ಈ ನೆಲದ ಧರ್ಮಗಳಿಗೆ ಸಂವಿಧಾನವೇ ರಕ್ಷಣೆಃ ನಜ್ಮಾ ನಜೀರ

ಬೀದರ:ಮಾ.14: ನಗರದ ಕರ್ನಾಟಕ ಸಾಹಿತ್ಯ ಸಾಂಸ್ಕøತಿಕ ಸಭಾಂಗಣದಲ್ಲಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾ ಘಟಕದ ಬೀದರ ವತಿಯಿಂದ 75 ನೇ ಗಣರಾಜ್ಯೋತ್ಸವ , ಎರಡನೆ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಭಾಷಣವನ್ನು ಹೋರಾಟಗಾರತಿ ನಜ್ಮಾ ನಜೀರ ಬೆಂಗಳೂರು ರವರು ಮಾಡಿದರು. ಹಿಂದು ಧರ್ಮದಲ್ಲಿರುವ ಪರಂಪರೆ ಸಂಸ್ಕಾರಗಳಲ್ಲಿರುವ ಮೇಲು ಕೀಲು ಎನ್ನುವ ಅಸಮಾನತೆಗಳು ತೇಗೆದಾಗ, ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಎಲ್ಲಾ ಧರ್ಮಗಳ ತಿರುಳು ಒಂದೆ ಮಾನವ ಕುಲದ ಕಲ್ಯಾಣ ಅದಕ್ಕಾಗಿ ಬುದ್ದ ರಾಜ್ಯವೈಭವ ಬಿಟ್ಟು ಕಾಡಿಗೆ ಹೋಗಿ ಧರ್ಮದ ಸುಜ್ಞಾನ ಪಡೆದು ವಿಶ್ವದ ನೆಲದೊಳಗೆ ನಡೆದಾಡಿ ಪ್ರಿತಿ ಕರಣು ಮಮತೆ ಸಮತೆ ಶೀಲ ಹಂಚಿದ ರಂಜಾನದಲ್ಲಿ ಉಪವಾಸ ವೃತ್ತದ ಮೂಲಕ ಶಾಂತಿ ಸಮೃದ್ಧಿ ನೆಮ್ಮದಿ ಬದುಕಿಗೆ ಹೇಳಿಕೊಟ್ಟಪಾಠವಾಗಿದೆ. ಶಿಖ್ಖ ಧರ್ಮ ಸದಾ ಶಾಂತಿಯನ್ನು ಬಯಸುತ್ತದೆ. ಇದ್ದದರಲ್ಲಿ ಇನ್ನೊಬ್ಬರಿಗೆ ಹಂಚುವ, ಜೈನ ಧರ್ಮ ದಿಟ್ಟತನದ ಗುರಿ ಬದುಕಿನ ಅಹಿಂಸಾ ಮಾರ್ಗ ಕಲಿಸಿಕೊಡುತ್ತದೆ.12 ನೇ ಶತಮಾನದಲ್ಲಿ ಶರಣಸಂಕುಲವನ್ನು ಕಟ್ಟಿ ಜಾತಿ ಮತ ಮೀರಿ ಮನುಷ್ಯತ್ವಕ್ಕಾಗಿ ಸಮಾನತೆಗಾಗಿ ಕನ್ನಡ ವಚನ ಸಾಹಿತ್ಯದ ಮೂಲಕ ಸಂಘರ್ಷ ಮಾಡಿದ ಪ್ರಜಾಪ್ರಭುತ್ವದ ವಿಚಾರಗಳು ಅನುದಿನ ಮೈಮನಸ್ಸು ಕೂಡಿಸಿಕೊಂಡಾಗ, ಭಾರತದ ರಾಜ್ಯಾಂಗದ ಆಶಗಳು ಇಡೆರಿಸಲು ಸಾಧ್ಯವಾಗುತ್ತದೆ. ದಿವ್ಯ ಸಾನಿಧ್ಯ ಬಾಲಯೋಗಿ ಅಭಿನವ ಶರಣ ಶಂಕರಲಿಂಗ ಮಾರಾಜರು. ಭಂತೆ ಸಂಘರಕ್ಷಿತಾ ಸಂಭಾಜಿ ಮಾರಾಜ ವಿಜಯಪೂರ ವಹಿಸಿದರು ಶಿಕ್ಷಣ ಕಲಿಯುವುದೆಂದರೆ ಹುಲಿಯ ಹಾಲು ಕುಡಿದಂತೆ ಸಮಾಜ ಸುಧಾರಣೆಗಾಗಿ ಘರ್ಜನೆ ಮಾಡಲೇಬೇಕು. ಶಿಕ್ಷಣದ ಹುಲಿ ಹಾಲು ಕುಡಿದ ಅಂಬೇಡ್ಕರ ವಿಶ್ವ ದುಂಡುಮೇಜಿನಲ್ಲಿ ಘರ್ಜನೆ ಮಾಡಿದರಿಂದ ನಮ್ಮ ದೇಶಕ್ಕೆ ಸ್ವಾತಂತ್ರ?? ಸಮಾನತೆ ಸಿಗಲು ಸಾಧಯವಾಗಿದೆ. ಅನೀಲಕುಮಾರ ಬೆಲ್ದಾರ, ಅಮೃತರಾವ ಚಿಮಕೊಡ. ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಮಾಡಲಾದ ಕೆಲಸವನ್ನು ಕರ್ನಾಟಕ ಪ್ರಜಾಶಕ್ತಿ ಸಮಿತಿ ಮಾಡುತ್ತಿದೆ. ಸಂವಿಧಾನದ ಆಶಗಳು ಬಿತ್ತರಿಸುತ್ತಿದೆ. ಮುಖ್ಯ ಅತಿಥಿಗಳಾಗಿ ಬಾಬುರಾವ ಪಾಸ್ವಾನ ಶ್ರೀಪತರಾವ ದೀನೆ ಶಿವಕುಮಾರ ನೀಲಿಕಟ್ಟೆ, ಸಾಹಿತಿ ಸುಬ್ಬಣ್ಣ ಕರಕನಳ್ಳಿ ಬಸವರಾಜ ಮಾಳಗೆ, ವಿಶಾಲ ದೊಡ್ಡಿ ದೀಪಕ ಗಾದಗೆ, ಎಂ ಡಿ ಜಿಲಾನಿ ಅಂಬಾದಾಸ ಗಾಯಕವಾಡ ನಾಗಪ್ಪಾ ಮುಸ್ತಾಪೂರೆ ರವೀನಾ ಗೌತಮ ಮೇತ್ರೆ ರಮೇಶ ಪಾಶ್ವಾನ ನಗರ ಸಭೆ ಸದಸ್ಯ ಸೂರ್ಯಕಾಂತ ಸಾಧುರೆ, ಭಾಗವಹಿಸಿದರು ಕಾರ್ಯಕ್ರಮದ ಅಧ್ಯಕ್ಷತೆ ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಸಿಂಧೆ ವಹಿಸಿ ಧರ್ಮ ಸಮಾನತೆ ಚಿಂತನೆಗಳು ಇಂದಿನ ಜನರಿಗೆ ತಿಳಿಸುವುದು ಅನಿವಾರ್ಯವಾಗಿದೆ ಅದಕ್ಕಾಗಿ ಸರ್ವಧರ್ಮಗಳ ಸಮ್ಮೇಳನ ಕಾರ್ಯಕ್ರಮ ಮಾಡಿದ್ದೇವೆ. ಸುನೀಲ ಕಡ್ಡೆ ಯೇಸುದಾಸ ಅಲಿಯಂಬರ ತಂಡದವರು ಕ್ರಾಂತಿ ಗೀತೆಗಳನ್ನು ಹಾಡಿದರು. ಕರ್ನಾಟಕ ಪ್ರಜಾಶಕ್ತಿ ಸಮಿತಿ ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ. ಯುವ ಘಟಕದ ಅಧ್ಯಕ್ಷ ನಿತಿಶಕುಮಾರ ಸಕ್ಪಾಲ್ ಪ್ರಧಾನ ಕಾರ್ಯದರ್ಶಿ ಕಲ್ಲಪ್ಪಾ ಯರನಳ್ಳಿ ನಗರ ಅಧ್ಯಕ್ಷ ವಿನೋದಕುಮಾರ ಸಿಂಧೆ, ಯುವ ಹೋರಾಟಗಾರ ಸಂಗಮೇಶ ಭಾವಿದೊಡ್ಡಿ ರಜೀನಿಕಾಂತ ಕಾಂಬಳೆ ಮಂಗಲ ಮರ್ಕಲೆ ರಾಜಕುಮಾರ ಹೊನ್ನಿಕೇರೆ ರವಿ ಮೇತ್ರೆ ಬಸವರಾಜ ಭಾವಿದೊಡ್ಡಿ ಮಲ್ಲಿಕಾರ್ಜುನ ಮೊಳಕೇರೆ ಸತಿಶ ವಗ್ಗೆ ಧನರಾಜ ಮುಸ್ತಾಪೂರೆ ಸತೀಶ ರಕ್ಷೆ ಗುರುಲಿಂಗ ನೆಮತಬಾದ ಅಂಬ್ರಿಶ ದೊಡ್ಡಮನಿ ರಾಜಕುಮಾರ ದಂಡೆ ಸಂದೀಪ ಮೂಲಗೆ ಮುಂತಾದವರು ಭಾಗವಹಸಿದರು ಕಾರ್ಯಕ್ರಮದ ನಿರೂಪಣೆ ದಲಿತ ವಿದ್ಯಾರ್ಥಿ ಪರಿಷತ್ತು ಬೀದರ ಜಿಲ್ಲಾಧ್ಯಕ್ಷ ಸಸಂದಿಪ ಕಾಂಟೆ ಮಾಡಿದರು.