ಈ ಪೋಟೋ ತೆರವುಗೊಳಿಸಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜೂ,12-  ನಗರದಲ್ಲಿ ದಾನಿಗಳ ಸಹಕಾರದಿಂದ ನಗರಾಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಮಾಡಿದ ಸಿಟಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಬಿಜೆಪಿ ನಾಯಕರ ಪೋಟೋ ತೆರವುಗೊಳಿಸಲು ಸಾಮಾಜಿಕ ಕಾರ್ಯಕರ್ತ ಮೇಕಲ ಈಶ್ವರ ರೆಡ್ಡಿ ಕೋರಿದ್ದಾರೆ.
ಈ ಅಧಿಕಾರದಲ್ಲಿದ್ದ ಯಡಿಯೂರಪ್ಪ, ಶ್ರೀರಾಮುಲು, ಗಾಲಿ ಸೋಮಶೇಖರ ರೆಡ್ಡಿ ಅವರ ಪೋಟೋ ಅಳವಡಿಸಿತ್ತು. ಈಗ ಅವರು ಅಧಿಕಾರದಲ್ಲಿ ಇಲ್ಲ. ಅವನ್ನು ತೆಗೆದು ಈಗ ಅಧಿಕಾರದಲ್ಲಿರುವವರ ಪೋಟೋ ಅಳವಡಿಸಿ ಎಂದಿದ್ದಾರೆ.