ಈ ಗ್ರಾಮದಲ್ಲಿ ಕೆಂಪುಚೇಳುಗಳ ಹಾವಳಿ!

ಲಕ್ಷ್ಮೇಶ್ವರ,ಮೇ29: ತಾಲೂಕಿನ ಅಡರಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದಗಟ್ಟಿ ಗ್ರಾಮದಲ್ಲಿ ಇದೀಗ ಚೇಳುಗಳ ಹಾವಳಿ ಹೆಚ್ಚಾಗಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.
ಗ್ರಾಮದಲ್ಲಿ ಮಳೆಯಾದ ನಂತರ ಸಣ್ಣ ಮತ್ತು ದೊಡ್ಡ ದೊಡ್ಡ ಕೆಂಪು ಚೇಳುಗಳು ಕಾಣಿಸಿಕೊಳ್ಳುತ್ತಿದ್ದು ಮನೆಯ ಹೊರಗಡೆ ಬಯಲು ಜಮೀನುಗಳಲ್ಲಿ ಎಲ್ಲೆಂದರಲ್ಲಿ ಹಿಂಡು ಹಿಂಡಾಗಿ ಚೇಳುಗಳು ಅಡ್ಡಾಡುತ್ತಿದ್ದು ಗ್ರಾಮಸ್ಥರು ಇದರಿಂದಾಗಿ ಗೊಂದಲಕ್ಕೆ ಈಡಾಗಿದ್ದಾರೆ.
ದೊಡ್ಡ ದೊಡ್ಡ ಮಳೆ ಬಂದಾಗ ವಿಷ ಜಂತುಗಳು ಕಾಂಚಿಕೊಳ್ಳುವುದು ಸ್ವಾಭಾವಿಕ ಆದರೆ ಈ ಗ್ರಾಮದಲ್ಲಿ ಬರಿ ಚೇಳುಗಳೆ ಕಾಣಿಸಿಕೊಳ್ಳುತ್ತಿದ್ದು ಈ ಕುರಿತು ಗ್ರಾಮದ ಹಿರಿಯರಾದ ಫಕೀರಪ್ಪ ಮೇಲ್ಮನಿ ಈ ಹಿಂದೆ ಗುಡಿಸಲು ತಗಡಿನ ಮನೆಗಳಲ್ಲಿ ವಾಸವಾಗುತ್ತಿದ್ದಾಗ ಚೇಳುಗಳು ಕಾಣಿಸಿಕೊಳ್ಳುತ್ತಿದ್ದು ಈಗ ಬಹುತೇಕ ಮಾರ್ಪಾಡು ಆಗಿದ್ದರು ಮಳೆ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಚೇಳುಗಳು ಕಾಣಿಸಿಕೊಳ್ಳುತ್ತಿವೆ ಎಂದಿದ್ದಾರೆ.