ್ಚರಿಸಿದರು.
ಮೋದಿ ಎಂದರೆ ಭ್ರಷ್ಟರಿಗೆ ಸಿಂಹಸ್ವಪ್ನ
ಹಿಂದಿಯಲ್ಲಿ ತಮ್ಮ ಸಂದೇಶ ನೀಡಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ದೇಶಕ್ಕಾಗಿ ನಾವು ಪ್ರಾಣ ತ್ಯಾಗ ಮಾಡಲು ಸಿದ್ಧ, ನಾವು ಭಾರತದ ಅಪಮಾನ ಯಾವ ಕಾಲಕ್ಕೂ ಸಹಿಸುವುದಿಲ್ಲ, ಪ್ರತಿಪಕ್ಷ ನಾಯಕರೇ ಕೆಟ್ಟ ನಾಲಿಗೆಯಿಂದ ನಮ್ಮ ನಾಯಕರನ್ನು ಟೀಕಿಸಿದರೆ ಅದೇ ಪರಿಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದರು.
ನೇತಾಜಿ ಸುಭಾಸಚಂದ್ರ ಭೋಸ್ ಅವರ ಅಪರಾವತಾರರಾಗಿರುವ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಭಾರತ ವಿಶ್ವಗುರುವಾಗಿ ಮುನ್ನಡೆಯುತ್ತಿದೆ ಎಂದರು.
ಮೋದಿ ಎಂದರೆ ದೇಶ, ಮೋದಿ ಎಂದರೆ ರಕ್ಷಣೆ, ಮೋದಿ ಎಂದರೆ ಹಿಂದೂತ್ವ, ಮೋದಿ ಎಂದರೆ ಭ್ರಷ್ಟರಿಗೆ ಸಿಂಹ ಸ್ವಪ್ನ, ಮೋದಿ ಎಂದರೆ ಪ್ರಾಮಾಣಿಕತೆ, ಮೋದಿ ಎಂದರೆ ಸಂಸ್ಕøತಿ, ಮೋದಿ ಎಂದರೆ ದೂರದೃಷ್ಟಿ, ಮೋದಿ ಎಂದರೆ ಅಜಾತಶತ್ರು ಎಂದು ಯತ್ನಾಳ ಉಲ್ಲೇಖಿಸಿದರು.
ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ, ಶಾಸಕ ಹಾಗೂ ಮುದ್ದೇಬಿಹಾಳ ಬಿಜೆಪಿ ಅಭ್ಯರ್ಥಿ ಎ.ಎಸ್. ಪಾಟೀಲ ನಡಹಳ್ಳಿ, ಶಾಸಕ ಹಾಗೂ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ, ಬಬಲೇಶ್ವರ ಅಭ್ಯರ್ಥಿ ವಿಜುಗೌಡ ಪಾಟೀಲ, ಇಂಡಿ ಅಭ್ಯರ್ಥಿ ಕಾಸುಗೌಡ ಬಿರಾದಾರ, ನಾಗಠಾಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳಿ, ಸಿಂದಗಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ, ಜಮಖಂಡಿವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ ಗುಡಗಂಟಿ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಪಿ.ಎಚ್. ಪೂಜಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.


ನನ್ನ ನಮಸ್ಕಾರ ತಲುಪಿಸುವಿರಾ?
ನನ್ನ ಕೆಲಸ ಮಾಡುವೀರಾ? ನನ್ನ ಕೆಲಸ ಮಾಡಬೇಕು, ನೀವು ನನ್ನನ್ನು ಕರೆದಿದ್ದೀರಿ, ನಾನು ಬಂದಿದ್ದೇನೆ, ಒಂದು ಸಣ್ಣ ಕೆಲಸವಿದೆ, ಅದನ್ನು ನೀವು ಮಾಡಬೇಕು, ಮಾಡುತ್ತೀರಾ ಎಂದು ಆತ್ಮೀಯತೆಯಿಂದ ಪ್ರಶ್ನಿಸಿದರು.
ನನ್ನ ಕೆಲಸವನ್ನು ನೀವು ಮಾಡಲೇಬೇಕು, ಆ ಕೆಲಸ ಏನೆಂದರೆ ಪ್ರತಿ ಮನೆಗೆ ಹೋಗಿ ನಮಸ್ಕಾರ ಮಾಡಿ, ಮೋದಿ ನಿಮ್ಮ ಸೇವಕ ದೆಹಲಿಯಿಂದ ವಿಜಯಪುರಕ್ಕೆ ಬಂದಿದ್ದರು, ಅವರ ನಮಸ್ಕಾರವನ್ನು ನಿಮಗೆ ತಿಳಿಸಿದ್ದಾರೆ ಎಂದು ಹೇಳಿ, ಮೋದಿ ಅವರಿಗೆ ನಿಮ್ಮ ಆಶೀರ್ವಾದ ಬೇಕಾಗಿದೆ ಎಂದು ಹೇಳುವಿರಾ ಎಂದು ಉತ್ಸಾಹಭರಿತವಾಗಿ ಮೋದಿ ಕಾರ್ಯಕರ್ತರಿಗೆ ಕೋರಿದರು.