ಈ ನೀರು ಸೋರಿಕೆಗೆ ತಡೆ ಯಾವಾಗ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.12: ಕಳೆದ ಹಲವು ತಿಂಗಳಿಂದ ಈ ರೀತಿ ನೀರು ಸೋರಿಕೆ ನಗರದ ಶಾಸ್ತ್ರೀ ನಗರದಲ್ಲಿನ ಮದರ್ ಟ್ಯಾಂಕ್ ನಿಂದ ಆಗುತ್ತಿದ್ದು. ಪಾಲಿಕೆ ಇದನ್ನು ತಡೆಯುವ ಕಾರ್ಯ ಆಗಬೇಕಿದೆ.
ನಗರದ ಆರೇಳು ವಾರ್ಡುಗಳ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುತ್ತದೆ ಈ ಮದರ್ ಟ್ಯಾಂಕ್. ಇದಕ್ಕೆ ಅಲ್ಲಿಪುರ ಕೆರೆ ಮೊದಲಾದ ಕಡೆಗಳಿಂದ ನೀರು ಪಂಪ್ ಮಾಡಿದಾಗ ಬಹುತೇಕ ಸಂದರ್ಭಗಳಲ್ಲಿ ಈ ರೀತಿ ನೀರು ಸೋರಿಕೆ ಯಾಗುತ್ತದೆ. ಕಾರಣ ಪಂಪ್ ಮಾಡುವವರು ಓವರ್ ಪ್ಲೋ ಆದರು ಪಂಪ್ ಬಂದ್ ಮಾಡದೇ ಇರುವುದು, ಅಲ್ಲದೆ ಮದರ್ ಟ್ಯಾಂಕ್ ಸಹ ಒಂದಿಷ್ಟು ಸೋರಿಕೆ ಆಗುತ್ತಿರುವುದು.
ಇನ್ನು ಬೇಸಿಗೆ ಬಂತು. ಪ್ರತೀ  ಹನಿ ನೀರಿಗೂ ಮಹತ್ವ ಇರಲಿದೆ. ಈಗಾಗಲೇ ಹಲವು ಕಡೆ ನೀರಿನ ಸರಬರಾಜು ವಿಳಂಬ ಆಗುತ್ತಿದೆ. ಅದಕ್ಕಾಗಿ ಬೇಸಿಗೆಯ ದಿನದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಇಂತಹ ಸೋರಿಕೆ ತಡೆಯಬೇಕೆಂದು ಆಮ್ ಆದ್ಮಿ ಪಾರ್ಟಿ ಮುಖಂಡ. ಜೆ.ವಿ.ಮಂಜುನಾಥ್  ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.